/newsfirstlive-kannada/media/post_attachments/wp-content/uploads/2023/06/Bull.jpg)
ವಿಜಯಪುರ: ಕರಿ ಹರಿಯುವ ಹೋರಿ ಓಡಿಸುವಾಗ ಹಲವರಿಗೆ ಹೋರಿ ಇರಿದ ಘಟನೆ ಕಾಖಂಡಕಿ ಗ್ರಾಮದಲ್ಲಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕರಿ ಹರಿಯುವ ಪದ್ಧತಿ ಏರ್ಪಡಿಸಲಾಗಿತ್ತು. ಕಾರು ಹುಣ್ಣಿಮೆಯಾದ ಮೇಲೆ ವಾರದ ಬಳಿಕ ಕಾಖಂಡಕಿ ಗ್ರಾಮದಲ್ಲಿ ಈ ಹಬ್ಬವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಹಲವರಿಗೆ ಹೋರಿ ಇರಿದಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ದೃಶ್ಯವೊಂದರಲ್ಲಿ ವ್ಯಕ್ತಿಯೋರ್ವನಿಗೆ ಹೋರಿ ಕೋಡಿನಿಂದ ಇರಿದ ದೃಶ್ಯ ಭಯಾನಕ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೋರಿ ಗುದ್ದಿದ ರಭಸಕ್ಕೆ ವ್ಯಕ್ತಿ ನೆಲಕ್ಕೆ ಬಿದ್ದಿದ್ದಾನೆ. ಈ ವೇಳೆ ಸ್ಥಳೀಯ ಯುವಕರು ಸತ್ತನೆಂದು ಓಡಿ ಹೋಗಿ ವ್ಯಕ್ತಿಯನ್ನುಯ ಹೊತ್ತುಕೊಂಡು ಹೋಗಿದ್ದಾರೆ.
https://twitter.com/NewsFirstKan/status/1667524144672681985?s=20
ಕರಿ ಹರಿಯುವ ಪದ್ಧತಿಯನ್ನು ಕಾಣಲು ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ