/newsfirstlive-kannada/media/post_attachments/wp-content/uploads/2025/01/Vijaya-Jananayakan.jpg)
ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ 69ನೇ ಸಿನಿಮಾದ ಟೈಟಲ್ ಫಿಕ್ಸ್ ಆಗಿದ್ದು, ಬಹುನಿರೀಕ್ಷಿತ ಸಿನಿಮಾದ ಫಸ್ಟ್ ಹಾಗೂ ಸೆಕೆಂಡ್ ಲುಕ್ ಕೂಡ ರಿಲೀಸ್ ಆಗಿದೆ. ದಳಪತಿ ವಿಜಯ್ 69ನೇ ಸಿನಿಮಾಗೆ ‘ಜನ ನಾಯಗನ್’ ಅನ್ನೋ ಟೈಟಲ್ ಘೋಷಣೆಯಾಗಿದೆ.
ದಳಪತಿ ವಿಜಯ್ ಅವರು ತಮ್ಮ ಜನ ನಾಯಗನ್ ಸಿನಿಮಾದಲ್ಲಿ ತಮ್ಮ ಅಭಿಮಾನಿಗಳ ಮುಂದೆ ಸೆಲ್ಫಿಗೆ ಸಖತ್ ಪೋಸ್ ಕೊಟ್ಟಿದ್ದಾರೆ. ಇದರ ಜೊತೆಗೆ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ.
/newsfirstlive-kannada/media/post_attachments/wp-content/uploads/2025/01/Vijay-Jana-Nayagan.jpg)
ವಿಜಯ್ ಅಭಿನಯದ ಜನ ನಾಯಗನ್ ಬಹು ನಿರೀಕ್ಷಿತ ಸಿನಿಮಾ ಇದಾಗಿದೆ. ದಳಪತಿ ವಿಜಯ್ ಅವರು ಈಗಾಗಲೇ ರಾಜಕೀಯಕ್ಕೆ ಧುಮುಕ್ಕಿದ್ದು ದಳಪತಿ ನಟನೆಯ ಕೊನೆಯ ಸಿನಿಮಾ ಎಂದೇ ಇದನ್ನ ಪ್ರಾಜೆಕ್ಟ್ ಮಾಡಲಾಗುತ್ತಿದೆ.
ಇದನ್ನೂ ಓದಿ: Thalapathy 69: ವಿಜಯ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ಬಿಗ್ ಬಜೆಟ್ ಸಿನಿಮಾ ಘೋಷಿಸಿದ KVN ಪ್ರೊಡಕ್ಷನ್ಸ್!
ಜನ ನಾಯಗನ್ ಸಿನಿಮಾವನ್ನು ಕನ್ನಡದ ಹೆಮ್ಮೆಯ ಪ್ರೊಡಕ್ಷನ್ ಹೌಸ್ KVN ನಿರ್ಮಾಣ ಮಾಡುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ (KVN Productions) ನಿರ್ಮಾಣದ ಮೊದಲ ತಮಿಳು ಸಿನಿಮಾ ಇದಾಗಿದೆ.
/newsfirstlive-kannada/media/post_attachments/wp-content/uploads/2024/10/Vijay-dalapathy.jpg)
KVN ಪ್ರೊಡಕ್ಷನ್ಸ್ ಸಂಸ್ಥೆಯ ಜೊತೆಗೆ ನಟ ದಳಪತಿ ವಿಜಯ್​ ಅವರ 69ನೇ ಸಿನಿಮಾ ಜನ ನಾಯಗನ್ ಭರ್ಜರಿಯಾಗಿ ತಯಾರಾಗುತ್ತಿದೆ. ಈಗಾಗಲೇ ಈ ಸಿನಿಮಾದ ಅದ್ದೂರಿ ಮುಹೂರ್ತ ಚೆನ್ನೈನಲ್ಲಿ ನಡೆದಿದೆ. ಕೆವಿಎನ್​ ಪ್ರೊಡಕ್ಷನ್ಸ್ ಸಂಸ್ಥೆಯ ಮುಖ್ಯಸ್ಥ ವೆಂಕಟ್ ಕೆ. ನಾರಾಯಣ್ ಅವರು ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ಮಾಡಲು ಜವಾಬ್ದಾರಿ ಹೊತ್ತಿದ್ದಾರೆ.
ದಳಪತಿ ವಿಜಯ್ ಅವರ ವೃತ್ತಿ ಜೀವನದ ಕೊನೆಯ ಸಿನಿಮಾ ಇದು ಅಂತ ಹೇಳಲಾಗ್ತಿದೆ. ರಾಜಕೀಯ ರಂಗ ಪ್ರವೇಶದ ಕಾರಣದಿಂದ ಸಿನಿಮಾದಿಂದ ದೂರ ಉಳಿಯಲು ವಿಜಯ್ ತೀರ್ಮಾನಿಸಿದ್ದಾರೆ. ವಿಜಯ್ ಅವರ ‘ಜನ ನಾಯಗನ್’ ಸಿನಿಮಾಗೂ ಅವರ ರಾಜಕೀಯ ಜರ್ನಿಗೂ ಸಾಮ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us