Advertisment

ಬದುಕಿ ಬಾ ಕಂದ.. ಕಾಲು ಅಲ್ಲಾಡಿಸ್ತಿರುವ ಸಂಕಟ ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ: Video

author-image
Bheemappa
Updated On
ಹೆತ್ತವರ ಮುದ್ದಿನ ಕೂಸು.. 20 ತಾಸು ಸಾವಿನ ಜೊತೆ ಹೋರಾಟ; ಬದುಕಿ ಬಂದಿದ್ದೇ ಬಲು ರೋಚಕ!
Advertisment
  • ಸಾವನ್ನ ಗೆದ್ದು ಬಾ ಕಂದ ಎನ್ನುತ್ತಿರುವ ಗ್ರಾಮಸ್ಥರು, ಕುಟುಂಬಸ್ಥರು
  • ರಾತ್ರಿ ಇಡೀ ಕಣ್ಣಿಗೆ ನಿದ್ದೆ ಇಲ್ಲದೇ ಅಧಿಕಾರಿಗಳಿಂದ ಕಾರ್ಯಾಚರಣೆ
  • ಮಣ್ಣು ತೆರೆವುಗೊಳಿಸಿ ಮಗುನಾ ಹೊರ ತರಲು ಸಿಬ್ಬಂದಿ ಹರಸಾಹಸ

ವಿಜಯಪುರ: ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದ ಕಂದ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದೆ. 16 ಅಡಿಯ ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಸಾತ್ವಿಕ್​ಗಾಗಿ ರಾಜ್ಯಾದ್ಯಂತ ಜನರ ಮನ ಮಿಡಿಯುತ್ತಿದೆ. ಅಗ್ನಿಶಾಮಕ ದಳ, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಎಲ್ಲರೂ ರಾತ್ರಿ ಇಡೀ ಕಣ್ಣಿಗೆ ನಿದ್ದೆ ಇಲ್ಲದೇ ಸಾತ್ವಿಕ್​ನ ರಕ್ಷಣೆ ಮಾಡಲು ತೊಡಗಿದ್ದಾರೆ. ಸದ್ಯ ಇದರ ನಡುವೆ ಕ್ಯಾಮೆರಾದಲ್ಲಿ ಕಂದನ ಕಾಲುಗಳು ಸೆರೆಯಾಗಿವೆ.

Advertisment

publive-image

ಇದನ್ನೂ ಓದಿ:ಕೊಳವೆ ಬಾವಿಗೆ ಬಿದ್ದ ಕಂದನ ನರಳಾಟ, ಕ್ಯಾಮೆರಾದಲ್ಲಿ ಮಗುವಿನ ಕಾಲು ಸೆರೆ.. ರಾತ್ರಿ ಇಡೀ ಕಾರ್ಯಾಚರಣೆ..!

ಮಗುವಿಗೆ ಉಸಿರಾಟದ ಸಮಸ್ಯೆಯಾಗದಂತೆ ಅಧಿಕಾರಿಗಳು ನಿರಂತರವಾಗಿ ಆಕ್ಸಿಜನ್​ ಪೂರೈಕೆ ಮಾಡುತ್ತಿದ್ದಾರೆ. ಕಾರ್ಯಾಚರಣೆ ವೇಳೆ ಮಗುವಿನ ಮೇಲೆ ಮಣ್ಣು ಬಿದ್ದಿದೆ. ಎಲ್ಲವನ್ನೂ ಕ್ಯಾಮೆರಾ ಮೂಲಕ ನಿಗಾ ವಹಿಸಲಾಗಿದ್ದು, ಮಗುವಿನ ಚಲನವಲನ ಸೆರೆಯಾಗಿದೆ. ಆಗ ಮಗುವಿನ ಎರಡು ಕಾಲುಗಳು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು ಕಾಲುಗಳು ಅಲ್ಲಾಡುತ್ತಿವೆ. ಆದಷ್ಟು ಬೇಗ ಮಗು ಹೊರಗೆ ಬರಲೆಂದು ಕುಟುಂಬಸ್ಥರು ಸೇರಿ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

Advertisment

ಇದನ್ನೂ ಓದಿ:ಕಾಂಗ್ರೆಸ್​ ಸೇರ್ತೇನೆ ಎಂದಿದ್ದ ಸಿಪಿ ಯೋಗೇಶ್ವರ್​​​ ಪುತ್ರಿ ನಿಶಾ ಯೂಟರ್ನ್​​.. ಅಸಲಿಗೆ ಆಗಿದ್ದೇನು?

ಬದುಕು ಸಾವಿನ ಮಧ್ಯೆ ಹೋರಾಡುತ್ತಿರುವು ಮಗುವಿನ ರಕ್ಷಣೆಗಾಗಿ ಕಾರ್ಯಚರಣೆ ಮುಂದುವರೆದಿದ್ದು, ರಕ್ಷಣಾ ಕಾರ್ಯದ ವೇಳೆ ಮಗುವಿನ ಮೇಲೆ ಮಣ್ಣು ಬಿದ್ದಿದೆ. ಕೊಳವೆ ಬಾವಿಯ 16 ಅಡಿಯಲ್ಲಿ ಮಗು ಸಿಲುಕಿದ್ದು, ಅಕ್ಕಪಕ್ಕದಲ್ಲಿ ಮಣ್ಣು ತೆರೆವುಗೊಳಿಸಿ ಮಗುವನ್ನ ಹೊರ ತರಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಆದ್ರೆ ಕಾರ್ಯಚರಣೆಗೆ ಬಂಡೆ ಕಲ್ಲುಗಳು ಅಡ್ಡಿಯಾಗುತ್ತಿದ್ದು, ಬಂಡೆ ಕಲ್ಲು ಒಡೆಯುವ ವೇಳೆ ಮಗುವಿನ ಮೇಲೆ ಮಣ್ಣು ಬಿದ್ದಿದೆ. ಮಗುವಿಗೆ ಉಸಿರಾಟದ ತೊಂದರೆಯಾಗದಂತೆ ಸಿಬ್ಬಂದಿ ನಿರಂತರವಾಗಿ ಆಕ್ಸಿಜನ್​ ಪೂರೈಕೆ ಮಾಡುತ್ತಿದ್ದು, ಕ್ಯಾಮೆರಾ ಮೂಲಕ ನಿಗಾ ವಹಿಸಲಾಗಿದ್ದು, ಮಗುವಿನ ಚಲನವಲನ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment