‘ಇನ್ನೂ ದೊಡ್ಡ, ದೊಡ್ಡ ವಿಕೆಟ್ ಪತನ’- ಸಿದ್ದು ಸರ್ಕಾರದ ಬಗ್ಗೆ ವಿಜಯೇಂದ್ರ ಸ್ಫೋಟಕ ಭವಿಷ್ಯ!

author-image
admin
Updated On
ಹಿಂದೂ ಧಾರ್ಮಿಕ ಆಚಾರ, ವಿಚಾರಗಳ ದಮನಕ್ಕೆ ಷಡ್ಯಂತ್ರ ನಡೀತಿದೆ -ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ
Advertisment
  • ಇನ್ನೆರಡು ತಿಂಗಳ ಬಳಿಕ ಸಿದ್ದರಾಮಯ್ಯ ಸರ್ಕಾರ ಉರುಳುತ್ತಾ?
  • ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಿಶ್ಚಿತ
  • ‘ED, CBIಯಿಂದ ಸಿದ್ದರಾಮಯ್ಯ ತಪ್ಪಿಸ್ಕೊಳ್ಳೋಕೆ ಸಾಧ್ಯವಿಲ್ಲ’

ಮುಡಾ ಸೈಟ್‌ ಹಂಚಿಕೆಯ ಅಕ್ರಮ, ವಾಲ್ಮೀಕಿ ಬಹುಕೋಟಿ ಹಗರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಯುದ್ಧವನ್ನೇ ಸಾರಿದೆ. ಬಿಜೆಪಿ ನಾಯಕರ ಹೋರಾಟ ದಿನಕಳೆದಂತೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಗರಣಗಳನ್ನ ವಿರೋಧಿಸಿ ರಾಜ್ಯ ಬಿಜೆಪಿ ನಾಯಕರು ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಖಡಕ್ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: EXCLUSIVE: ‘ಎರಡು ತಿಂಗಳು ಮಾತ್ರ ರಾಜ್ಯದಲ್ಲಿ ಸಿದ್ದು ಅಧಿಕಾರ’- ಬಿ.ವೈ ವಿಜಯೇಂದ್ರ ಶಾಕಿಂಗ್ ಹೇಳಿಕೆ 

publive-image

ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ಮಾತನಾಡಿರುವ ಬಿ.ವೈ ವಿಜಯೇಂದ್ರ ಅವರು ಅಕ್ರಮವಾಗಿ ಸಿದ್ದರಾಮಯ್ಯ ಕುಟುಂಬಕ್ಕೆ ನಿವೇಶನ ಬಂದಿದೆ. ED, CBIಯಿಂದ ಸಿಎಂ ತಪ್ಪಿಸ್ಕೊಳ್ಳೋಕೆ ಸಾಧ್ಯವಿಲ್ಲ. ವಾಲ್ಮೀಕಿ ಹಗರಣ ಹಣ ಯಾರಿಗೆ ತಲುಪಿದೆ? ಕಾಂಗ್ರೆಸ್ ಹೈಕಮಾಂಡ್‌ ಕರ್ನಾಟಕವನ್ನು ATM ಮಾಡಿ ಲೂಟಿ ಮಾಡುತ್ತಿದ್ದಾರೆ. ತಮ್ಮ ಮೇಲಿನ ಆರೋಪಗಳಿಂದ ಸಿದ್ದು ಭಯಭೀತರಾಗಿದ್ದು, ನೋಡ್ತಾ ಇರಿ ಸಿದ್ದರಾಮಯ್ಯನೇ ತಪ್ಪಾಗಿದೆ ಅಂತ ಒಪ್ಕೊಳ್ತಾರೆ ಎಂದಿದ್ದಾರೆ.

ಇನ್ನೆರಡು ತಿಂಗಳು ಕಾದು ನೋಡಿ ಸಿದ್ದರಾಮಯ್ಯ ಸರ್ಕಾರ ಇರೋದು ಅನುಮಾನ ಎಂದಿರುವ ವಿಜಯೇಂದ್ರ ಅವರು ವಾಲ್ಮೀಕಿ ಕೋಟಿ, ಕೋಟಿ ಹಗರಣದಲ್ಲಿ ಇನ್ನೂ ದೊಡ್ಡ, ದೊಡ್ಡ ತಲೆಗಳು ಉದುರುತ್ತೆ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

‘ಪಾದಯಾತ್ರೆ ತಡೆಯೋಕೆ ಬರಲಿ ನೋಡೋಣ’
ಮುಡಾ ಹಗರಣ ವಿರೋಧಿಸಿ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಪಾದಯಾತ್ರೆ ಮಾಡೋದು ನಿಶ್ಚಿತ ಎಂದಿರುವ ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯ ಅವರು ಏನೇ ಮಾಡಿದ್ರೂ ಪಾದಯಾತ್ರೆ ಮಾಡೋದು ನಿಶ್ಚಿತ ಎಂದು ರಾಜಕೀಯದ ಜಿದ್ದಾಜಿದ್ದಿಗೆ ತೊಡೆ ತಟ್ಟಿದ್ದಾರೆ. ಪಾದಯಾತ್ರೆ ಮಾಡಲು ಕಾಂಗ್ರೆಸ್​ ನಾಯಕರಿಂದಲೇ ಒತ್ತಡ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಜೋರಾಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment