Advertisment

ಕೊಳವೆ ಬಾವಿಗೆ ಬಿದ್ದ ಕಂದನ ನರಳಾಟ, ಕ್ಯಾಮೆರಾದಲ್ಲಿ ಮಗುವಿನ ಕಾಲು ಸೆರೆ.. ರಾತ್ರಿ ಇಡೀ ಕಾರ್ಯಾಚರಣೆ..!

author-image
Bheemappa
Updated On
ಹೆತ್ತವರ ಮುದ್ದಿನ ಕೂಸು.. 20 ತಾಸು ಸಾವಿನ ಜೊತೆ ಹೋರಾಟ; ಬದುಕಿ ಬಂದಿದ್ದೇ ಬಲು ರೋಚಕ!
Advertisment
  • 10 ಬೋರ್​ ಬಳಿಕ 11ನೇ ಬೋರ್​ವೆಲ್​ನಲ್ಲಿ ಸಿಕ್ಕಿದ್ದಕ್ಕೆ ಖುಷಿ ಇತ್ತು
  • ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ, ಗ್ರಾಮಸ್ಥರು ತಲ್ಲಣ
  • ಬದುಕಿ ಬಾ ಅಂತ ದೇವರಲ್ಲಿ ಮೊರೆ ಇಡುತ್ತಿರುವ ನೂರಾರು ಮಂದಿ

ವಿಜಯಪುರದಲ್ಲಿ ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಮಗು ಸಾತ್ವಿಕ್ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ. ಘಟನಾ ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ರಾತ್ರಿಯೆಲ್ಲ ರಕ್ಷಣಾ ಕಾರ್ಯಚರಣೆ ನಡೆದಿದ್ದರಿಂದ ಗ್ರಾಮಸ್ಥರು ರಾತ್ರಿಯೆಲ್ಲ ಅದೇ ಸ್ಥಳ ಮಲಗಿದ್ದಾರೆ. ಮಗುವಿಗೆ ಎಲ್ಲರ ಹೃದಯ ಮಿಡಿಯುತ್ತಿವೆ.

Advertisment

ಎಲ್ಲರಲ್ಲೂ ಆತಂಕ, ಕೊಳವೆ ಬಾವಿಯತ್ತ ಎಲ್ಲರ ಚಿತ್ತ. ಬಿದ್ದ ಹಾಗೆ ಸಾವನ್ನ ಗೆದ್ದು ಮರಳಿ ಬಾ ಕಂದ ಕಣ್ಣೀರಿಡ್ತಿರೋ ತಂದೆ-ತಾಯಿ. ನಿಜಕ್ಕೂ ಈ ದೃಶ್ಯ ಒಮ್ಮೆ ಎಂತವರ ಕಣ್ಣಾಳಿಗಳನ್ನೂ ಒದ್ದೆ ಮಾಡಿದ್ವು. ಆಟವಾಡುವಾಗ ಆಯತಪ್ಪಿ ಕೊಳವೆ ಬಾವಿಗೆ ಬಿದ್ದು ಹೆತ್ತ ಕರುಳಿಗೆ ಆಘಾತ ತಂದೊಡಿದ್ದ ಕಂದ ಸಾವಿನ ಮನೆಯ ಕದ ತಟ್ಟಿತ್ತು.

publive-image

16 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 2 ವರ್ಷದ ಬಾಲಕ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ತೋಟದಲ್ಲಿ ದುರಂತವೊಂದು ನಡೆದು ಹೋಗಿದೆ. ನಗು ನಗುತ್ತಾ ಆಟವಾಡುತ್ತಿದ್ದ 2 ವರ್ಷದ ಕಂದಮ್ಮವೊಂದು ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದೆ. ಸತೀಶ್, ಪೂಜಾ ದಂಪತಿಯ 2 ವರ್ಷದ ಮಗ ಸಾತ್ವಿಕ್ 16 ಅಡಿ ಆಳದ ಕೊಳವೆ ಬಾವಿಗೆ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಟ ಆರಂಭಿಸಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಸಾತ್ವಿಕ್​ನನ್ನ ರಕ್ಷಣೆ ಮಾಡುವ ಕಾರ್ಯಾಚರಣೆಗೆ ಇಳಿದರು.

2 ದಿನದ ಹಿಂದಷ್ಟೇ ಬಾಲಕನ ತಂದೆ ಕೊರೆಸಿದ್ದ ಕೊಳವೆ ಬಾವಿ

ಬಾಲಕ ಸಾತ್ವಿಕ್​ ತಂದೆ ಸತೀಶ್ ಕಳೆದ ಎರಡು ದಿನಗಳ ಹಿಂದಷ್ಟೆ ತಮ್ಮ ತೋಟದಲ್ಲಿ ಈ ಬೋರ್​ವೆಲ್​ನ ಕೊರೆಸಿದ್ರು.. 10 ಬೋರ್​ವೆಲ್​ ಕೊರೆಸಿದ್ದ ಸತೀಶ್​ಗೆ ಗಂಗಾತಾಯಿ ದರ್ಶನ ಭಾಗ್ಯ ನೀಡಿರಲಿಲ್ಲ ಆದ್ರೆ ಕಳೆದ 2 ದಿನದ ಹಿಂದೆ ಕೊರೆಸಿದ್ದ 265 ಅಡಿ ಆಳದ ಈ ಬೋರ್​ವೆಲ್​ನಲ್ಲಿ ನೀರು ಸಿಕ್ಕಿತ್ತು.. ಕುಟುಂಬದಲ್ಲಿ ಸಂತಸ ಮನೆಮಾಡಿತ್ತು.. ಕೊಳವೇ ಬಾವಿಗೆ ಕೇಸಿಂಗ್​​ ಹಾಕೋದಷ್ಟೇ ಬಾಕಿ ಇತ್ತು.. ನಿನ್ನೆ ತೋಟದ ಮನೆ ಬಳಿ ಪೂಜಾ ಪಾತ್ರೆ ತೊಳೆಯುತ್ತಿದ್ದ ವೇಳೆ ಸಾತ್ವಿಕ್ ನಾಪತ್ತೆಯಾಗಿದ್ದ.. ಸುತ್ತಮುತ್ತ ಹುಡುಕಿ ಸಂಶಯದಿಂದ ಕೊಳವೆ ಬಾವಿಯನ್ನ ಇಣುಕಿದಾಗ ಗೊತ್ತಾಗಿದೆ ಸಾತ್ವಿಕ್ ಬೋರ್​ವೆಲ್​ಗೆ ಬಿದ್ದಿರೋದು ತಿಳಿದಿತ್ತು.

Advertisment

ಇದನ್ನೂ ಓದಿ:ಕಾಂಗ್ರೆಸ್​ ಸೇರ್ತೇನೆ ಎಂದಿದ್ದ ಸಿಪಿ ಯೋಗೇಶ್ವರ್​​​ ಪುತ್ರಿ ನಿಶಾ ಯೂಟರ್ನ್​​.. ಅಸಲಿಗೆ ಆಗಿದ್ದೇನು?

publive-image

ಸಾತ್ವಿಕ್​ಗೆ ಆರೋಗ್ಯ ಸಿಬ್ಬಂದಿಯಿಂದ ಆಕ್ಸಿಜನ್ ಪೂರೈಕೆ

ಎರಡು ಜೆಸಿಬಿ ಹಾಗೂ 1 ಹಿಟಾಚಿ ಬಳಸಿ ಸಾತ್ವಿಕ್ ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದ ಎಸ್​ಡಿಆರ್​ಎಫ್ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ಆರಂಭಿಸಿದ್ರು. ಬಾಲಕನ ಉಸಿರಾಟಕ್ಕೆ ತೊಂದರೆಯಾಗದಂತೆ ಆರೋಗ್ಯ ಸಿಬ್ಬಂದಿ ಕೊಳವೆ ಬಾಯಿಯೊಳಗೆ ಆಕ್ಸಿಜನ್ ಪೂರೈಕೆ ಮಾಡಿದ್ರು. ಅಲ್ಲದೇ ಕ್ಯಾಮೆರಾ ಮೂಲಕ ಬಾಲಕನ ಚಲನವಲನಗಳನ್ನ ಗಮನಿಸಲಾಗಿತ್ತು. ಎಸ್​ಡಿಆರ್​ಎಫ್​ ಸಿಬ್ಬಂದಿಗೆ ಸವಾಲಾಗಿ ಪರಣಮಿಸಿದ ಕಲ್ಲು ಬಂಡೆಗಳು ಕಾರ್ಯಾರಚಣೆಗೆ ತೊಡಕುಂಟು ಮಾಡಿದ್ವು.

ಸಾತ್ವಿಕ್ ರಕ್ಷಣಾ ಕಾರ್ಯಾಚರಣೆ ವೇಳೆ ಜಿಲ್ಲೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ರು. ಸಾವು ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದ ಕಂದಮ್ಮ ಸುಖವಾಗಿ ಹೊರಬರಲಿ ಅಂತ ತಂದೆ-ತಾಯಿ ಕಂಡ ಕಂಡ ದೇವರಿಗೆ ಹರಕೆ ಹೊತ್ತಿದ್ರು. ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಸಾವನ್ನ ಗೆದ್ದು ಬಾ ಸಾತ್ವಿಕ್ ಅಂತ ದೇವರಿಗೆ ಕೈಮುಗಿಯುತ್ತಾ ರಾತ್ರಿ ಇಡೀ ಕೊಳವೇ ಬಾಯ ಬಳಿಯೇ ಠಿಕಾಣಿ ಹೂಡಿದ್ರು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment