/newsfirstlive-kannada/media/post_attachments/wp-content/uploads/2025/03/VIJAYAPURA-PALIKE-5.jpg)
ವಿಜಯಪುರ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಮೇಲೆ ಒಂದಿಲ್ಲೊಂದು ಕಾನೂನು ತೊಡಕಿನಿಂದಾಗಿ ಆಡಳಿತ ಸುಸೂತ್ರವಾಗಿ ನಡೆಯುತ್ತಿಲ್ಲ. ಚುನಾವಣೆ ಘೋಷಣೆ ವೇಳೆ ವಾರ್ಡ್ ಮೀಸಲಾತಿ ವಿಚಾರ, ಚುನಾವಣೆ ಆದ್ಮೇಲೆ ಮೇಯರ್ ಉಪಮೇಯರ್ ಚುನಾವಣೆ ಮೀಸಲಾತಿ ಜಟಾಪಟಿ, ಇದೀಗ 35 ಪಾಲಿಕೆ ಸದಸ್ಯರ ಅನರ್ಹತೆಯಿಂದ ಪಾಲಿಕೆ ಮತ್ತೆ ಸದ್ದು ಮಾಡಿದೆ.
ವಿಜಯಪುರ ಮಹಾನಗರ ಪಾಲಿಕೆ ಕಾಂಗ್ರೆಸ್ ಕೈತಪ್ಪಿ ಬಿಜೆಪಿಗೆ ಅಧಿಕಾರ ಗದ್ದುಗೇರಿದ ಬೆನ್ನಲ್ಲೇ ಸರ್ಕಾರ ಪಾಲಿಕೆ ಸದಸ್ಯರ ಮೇಲೆ ಅನರ್ಹತೆ ಅಸ್ತ್ರ ಪ್ರಯೋಗಿಸಿದೆ. ಇದೇ ವಿಚಾರವಿಟ್ಟುಕೊಂಡು ಬಿಜೆಪಿಗರು ಕಾನೂನಾತ್ಮಕ ಹಾಗೂ ಬೀದಿಗಿಳಿದು ಹೋರಾಟ ನಡೆಸುವ ಸಾಧ್ಯತೆಯಿದೆ.
ಇದನ್ನೂ ಓದಿ: SSLC, ITI, BE ಮುಗಿಸಿದವ್ರಿಗೆ ಗುಡ್ನ್ಯೂಸ್.. 9,970 ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿಜಯಪುರ ಮಹಾನಗರ ಪಾಲಿಕೆಯ 35 ಸದಸ್ಯರ ವಿರುದ್ಧ ಅನರ್ಹತೆಯ ತೂಗುಗತ್ತಿ ಬಿದ್ದಿದೆ. ಆಸ್ತಿ ವಿವರ ಸಲ್ಲಿಸಿಲ್ಲ ಎಂಬ ಆರೋಪವನ್ನೇ ಆಧರಿಸಿ ಅನರ್ಹತೆಯ ಅಸ್ತ್ರವನ್ನ ಪ್ರಯೋಗಿಸಲಾಗಿದೆ. ಈ ಬಗ್ಗೆ ಇವತ್ತು ಪ್ರಾದೇಶಿಕ ಆಯುಕ್ತರು ಹೈಕೋರ್ಟ್‌ಗೆ ರಿಪೋರ್ಟ್ ಸಲ್ಲಿಕೆ ಮಾಡಲಿದ್ದಾರೆ. ವಿಜಯಪುರ ಪಾಲಿಕೆ ಸದಸ್ಯರು ಅನರ್ಹತೆ ಪ್ರಶ್ನಿಸಿ ಬಿಜೆಪಿ ಸದಸ್ಯರು ಕಾನೂನಾತ್ಮಕ ಹಾಗೂ ಬೀದಿಗಿಳಿದು ಹೋರಾಟ ಮಾಡುವ ಸಾಧ್ಯತೆಯಿದೆ. ವಿಜಯಪುರ ಪಾಲಿಕೆ ಬಿಜೆಪಿ ತೆಕ್ಕೆಗೆ ತೆಗೆದುಕೊಂಡರೂ ಸದಸ್ಯರ ಅನರ್ಹತೆಯಿಂದಾಗಿ ಮತ್ತೊಮ್ಮೆ ಶಾಸಕ ಯತ್ನಾಳ್‌ಗೆ ಹಿನ್ನಡೆಯಾಗಿದೆ. ಸಚಿವ ಎಂಬಿ ಪಾಟೀಲ್ ಕೈ ಮೇಲಾಗಿದೆ ಎನ್ನುವ ಚರ್ಚೆ ನಡೀತಿದೆ.
ಇದನ್ನೂ ಓದಿ: 6, 6, 6, 6, 6, 6, 6! ನಿಕೋಲಸ್ ಪೂರನ್ ಭರ್ಜರಿ ಬ್ಯಾಟಿಂಗ್.. ಹೇಗಿತ್ತು ಸಿಡಿಲಬ್ಬರದ ಅರ್ಧ ಶತಕ?
ಏನಿದು ಅನರ್ಹತೆ?
- ವಿಜಯಪುರ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿತ್ತು.
- ಅಕ್ಟೋಬರ್ 2022ರಲ್ಲಿ 35 ವಾರ್ಡ್‌ಗೆ ಚುನಾವಣೆ ನಡೆದಿತ್ತು
- 35 ವಾರ್ಡ್ ಪೈಕಿ ಬಿಜೆಪಿ 17, ಕಾಂಗ್ರೆಸ್ 10, ಎಐಎಂಐಎಂ 2
- ಜೆಡಿಎಸ್ -1 ಪಕ್ಷೇತರ ಐವರು ಸದಸ್ಯರು ಆಯ್ಕೆಯಾಗಿದ್ದರು
- ದೊಡ್ಡ ಪಕ್ಷವಾಗಿ ಬಿಜೆಪಿ ಮಹಾನಗರ ಪಾಲಿಕೆಯಲ್ಲಿ ಗೆದ್ದಿತ್ತು
- ಮೊದಲ ಅವಧಿಯಲ್ಲಿ ಬಿಜೆಪಿಗೆ ಅಧಿಕಾರ ಭಾಗ್ಯ ಸಿಗಲಿಲ್ಲ
- ಮೇಯರ್-ಉಪಮೇಯರ್ ಮೀಸಲಾತಿಗಾಗಿ ಕೋರ್ಟ್ ಮೊರೆ
- 14 ತಿಂಗಳ ಬಳಿಕ ಮೇಯರ್ ಉಪಮೇಯರ್ ಚುನಾವಣೆ
- ಆಪರೇಷನ್ ಹಸ್ತದ ಮೂಲಕ ಚುನಾವಣೆಯಲ್ಲಿ ಕೈಗೆ ಗೆಲುವು
- ಕಾಂಗ್ರೆಸ್ ಗೆದ್ದು ಸಚಿವ ಎಂಬಿ ಪಾಟೀಲ್ ಮೇಲುಗೈ ಸಾಧಿಸಿದ್ದರು
- ಈ ವೇಳೆ ವಿಜಯಪುರ ನಗರ ಶಾಸಕ ಯತ್ನಾಳ್ ಗೆ ಹಿನ್ನಡೆಯಾಗಿತ್ತು
ಇಷ್ಟೆಲ್ಲಾ ಆದ್ಮೇಲೆ ಹೈಡ್ರಾಮಾ ಕೂಡಾ ನಡೆದಿತ್ತು. ಎರಡನೆ ಅವಧಿಗೆ ಮೀಸಲಾತಿ ಅನ್ವಯ ಮತ್ತೆ ಮೇಯರ್, ಉಪಮೇಯರ್ ಚುನಾವಣೆ ನಿಗದಿಯಾಗಿತ್ತು. ಈ ವೇಳೆ ಕಾಂಗ್ರೆಸ್-ಬಿಜೆಪಿ ಅಧಿಕಾರ ಹಿಡಿಯಲು ತಂತ್ರ ಪ್ರತಿ ತಂತ್ರ ಹೆಣೆದಿದ್ರು. ಆದ್ರೆ ಕಾಂಗ್ರೆಸ್‌ಗೆ ಸೋಲಾಯ್ತು. ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರು ಸಂಖ್ಯಾ ಬಲ ಹೆಚ್ಚಿಸಲು ಅನಧಿಕೃತ ಮತದಾರರು ಸೇರ್ಪಡೆ ಮಾಡಿದೆ ಅಂತ ಬಿಜೆಪಿ ಸದಸ್ಯ ಹೈಕೋರ್ಟ್ ಮೆಟ್ಟಿಲೇರಿದ್ರು. ಪಾಲಿಕೆ ಎಲ್ಲಾ ಸದಸ್ಯರು ಪೌರಾಡಳಿತ ನಿಯಮಾವಳಿಯಂತೆ ನಿಗದಿತ ನಮೂನೆಯಲ್ಲಿ ಆಸ್ತಿ ವಿವರ ಸಲ್ಲಿಸಿಲ್ಲ ಸದಸ್ಯತ್ವ ಅನರ್ಹಗೊಳಿಸಬೇಕೆಂದು ರಿಟ್ ಅರ್ಜಿ ಸಲ್ಲಿಕೆಯಾಗಿತ್ತು. ಎರಡು ಅರ್ಜಿಗಳನ್ನು ಹೈಕೋರ್ಟ್ ಪೀಠ ಆಲಿಸಿ ಮೇಯರ್-ಉಪಮೇಯರ್ ಚುನಾವಣೆ ಪೂರ್ಣ ಗೊಳಿಸಿ, ಸದಸ್ಯತ್ವ ಅನರ್ಹತೆಯ ಕ್ರಮ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಹೈಕೋರ್ಟ್ ಹೇಳಿತ್ತು. ಇದೀಗ ಕೊನೆಗೂ 35 ಸದಸ್ಯರನ್ನ ಅನರ್ಹಗೊಳಿಸಲಾಗಿದೆ. ಇವತ್ತು ಹೈಕೋರ್ಟ್‌ಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನರ್ಹತೆಯ ವರದಿ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: CSK ಅಂಗಳದಲ್ಲಿ ಮೊಳಗಿದ RCB.. RCB ಘೋಷಣೆ; ವಿರಾಟ್ ಕೊಹ್ಲಿಗೆ ಥಲೈವಾ.. ಥಲೈವಾ ಎಂದ ಫ್ಯಾನ್ಸ್
ಆಸ್ತಿ ವಿವರ ಸಲ್ಲಿಸಲು ಅವಕಾಶ ಕೊಡದೇ ಅಧಿಕಾರ ಕೈತಪ್ಪಿದೆ ಅಂತ ಅನರ್ಹಗೊಳಿಸಿದ್ದು ಸರಿಯಲ್ಲ ಅಂತ ಬಿಜೆಪಿ ಸದಸ್ಯರು ಆಕ್ರೋಶ ಹೊರ ಹಾಕ್ತಿದ್ದಾರೆ. ಹೀಗಾಗಿ ಮಹಾನಗರ ಪಾಲಿಕೆ ಸದಸ್ಯರ ಅನರ್ಹತೆ ಪ್ರಕರಣ ಮತ್ತಷ್ಟು ರಾಜಕೀಯ ಸ್ವರೂಪ ಪಡೆದುಕೊಳ್ಳೋದು ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ