/newsfirstlive-kannada/media/post_attachments/wp-content/uploads/2025/02/BAGAPPA-HARIJAN.jpg)
ವಿಜಯಪುರ: ಭೀಮಾ ತೀರದ ಕುಖ್ಯಾತ ಚಂದಪ್ಪ ಹರಿಜನ್ ಸಹಚರ ಹಾಗೂ ಸಹೋದರ ಸಂಬಂಧಿ ಬಾಗಪ್ಪ ಹರಿಜನ್ನ ಜೀವ ತೆಗೆಯಲಾಗಿದೆ. ನಿನ್ನೆ ರಾತ್ರಿ 8:50ರ ಸುಮಾರಿಗೆ ವಿಜಯಪುರದ ಮದಿನಾ ನಗರದಲ್ಲಿ ದುಷ್ಕರ್ಮಿಗಳು ದಾಳಿ ಮಾಡಿ ಬಾಗಪ್ಪ ಹರಿಜನ್ನನ್ನು ಮುಗಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧ ಮಾಹಿತಿ ನೀಡಿರುವ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಮದಿನ ನಗರದಲ್ಲಿ ಬಾಗಪ್ಪನ ಬಾಡಿಗೆ ಮನೆ ಇದೆ. ನಾಲ್ಕೈದು ಜನರ ಗ್ಯಾಂಗ್ ಕೃತ್ಯ ಮಾಡಿದೆ ಎಂದು ತಿಳಿಸಿದರು. ಮನೆ ಎದುರು ಊಟ ಮಾಡಿಕೊಂಡು ಬಾಗಪ್ಪ ವಾಕಿಂಗ್ ಮಾಡ್ತಿದ್ದ ವೇಳೆ ದುಷ್ಕೃತ್ಯ ನಡೆಸಿದ್ದಾರೆ. ಆಟೋದಲ್ಲಿ ಬಂದ ನಾಲ್ಕೈದು ಜನರ ಗ್ಯಾಂಗ್ ಕೊಡಲಿ ಹಾಗೂ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ: Bhagappa Harijan: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು.. ನಟೋರಿಯಸ್ ಬಾಗಪ್ಪ ಹರಿಜನ್ ಫಿನಿಶ್
ಈ ಸಂಬಂಧ ನಮ್ಮ ತನಿಖಾ ತಂಡ ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿದೆ. ಸದ್ಯ ಮೃತದೇಹವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಾಲ್ಕರಿಂದ ಐದು ಜನರ ತಂಡ ದಾಳಿ ಮಾಡಿದೆ ಎಂದು ಮನೆಯವರು ಹೇಳಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ನಾವು ಪತ್ತೆ ಮಾಡುತ್ತೇವೆ ಎಂದಿದ್ದಾರೆ.
ಬಾಗಪ್ಪನ ಮೇಲೆ ಸುಮಾರು 10 ಕೇಸ್‌ಗಳಿವೆ. ಈ ಪೈಕಿ 6 ಜೀವ ತೆಗೆದ ಪ್ರಕರಣದಲ್ಲಿ ಆರೋಪಿ. ಜೀವ ತೆಗೆಯಲು ಯತ್ನಿಸಿದ ಪ್ರಕರಣ ಕೂಡ ದಾಖಲಾಗಿತ್ತು. 1993ರಿಂದ ಬಾಗಪ್ಪನ ಕ್ರಿಮಿನಲ್ ಹಿಸ್ಟರಿ ಶುರುವಾಗಿತ್ತು. ಕೊನೆಯದಾಗಿ 2016-17ರಲ್ಲೂ ಈತನ ವಿರುದ್ಧ ಕೇಸ್ಗಳು ದಾಖಲಾಗಿದ್ದವು ಅಂತ ಎಸ್ಪಿ ತಿಳಿಸಿದ್ದಾರೆ.
ಇದನ್ನೂ ಓದಿ: ಗದಗ ಪೊಲೀಸರ ದಾಳಿ.. ಅಕ್ರಮ ಬಡ್ಡಿ ದಂಧೆಕೋರರಿಗೆ ಶಾಕ್: ಕೋಟಿ ಕೋಟಿ ಹಣ ಜಪ್ತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ