newsfirstkannada.com

ಸಾತ್ವಿಕ್ ಅಳುತ್ತಿರುವ ಧ್ವನಿ ಕೇಳಿಸಿಕೊಂಡ ರಕ್ಷಣಾ ಸಿಬ್ಬಂದಿ.. ಅಪ್ಪ-ಅಮ್ಮಗೆ ಮತ್ತೆ ಚಿಗುರಿದ ಬದುಕಿನ ಭರವಸೆ..

Share :

Published April 4, 2024 at 11:20am

    NDRF, SDRF ತಂಡಗಳಿಂದ ರಕ್ಷಣಾ ಕಾರ್ಯಾಚರಣೆ

    16 ಅಡಿ ಆಳದಲ್ಲಿ ಸಿಲುಕಿರುವ 2 ವರ್ಷದ ಬಾಲಕ ಸಾತ್ವಿಕ್

    ಸತತ 17 ಗಂಟೆಗಳಿಂದ ನಿರಂತರ ರಕ್ಷಣಾ ಕಾರ್ಯಾಚರಣೆ

ವಿಜಯಪುರ: 2 ವರ್ಷದ ಸಾತ್ವಿಕ್​ನನ್ನು ರಕ್ಷಣೆ ಮಾಡಲು ಎನ್​​ಡಿಆರ್​ಎಫ್​, ಎಸ್​ಡಿಆರ್​ಎಫ್​ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಮಗುವನ್ನ ಹೊರ ತೆಗೆಯಲಾಗುತ್ತದೆ. ಈಗಾಗಲೇ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡಿರುವ ಮಗು ಅಳುತ್ತಿರುವ ಧ್ವನಿಯನ್ನು ರಕ್ಷಣೆ ಪಡೆ ಸಿಬ್ಬಂದಿ ಕೇಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ಕೊಳವೆ ಬಾವಿ ದುರಂತ ಇದೇ ಮೊದಲಲ್ಲ.. ಈ ಹಿಂದಿನ ಘಟನೆಗಳು ರಾಜ್ಯವನ್ನೇ ಕಣ್ಣೀರಲ್ಲಿ ತೇಲಿಸಿದ್ವು

ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದ ಕಂದ ಕೊಳವೆ ಬಾವಿಗೆ ಬಿದ್ದಿತ್ತು. ಈ ಸಂಬಂಧ NDRF, SDRF ತಂಡಗಳು ರಕ್ಷಣಾ ಕಾರ್ಯಾಚರಣೆಯ ವೇಗ ಹೆಚ್ಚಿಸಿವೆ. ರಕ್ಷಣೆ ಕಾರ್ಯ ಅಂತಿಮ ಘಟ್ಟ ತಲುಪಿದ್ದು ಕೆಲವೇ ಗಂಟೆಗಳಲ್ಲಿ ಮಗು ಹೊರತೆಗೆಯಲಿದ್ದಾರೆ. ಸತತ 17 ಗಂಟೆಗಳಿಂದ ಈ ರಕ್ಷಣಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಭೂಮಿಯನ್ನು ಅಗೆಯುವ ವೇಳೆ ಕಲ್ಲು ಬಂಡೆ ಅಡ್ಡಿಯಾಗಿದ್ರಿಂದ ರಕ್ಷಣಾ ಕಾರ್ಯದಲ್ಲಿ ಕೊಂಚ ವಿಳಂಬವಾಗಿದೆ. ಇದು ಬಿಟ್ಟರೇ ಎಲ್ಲವೂ ಸುಗಮವಾಗಿ ನಡೆಯುತ್ತಿದ್ದ ಕಾರಣ ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ಸಾತ್ವಿಕ್​ ಪ್ರಪಂಚವನ್ನು ಮರಳಿ ನೋಡಲಿದ್ದಾನೆ ಎಂಬ ಭರವಸೆ ಸಿಕ್ಕಿದೆ.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾತ್ವಿಕ್ ಅಳುತ್ತಿರುವ ಧ್ವನಿ ಕೇಳಿಸಿಕೊಂಡ ರಕ್ಷಣಾ ಸಿಬ್ಬಂದಿ.. ಅಪ್ಪ-ಅಮ್ಮಗೆ ಮತ್ತೆ ಚಿಗುರಿದ ಬದುಕಿನ ಭರವಸೆ..

https://newsfirstlive.com/wp-content/uploads/2024/04/VIJ_BABY-1.jpg

Load More