Advertisment

ಕರ್ನಾಟಕ ಫ್ಯಾನ್ಸ್​ಗೆ ಸಿಹಿ ಸುದ್ದಿ.. ಟೀಮ್ ಇಂಡಿಯಾ ಜರ್ಸಿ ತೊಡಲು ಸಜ್ಜಾದ ಮತ್ತೊಬ್ಬ ಕನ್ನಡಿಗ

author-image
Ganesh
Updated On
ಕರ್ನಾಟಕ ಫ್ಯಾನ್ಸ್​ಗೆ ಸಿಹಿ ಸುದ್ದಿ.. ಟೀಮ್ ಇಂಡಿಯಾ ಜರ್ಸಿ ತೊಡಲು ಸಜ್ಜಾದ ಮತ್ತೊಬ್ಬ ಕನ್ನಡಿಗ
Advertisment
  • ವೈಶಾಕ್ ಟೀಮ್ ಇಂಡಿಯಾ ಕನಸು ನನಸು
  • ಕನ್ನಡಿಗ ವೈಶಾಕ್​ಗೆ ಟೀಮ್ ಇಂಡಿಯಾ ಕರೆ
  • ಟಿ20 ತಂಡದಲ್ಲಿ ಸ್ಥಾನ ಪಡೆದ ಕನ್ನಡಿಗ ವೈಶಾಕ್

ಸೌತ್​ ಆಫ್ರಿಕಾ ಪ್ರವಾಸಕ್ಕೆ ಟೀಮ್​ ಇಂಡಿಯಾ ಪ್ರಕಟವಾಗಿದೆ. ಇದ್ರೊಂದಿಗೆ ಕರ್ನಾಟಕದ ಕ್ರಿಕೆಟ್​ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೂಡ ಸಿಕ್ಕಿದೆ. ಕನ್ನಡಿಗ ವೈಶಾಕ್ ವಿಜಯಕುಮಾರ್ ಬ್ಲೂ ಜೆರ್ಸಿ ತೊಡಲು ಸಜ್ಜಾಗಿ ನಿಂತಿದ್ದಾರೆ. ಸೌತ್​ ಆಫ್ರಿಕಾ ಎದುರಿನ ಟಿ20 ಸರಣಿಗೆ ಸೆಲೆಕ್ಟ್​ ಆಗಿರೋ ಕರ್ನಾಟಕದ ಪೇಸ್​ ಸೆನ್ಸೇಷನ್​ ವೈಶಾಕ್​​, ಟೀಮ್​ ಇಂಡಿಯಾ ಪರ ಮಿಂಚಲು ಸಜ್ಜಾಗಿದ್ದಾರೆ.

Advertisment

ದೇಶಿ ಕ್ರಿಕೆಟ್​​ನಲ್ಲಿ ವೈಶಾಕ್ ಕಮಾಲ್
ಸ್ಟಾರ್​ ಕ್ರಿಕೆಟರ್ ಆಗಬೇಕು, ಟೀಮ್​ ಇಂಡಿಯಾ ಪರ ಆಡಬೇಕು ಎಂಬ ಕನಸು ಕಂಡು ಕ್ರಿಕೆಟ್​ ಮೇಲೆ ಪ್ರೀತಿ ಬೆಳೆಸಿಕೊಂಡ ವೈಶಾಕ್​​ ಬೇಸಿಕಲಿ ಬೌಲಿಂಗ್ ಆಲ್​ರೌಂಡರ್. ಈ ಯುವ ಆಟಗಾರ ಮೀಡಿಯಮ್​ ಸೀಮರ್​ ಬೌಲಿಂಗ್​​ ಜೊತೆ ಬ್ಯಾಟಿಂಗ್​​ನಲ್ಲೂ ಕಮಾಲ್​ ಮಾಡಬಲ್ಲ ಕಿಲಾಡಿ. 2021ರಲ್ಲಿ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವುದರೊಂದಿಗೆ ವೈಶಾಖ್ ಕ್ರಿಕೆಟ್​ ಜರ್ನಿ ಶುರುವಾಯ್ತು.

ಇದನ್ನು ಓದಿ:ಅಂಬಾನಿಯಿಂದ ದೀಪಾವಳಿ ಆಫರ್​​; ಈಗ 4G ಫೋನ್ 700 ರೂಪಾಯಿಗಿಂತ ಕಮ್ಮಿ ಬೆಲೆಗೆ ಲಭ್ಯ..!

2021ರ ಸೈಯದ್ ಮುಷ್ತಾಕ್​ ಅಲಿ ಟೂರ್ನಿಯಲ್ಲಿ 7 ವಿಕೆಟ್ ಮಾತ್ರವೇ ಬೇಟೆಯಾಡಿದ್ರೂ ಕೂಡ ವೈಶಾಕ್ ಬೌಲಿಂಗ್ ಎಲ್ಲರ ಗಮನ ಸೆಳೆದಿತ್ತು. ಇದೇ ಕಾರಣಕ್ಕೆ 2021ರ ವಿಜಯ್ ಹಜಾರೆ ಟೂರ್ನಿ ತಂಡಕ್ಕೂ ಎಂಟ್ರಿ ನೀಡಿದ್ರು. ಬಳಿಕ 2022ರಲ್ಲಿ ರಣಜಿ ಟೂರ್ನಿಗೂ ಕಾಲಿಟ್ಟರು. ಸಿಕ್ಕ ಅವಕಾಶ ಬಾಚಿಕೊಂಡ ವೈಶಾಕ್​, ಬ್ಯಾಕ್ ಟು ಬ್ಯಾಕ್ ಎರಡು ಸೀಸನ್​​​​​​ಗಳಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ರು.

Advertisment

ರಣಜಿಯಲ್ಲಿ ವೈಶಾಕ್
2022-23ರ ಸೀಸನ್​ನ ರಣಜಿ ಟೂರ್ನಿಯಲ್ಲಿ 8 ಪಂದ್ಯಗಳಿಂದ 31 ವಿಕೆಟ್ ಕಬಳಿಸಿದ್ದ ವೈಶಾಕ್, 2023-24ರ ಸೀಸನ್​ನಲ್ಲಿ 39 ವಿಕೆಟ್ ಬೇಟೆಯಾಡಿದ್ರು. ಸದ್ಯ ನಡೀತಿರೋ ರಣಜಿ ಟ್ರೋಫಿಯಲ್ಲೂ ವೈಶಾಕ್ ಮಿಂಚಿದ್ದಾರೆ. ಅಸಲಿಗೆ ವೈಶಾಕ್ ಬದಕನ್ನ ಬದಲಿಸಿದ್ದು 2022ರ ಮುಷ್ತಾಕ್ ಆಲಿ ಟೂರ್ನಿ. ಈ ಟೂರ್ನಿಯಲ್ಲಿ 8 ಪಂದ್ಯಗಳಿಂದ 15 ವಿಕೆಟ್ ಉರುಳಿಸಿದ್ದ ವೈಶಾಕ್, ಕೇವಲ 6.31ರ ಏಕಾನಮಿಯಲ್ಲಿ ರನ್ ನೀಡಿದ್ದರು. ಈ ಪರ್ಫಾಮೆನ್ಸ್​ನ ಬಳಿಕ ಆರ್​ಸಿಬಿ ಕ್ಯಾಂಪ್ ಸೇರಿದ್ದರು.

ಐಪಿಎಲ್​ನಲ್ಲಿ ಮಿಂಚಿನ ಪ್ರದರ್ಶನ
ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವೈಶಾಕ್​​, ರಜತ್​ ಪಾಟೀದಾರ್ ರಿಪ್ಲೇಸ್​ಮೆಂಟ್ ಪ್ಲೇಯರ್​ ಆಗಿ ಆರ್​ಸಿಬಿ ಸೇರಿದ್ದರು. 2023ರ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಪದಾರ್ಪಣೆ ಮಾಡಿದ ವೈಶಾಕ್, ಅದ್ಭುತ ಪ್ರದರ್ಶನ ನೀಡಿದರು. ಆರ್​ಸಿಬಿಯಲ್ಲಿ ವೈಶಾಕ್​​​ಗೆ ಹೆಚ್ಚು ಅವಕಾಶಗಳು ಸಿಗದಿದ್ದರೂ, ಅಲ್ಲಿದ್ದಾಗಲೇ ವೈಶಾಕ್​ ಭವಿಷ್ಯ ರೂಪುಗೊಂಡಿದ್ದು ಸುಳ್ಳಲ್ಲ.

ಡೊಮೆಸ್ಟಿಕ್​ ಹಾಗೂ ಐಪಿಎಲ್​ನಲ್ಲಿ ವೈಶಾಕ್ ವಿಜಯ್​ಕುಮಾರ್​ ನೀಡಿದ, ಪ್ರದರ್ಶನಕ್ಕೆ ಮನಸೋತಿದ್ದ ಬಿಸಿಸಿಐ, ಕಳೆದ ವರ್ಷ ವಿಶೇಷ ವಾರ್ಷಿಕ ಒಪ್ಪಂದದ ನೀಡಿತ್ತು. ಈ ಗುತ್ತಿಗೆಯಲ್ಲಿ ಸ್ಥಾನ ಪಡೆದ ಐವರ ಪೈಕಿ, ವೈಶಾಕ್ ವಿಜಯ್ ಕುಮಾರ್​ ಕೂಡ ಒಬ್ಬರಾಗಿದ್ದರು. ಪವರ್ ಪ್ಲೇ, ಡೆತ್‌ ಓವರ್‌ಗಳಲ್ಲಿ ಅದ್ಭುತ ದಾಳಿ ಸಂಘಟಿಸುವ ವೈಶಾಕ್, ಬೌಲಿಂಗ್​ನಲ್ಲಿ ನಾನಾ ವೇರಿಯೇಷನ್ಸ್ ಹೊಂದಿ​ದ್ದಾರೆ. ಯಾವುದೇ ಸನ್ನಿವೇಶದಲ್ಲಾದರೂ ಎದುರಾಳಿಯನ್ನ ಕಾಡಬಲ್ಲ ಈತನಿಗೆ, ಬ್ಯಾಟಿಂಗ್​ನಲ್ಲೂ ತಂಡಕ್ಕೆ ನೆರವಾಗುವ ಕೆಪಾಸಿಟಿ ಇದೆ.

Advertisment

ಒಟ್ನಲ್ಲಿ, ದೇಶಿ ಕ್ರಿಕೆಟ್​ನಲ್ಲಿ ಸ್ಥಿರ ಪ್ರದರ್ಶನ ನೀಡಿ ಮಿಂಚಿರುವ ವೈಶಾಕ್​, ಇದೇ ಮೊದಲ ಬಾರಿಗೆ ಬ್ಲ್ಯೂ ಜೆರ್ಸಿ ತೊಡಲು ಸಿದ್ಧರಾಗಿದ್ದಾರೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು ಕನ್ನಡಿಗ ಮಿಂಚಲಿ. ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳಲಿ ಅನ್ನೋದು ಕನ್ನಡಿಗರ ಆಶಯ.

ಇದನ್ನೂ ಓದಿ:ಪಂತ್ ಡೆಲ್ಲಿ ಕ್ಯಾಪಿಟಲ್ಸ್​ಗೆ ಗುಡ್​ಬೈ ಹೇಳಲು ಕಾರಣ 2! ಮಿಡ್​ನೈಟ್ ಟ್ವೀಟ್​​ ಹಿಂದಿನ ಸಿಕ್ರೇಟ್ ರಿವೀಲ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment