Exclusive Photos: ಕೊಳವೆ ಬಾವಿಯಿಂದ ಹಿಡಿದು ಸಾವು ಗೆದ್ದ ಸಾತ್ವಿಕನ ಕ್ಷಣ ಕ್ಷಣದ ಫೋಟೋಗಳು ಇಲ್ಲಿವೆ

author-image
AS Harshith
Updated On
ಕೊಳವೆ ಬಾವಿಯಲ್ಲಿ ಬದುಕಿದ್ದೇ ಪವಾಡ.. ಸಾತ್ವಿಕ್‌ ನೋಡಿ ಅಚ್ಚರಿಗೊಂಡ ವೈದ್ಯರು; ಹೇಳಿದ್ದೇನು?
Advertisment
  • 16 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗು
  • ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ತೋಟದಲ್ಲಿ ನಡೆದ ದುರಂತ
  • ಕೊನೆಗೂ ಸಾವು ಗೆದ್ದ ಸಾತ್ವಿಕ.. ಪುಟಾಣಿ ಕಂದನ ರಕ್ಷಣಾ ಕಾರ್ಯಚರಣೆ ಫೋಟೋಗಳು ಇಲ್ಲಿವೆ

[caption id="attachment_56458" align="alignnone" width="800"]publive-imageದುರಂತ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ತೋಟದಲ್ಲಿ ನಿನ್ನೆ ದುರಂತವೊಂದು ನಡೆದು ಹೋಗಿತ್ತು. ನಗು ನಗುತ್ತಾ ಆಟವಾಡುತ್ತಿದ್ದ 2 ವರ್ಷದ ಕಂದಮ್ಮವೊಂದು ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿತ್ತು. ಸತೀಶ್, ಪೂಜಾ ದಂಪತಿಯ 2 ವರ್ಷದ ಮಗ ಸಾತ್ವಿಕ್ 16 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದನು.[/caption]

[caption id="attachment_56403" align="alignnone" width="800"]publive-imageಕೊಳವೆ ವಾವಿಯಲ್ಲಿ ಮಗು: ಬಾಲಕ ಸಾತ್ವಿಕ್​ ತಂದೆ ಸತೀಶ್ ಕಳೆದ ಎರಡು ದಿನಗಳ ಹಿಂದಷ್ಟೆ ತಮ್ಮ ತೋಟದಲ್ಲಿ ಬೋರ್​ವೆಲ್​ನ ಕೊರೆಸಿದ್ರು. 10 ಬೋರ್​ವೆಲ್​ ಕೊರೆಸಿದ್ದ ಸತೀಶ್​ಗೆ ಗಂಗಾತಾಯಿ ದರ್ಶನ ಭಾಗ್ಯ ನೀಡಿರಲಿಲ್ಲ. ಆದ್ರೆ ಕಳೆದ 2 ದಿನದ ಹಿಂದೆ ಕೊರೆಸಿದ್ದ 265 ಅಡಿ ಆಳದ ಈ ಬೋರ್​ವೆಲ್​ನಲ್ಲಿ ನೀರು ಸಿಕ್ಕಿತ್ತು. ಕುಟುಂಬದಲ್ಲಿ ಸಂತಸ ಮನೆಮಾಡಿತ್ತು. ಕೊಳವೇ ಬಾವಿಗೆ ಕೇಸಿಂಗ್​​ ಹಾಕೋದಷ್ಟೇ ಬಾಕಿ ಇತ್ತು. ನಿನ್ನೆ ತೋಟದ ಮನೆ ಬಳಿ ಪೂಜಾ ಪಾತ್ರೆ ತೊಳೆಯುತ್ತಿದ್ದ ವೇಳೆ ಸಾತ್ವಿಕ್ ನಾಪತ್ತೆಯಾಗಿದ್ದ. ಸುತ್ತಮುತ್ತ ಹುಡುಕಿ ಸಂಶಯದಿಂದ ಕೊಳವೆ ಬಾವಿಯನ್ನ ಇಣುಕಿದಾಗ ಗೊತ್ತಾಗಿದೆ ಸಾತ್ವಿಕ್ ಬೋರ್​ವೆಲ್​ಗೆ ಬಿದ್ದಿರೋದು ತಿಳಿದಿದೆ.[/caption]

[caption id="attachment_56304" align="alignnone" width="800"]publive-imageದೇವರಂತೆ ಧಾವಿಸಿದ ರಕ್ಷಕರು: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಸಾತ್ವಿಕ್​ನನ್ನ ರಕ್ಷಣೆ ಮಾಡುವ ಕಾರ್ಯಾಚರಣೆಗೆ ಇಳಿದರು. ಎರಡು ಜೆಸಿಬಿ ಹಾಗೂ 1 ಹಿಟಾಚಿ ಬಳಸಿ ಸಾತ್ವಿಕ್ ರಕ್ಷಣಾ ಕಾರ್ಯಾಚರಣೆಗೆ ಇಳಿದರು.[/caption]

[caption id="attachment_56370" align="alignnone" width="800"]publive-imageಕಲ್ಲು ಬಂಡೆ ಅಡ್ಡಿ: ಎಸ್​ಡಿಆರ್​ಎಫ್ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ಆರಂಭಿಸಿದ್ರು. ಬಾಲಕನ ಉಸಿರಾಟಕ್ಕೆ ತೊಂದರೆಯಾಗದಂತೆ ಆರೋಗ್ಯ ಸಿಬ್ಬಂದಿ ಕೊಳವೆ ಬಾಯಿಯೊಳಗೆ ಆಕ್ಸಿಜನ್ ಪೂರೈಕೆ ಮಾಡಿದ್ರು. ಅಲ್ಲದೇ ಕ್ಯಾಮೆರಾ ಮೂಲಕ ಬಾಲಕನ ಚಲನವಲನಗಳನ್ನ ಗಮನಿಸಲಾಗಿತ್ತು. ಈ ವೇಳೆ ಎಸ್​ಡಿಆರ್​ಎಫ್​ ಸಿಬ್ಬಂದಿಗೆ ಕಲ್ಲು ಬಂಡೆಗಳು ಸವಲಾಗಿ ಪರಿಣಮಿಸಿ ಕಾರ್ಯಾರಚಣೆಗೆ ಅಡ್ಡಿ ಉಂಟು ಮಾಡಿದ್ದವು.[/caption]

[caption id="attachment_56371" align="alignnone" width="800"]publive-imageದೇವರಿಗೆ ಹರಕೆ: ಸಾತ್ವಿಕ್ ರಕ್ಷಣಾ ಕಾರ್ಯಾಚರಣೆ ವೇಳೆ ಜಿಲ್ಲೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ರು. ಸಾವು ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದ ಕಂದಮ್ಮ ಸುಖವಾಗಿ ಹೊರಬರಲಿ ಅಂತ ತಂದೆ-ತಾಯಿ ಕಂಡ ಕಂಡ ದೇವರಿಗೆ ಹರಕೆ ಹೊತ್ತಿದ್ರು. ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಸಾವನ್ನ ಗೆದ್ದು ಬಾ ಸಾತ್ವಿಕ್ ಅಂತ ದೇವರಿಗೆ ಕೈಮುಗಿಯುತ್ತಾ ರಾತ್ರಿ ಇಡೀ ಕೊಳವೇ ಬಾಯ ಬಳಿಯೇ ಠಿಕಾಣಿ ಹೂಡಿದ್ರು.[/caption]

[caption id="attachment_56380" align="alignnone" width="800"]publive-imageಕ್ಯಾಮೆರಾದಲ್ಲಿ ಕಂದನ ಕಾಲು ಸೆರೆ: ಅಗ್ನಿಶಾಮಕ ದಳ, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಎಲ್ಲರೂ ರಾತ್ರಿ ಇಡೀ ಕಣ್ಣಿಗೆ ನಿದ್ದೆ ಇಲ್ಲದೇ ಸಾತ್ವಿಕ್​ನ ರಕ್ಷಣೆ ಮಾಡಲು ತೊಡಗಿದ್ದರು. ಈ ವೇಳೆ ಕ್ಯಾಮೆರಾದಲ್ಲಿ ಕಂದನ ಕಾಲುಗಳು ಸೆರೆಯಾಗಿತ್ತು.[/caption]

[caption id="attachment_56427" align="alignnone" width="800"]publive-imageಆಕ್ಸಿಜನ್​: ಮಗುವಿಗೆ ಉಸಿರಾಟದ ಸಮಸ್ಯೆಯಾಗದಂತೆ ಅಧಿಕಾರಿಗಳು ನಿರಂತರವಾಗಿ ಆಕ್ಸಿಜನ್​ ಪೂರೈಕೆ ಮಾಡಿದ್ದರು. ಕಾರ್ಯಾಚರಣೆ ವೇಳೆ ಮಗುವಿನ ಮೇಲೆ ಮಣ್ಣು ಬಿದ್ದಿರುವುದನ್ನು ಗಮನಿಸಿದ್ದರು. ಎಲ್ಲವನ್ನೂ ಕ್ಯಾಮೆರಾ ಮೂಲಕ ನಿಗಾ ವಹಿಸಲಾಗಿತ್ತು.[/caption]

[caption id="attachment_56426" align="alignnone" width="800"]publive-image16 ಅಡಿಯಲ್ಲಿ ಮಗು: ಕೊಳವೆ ಬಾವಿಯ 16 ಅಡಿಯಲ್ಲಿ ಮಗು ಸಿಲುಕಿತ್ತು. ಅಕ್ಕಪಕ್ಕದಲ್ಲಿ ಮಣ್ಣು ತೆರೆವುಗೊಳಿಸಿ ಮಗುವನ್ನ ಹೊರ ತರಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು. ಆದ್ರೆ ಕಾರ್ಯಚರಣೆಗೆ ಬಂಡೆ ಕಲ್ಲುಗಳು ಅಡ್ಡಿಯಾದಕಾರಣ ಬಂಡೆ ಕಲ್ಲು ಒಡೆಯುವ ವೇಳೆ ಮಗುವಿನ ಮೇಲೆ ಮಣ್ಣು ಬಿದ್ದಿದೆ. ಮಗುವಿಗೆ ಉಸಿರಾಟದ ತೊಂದರೆಯಾಗದಂತೆ ಸಿಬ್ಬಂದಿ ನಿರಂತರವಾಗಿ ಆಕ್ಸಿಜನ್​ ಪೂರೈಕೆ ಮಾಡಿದ್ದಾರೆ. ಕ್ಯಾಮೆರಾ ಮೂಲಕ ನಿಗಾ ವಹಿಸಿ ಮಗುವಿನ ರಕ್ಷಣೆಗೆ ಎಸ್​ಡಿಆರ್​ಎಫ್​ ಸಿಬ್ಬಂದಿ ಬೆವರು ಹರಿಸಿದ್ದಾರೆ.[/caption]

[caption id="attachment_56442" align="alignnone" width="800"]publive-imageಬದುಕಿ ಬಂದ ಸಾತ್ವಿಕ್​: ಕೊನೆಗೆ ಎಲ್ಲರ ಪರಿಶ್ರಮದಂತೆ 16 ಅಡಿಯ ಕೊಳವೆ ಬಾವಿಗೆ ಬಿದ್ದ ಸಾತ್ವಿಕ್​ ಪವಾಡ ರೀತಿಯಲ್ಲಿ ಬದುಕಿ ಬಂದ್ದಾನೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ 2 ವರ್ಷದ ಬಾಲಕ ಸಾತ್ವಿಕ ಕೊನೆಗೂ ತಾಯಿಯ ಮಡಿಲು ಸೇರಿದ್ದಾನೆ.[/caption]

[caption id="attachment_56474" align="alignnone" width="800"]publive-imageತಾಯಿ ಮಡಿಲಲ್ಲಿ ಕಂದಮ್ಮ: ಚಿಕಿತ್ಸೆ ವೇಳೆ ತಾಯಿ ಮಡಿಲಲ್ಲಿ ಸಾತ್ವಿಕ ಮಲಗಿದ್ದು, ಅಳುತ್ತಿರುವ ಸಾತ್ವಿಕನನ್ನ ನೋಡಿ ಆಸ್ಪತ್ರೆ ಸಿಬ್ಬಂದಿ ಸಂತೋಷಗೊಂಡಿದ್ದಾರೆ.[/caption]

[caption id="attachment_56444" align="alignnone" width="800"]publive-imageಆಸ್ಪತ್ರೆಯಲ್ಲಿ ಚಿಕಿತ್ಸೆ: ಸಾವನ್ನು ಗೆದ್ದು ಬಂದಿರುವ ಸಾತ್ವಿಕ್‌ಗೆ ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಮೊದಲಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಸ್ಪಂದಿಸಿದ ಸಾತ್ವಿಕ್‌ ಅಮ್ಮನ ಮಡಿಲಲ್ಲಿ ಮಲಗಿ ಅತ್ತಿದ್ದಾನೆ. ಬದುಕಿ ಬಂದ ಕಂದನನ್ನು ಕಂಡ ವೈದ್ಯರು ಸಂತೋಷಗೊಂಡಿದ್ದಾರೆ.[/caption]

[caption id="attachment_56460" align="alignnone" width="800"]publive-imageತಲೆ ಕೆಳಗಾಗಿ ಬಿದ್ದಿದ್ದ ಮಗು: ಸಾತ್ವಿಕ ಸದ್ಯ ಆರಾಮಾಗಿದ್ದಾನೆ. ತಲೆ ಕೆಳಗಾಗಿ ಬಿದ್ದಿರುವ ಹಿನ್ನೆಲೆ ಸಿಟಿ ಸ್ಕ್ಯಾನ್ ಮಾಡುವ ಅಗತ್ಯವಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತದೆ ಎಂದು ಇಂಡಿ ತಾಲೂಕು ವೈದ್ಯಾಧಿಕಾರಿ ಅರ್ಚನಾ ಕುಲಕರ್ಣಿ ಹೇಳಿದ್ದಾರೆ.[/caption]

[caption id="attachment_56441" align="alignnone" width="800"]publive-imageಸಿದ್ದಲಿಂಗ ಮಹಾರಾಜರ ಪವಾಡ: ಸಾತ್ವಿಕ ಜೀವಂತವಾಗಿ ಬದುಕಿ ಬರಲಿ ಎಂದು ಬೆಳಗ್ಗೆಯಿಂದ ಇಂಡಿ ತಾಲೂಕಿನ ಲಚಾಣ್ಯ ಗ್ರಾಮಸ್ಥರು ಪ್ರಾರ್ಥನೆ, ರುದ್ರಾಭಿಷೇಕ ನೆರವೇರಿಸಿದ್ದರು. ಜೀವಂತವಾಗಿ ಸಾತ್ವಿಕ ಹೊರ ಬಂದಿರೋ ಹಿನ್ನೆಲೆಯಲ್ಲಿ ಸಿದ್ದಲಿಂಗ ಮಹಾರಾಜರ ಪವಾಡ ಇದು ಎಂದು ಮಠದಲ್ಲಿ ಕಾಯಿ ಒಡೆದು, ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ.[/caption]

Advertisment