/newsfirstlive-kannada/media/post_attachments/wp-content/uploads/2024/05/MUMBAI_POLICE.jpg)
ಸಾಂದರ್ಭಿಕ ಚಿತ್ರ
ವಿಜಯಪುರ: ಗಾಂಧಿ ಔಕ್ ಪೊಲೀಸ್ ಠಾಣೆಯ ಕಾನ್ಸ್ಸ್ಟೇಬಲ್ A.S.ಬಂಡುಗೊಳ ಅವರ ನವಜಾತ ಶಿಶು ಅನಾರೋಗ್ಯದಿಂದ ಮೃತಪಟ್ಟಿದೆ. ಬೆನ್ನಲ್ಲೇ A.S.ಬಂಡುಗೊಳ ಅವರು ಮಾಡಿರುವ ಮೆಸೇಜ್ ಭಾರೀ ಚರ್ಚೆಗೆ ಕಾರಣವಾಗಿದೆ.
ಮಗು ನಿಧನ ಬೆನ್ನಲ್ಲೇ ಪೊಲೀಸ್ ಅಧಿಕಾರಿ ಬಂಡುಗೊಳ ಅವರು ವಿಜಯಪುರ ಜಿಲ್ಲಾ ಪೊಲೀಸ್ ಸಿಬ್ಬಂದಿಗಳಿರುವ ಗ್ರೂಪ್ಗೆ ಮೆಸೇಜ್ ಹಾಕಿದ್ದಾರೆ. ಅದರಲ್ಲಿ ನನಗೆ ರಜೆ ಸಿಗಲಿಲ್ಲ. ಅದರಿಂದ ಮಗನಿಗೆ ಸರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ ಎಂದು ಆರೋಪಿಸಲಾಗಿದೆ.
ಮೆಸೇಜ್ನಲ್ಲಿ ಏನಿದೆ..?
ನನ್ನ ಮಗನಿಗೆ ಚಿಕಿತ್ಸೆ ನೀಡಲು ರಜೆ ಸಿಗಲಿಲ್ಲ..
ಕಡೆಗೂ ನನ್ನ ಮಗ ಬದುಕಿ ಉಳಿಯಲಿಲ್ಲ..
ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು..
ನನಗೆ ಬಹಳ ನೋವಾಗಿದೆ..
ಇಂತಿ ನಿಮ್ಮ AS ಬಂಡುಗೋಳ
ಹೀಗೆ ಬರೆದು ಪೊಲೀಸ್ ಸಿಬ್ಬಂದಿ ಇರುವ ಗ್ರೂಪ್ಗೆ ಮೆಸೇಜ್ ಹಾಕಿದ್ದಾರೆ. ಅಲ್ಲದೇ ಐಸಿಯುನಲ್ಲಿದ್ದ ಮಗುವಿನ ಫೋಟೋವನ್ನೂ ಶೇರ್ ಮಾಡಿದ್ದಾರೆ. ಅಂದ್ಹಾಗೆ AS ಬಂಡುಗೋಳ ನವಜಾತ ಶಿಶು ಅನಾರೋಗ್ಯದ ಕಾರಣ ಐಸಿಯುನಲ್ಲಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಈ ಘಟನೆಯನ್ನು ಡಿಜಿಪಿ, ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಮಾಧ್ಯಮಗಳಿಗೆ ಜೊಹೇದ್ ಕಿಂಗ್ ಎಂಬ ಹೆಸರಿನ ಇನ್ಸ್ಟಾಗ್ರಾಮ್ನಿಂದ ಟ್ಯಾಗ್ ಮಾಡಲಾಗಿದೆ.
ಇದನ್ನೂ ಓದಿ: ಡಿಕೆಶಿ ನಟ್ಟು ಬೋಲ್ಟು ಟೈಟ್ ಹೇಳಿಕೆ.. ಪರ ವಿರೋಧದ ಚರ್ಚೆಗೆ ಇಳಿದ ಸ್ಯಾಂಡಲ್ವುಡ್
ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, AS ಬಂಡುಗೋಳ ಯಾವುದೇ ರಜೆ ಕೇಳಿಲ್ಲ. ಮೌಖಿಕವಾಗಿ ಹಾಗೂ ಲಿಖಿತವಾಗಿ ಗಾಂಧಿ ಚೌಕ್ ಪೊಲೀಸ್ ಠಾಣಾಧಿಕಾರಿಗಳ ಬಳಿ ರಜೆ ಕೇಳಿಲ್ಲ. ನಿನ್ನೆ ಹಾಗೂ ಇಂದು ಕರ್ತವ್ಯಕ್ಕೆ ಹಾಜರಾಗಿಲ್ಲ. ಎ.ಎಸ್.ಬಂಡುಗೋಳ ಪತ್ನಿಗೆ ಇದು ಮೂರನೇ ಹೆರಿಗೆ ಎಂದು ತಿಳಿದು ಬಂದಿದೆ. ಇಲಾಖಾ ಸಿಬ್ಬಂದಿ ಗ್ರೂಪ್ನಲ್ಲಿ ಪೋಸ್ಟ್ ಹಾಕಿದ್ದಾನೆ ಎಂಬ ಮಾಹಿತಿ ಇದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಲಕ್ಷ್ಮಣ ನಿಂಬರಗಿ, ಘಟನೆ ಬಗ್ಗೆ ತನಿಖೆ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಇಡ್ಲಿ ಆಯ್ತು, ಈಗ ಹೋಳಿಗೆ ತಯಾರಿಸುವವರಿಗೆ ಬಿಸಿ.. ಸಿಹಿ ಅಂಗಡಿಗಳ ಮೇಲೆ ರೇಡ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ