ಕರಿಮಣಿ ಮಾಲೀಕ ಬೆನ್ನಲ್ಲೇ ಹೊಸ ರೀಲ್ಸ್​ ಮಾಡಿದ ವಿಕಾಸ್.. ‘ ನೀರಿಲ್ಲ ನೀರಿಲ್ಲ’ ಫುಲ್​ ಟ್ರೆಂಡಿಂಗ್​!

author-image
Ganesh Nachikethu
Updated On
ಕರಿಮಣಿ ಮಾಲೀಕ ಬೆನ್ನಲ್ಲೇ ಹೊಸ ರೀಲ್ಸ್​ ಮಾಡಿದ ವಿಕಾಸ್.. ‘ ನೀರಿಲ್ಲ ನೀರಿಲ್ಲ’ ಫುಲ್​ ಟ್ರೆಂಡಿಂಗ್​!
Advertisment
  • ಬೆಂಗಳೂರಿನಲ್ಲಿ ಕುಡಿಯೋ ನೀರಿಗೂ ಜನರ ಪರದಾಟ
  • ಖಾಸಗಿ ಟ್ಯಾಂಕರ್ ದರ ಏರಿಕೆ ಮಾಡಿದ ಮಾಲೀಕರು!
  • ವಿಕಾಸ ವಿಕ್ಕಿಪೀಡಿಯ ಹೊಸ ರೀಲ್ಸ್​ ಫುಲ್​ ವೈರಲ್​

ಸಿಲಿಕಾನ್ ಸಿಟಿಯಲ್ಲಿ ರಣ ಬಿಸಿಲು ಜನರ ನೆತ್ತಿ ಸುಡ್ತಿದೆ. ಮತ್ತೊಂದು ಕಡೆ ಜೀವಜಲಕ್ಕಾಗಿ ಪರದಾಟ ಶುರುವಾಗಿದೆ. ಜನ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಆದರೆ ಖಾಸಗಿ ಟ್ಯಾಂಕರ್ ಮಾಲೀಕರು ಏಕಾಏಕಿ ದರ ಏರಿಕೆ ಮಾಡಿ ಜನರಿಗೆ ಶಾಕ್ ನೀಡಿದ್ದಾರೆ.

publive-image

ಬಿಬಿಎಂಪಿ ಜಲಮಂಡಳಿ, ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಾ ಜನ ಅನಿವಾರ್ಯವಾಗಿ ಕೇಳಿದಷ್ಟು ಹಣ ಕೊಟ್ಟು ನೀರು ಖರೀದಿಸ್ತಿದ್ದಾರೆ. ಅದರಲ್ಲೂ ಒಂಡಲ್ಲ, ಎರಡಲ್ಲ, ಮೂರು ನಾಲ್ಕು ಸಾವಿರ ನೀಡಿ ನೀರು ಖರೀದಿ ಮಾಡಬೇಕಾದ ಪರಿಸ್ಥಿ ನಿರ್ಮಾಣವಾಗಿದೆ.


">March 7, 2024

ಇನ್ನು, ಈ ಮಧ್ಯೆಯೇ ನಾನು ನಂದಿನಿ ಖ್ಯಾತಿಯ ವಿಕಾಸ್​ ವಿಕ್ಕಿಪೀಡಿಯ ಹೊಸ ರೀಲ್ಸ್​ ಒಂದು ವೈರಲ್​ ಆಗಿದೆ. ಓನಲ್ಲ ನೀರಿಲ್ಲ ಎಂದು ರೀಲ್ಸ್​ ಮಾಡಿದ್ದು, ಇದು ಇಂದು ಬೆಂಗಳೂರು ಜನ ಎದುರಿಸುತ್ತಿರೋ ಜಲಕ್ಷಾಮವನ್ನು ಎತ್ತಿ ತೋರಿಸುತ್ತಿದೆ. ಈ ರೀಲ್ಸ್​ ಫುಲ್​ ವೈರಲ್​ ಆಗಿದ್ದು, ಜನ ಭಾರೀ ಮೆಚ್ಚುಕೊಂಡಿದ್ದಾರೆ.

ಈ ಹಿಂದೆ ವಿಕಾಸ್​ ನಾನು ನಂದಿನಿ ರೀಲ್ಸ್​ ಮಾಡಿದ್ದರು. ಇದು ಎಲ್ಲೆಡೆ ಭಾರೀ ವೈರಲ್​ ಆಗಿತ್ತು. ಬಳಿಕ ಕರಿಮಣಿ ಮಾಲೀಕ ಕೂಡ ಫುಲ್​ ಟ್ರೆಂಡ್​ ಆಗಿತ್ತು. ಈಗ ನೀರಿಲ್ಲ ನೀರಿಲ್ಲ ರೀಲ್ಸ್​ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment