Advertisment

ಚಂದ್ರನ ಮೇಲ್ಮೈ ನ ಹೊಸ ಪೋಟೋ ಸೆರೆ ಹಿಡಿದ ವಿಕ್ರಮ್​ ಲ್ಯಾಂಡರ್; ಇಲ್ಲಿದೆ ನೋಡಿ

author-image
AS Harshith
Updated On
ಚಂದ್ರನ ಮೇಲ್ಮೈ ನ ಹೊಸ ಪೋಟೋ ಸೆರೆ ಹಿಡಿದ ವಿಕ್ರಮ್​ ಲ್ಯಾಂಡರ್; ಇಲ್ಲಿದೆ ನೋಡಿ
Advertisment
  • ಜುಲೈ 14ರಂದು ಚಂದ್ರಯಾನ-3 ಉಡಾವಣೆ ಮಾಡಲಾಗಿತ್ತು
  • ವಿಕ್ರಂ ಲ್ಯಾಂಡರ್​ ಕ್ಲಿಕ್ಕಿಸಿದ ಚಂದ್ರನ ಮೇಲ್ಮೈ ನ ಹೊಸ ಪೋಟೋ ಇಲ್ಲಿದೆ
  • ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯ್​ಡೆನ್ಸ್​ ಕ್ಯಾಮೆರಾದಿಂದ ಸೆರೆ

ಇಡೀ ದೇಶವಾಸಿಗಳಿಗೆ ಇಸ್ರೋಯಿಂದ ಶುಭಸುದ್ದಿ ಹೊರ ಬಿದ್ದಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಲು ಮತ್ತಷ್ಟು ಹತ್ತಿರವಾಗಿದ್ದ ವಿಕ್ರಮ್​ ಲ್ಯಾಂಡರ್​ ಚಂದ್ರನ ಮೇಲ್ಮೈ ನ ಹೊಸ ಪೋಟೋ ಸೆರೆ ಹಿಡಿದು ಕಳಿಸಿದೆ.

Advertisment

ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯ್​ಡೆನ್ಸ್​ ಕ್ಯಾಮೆರಾ ಈ ಪೋಟೋಗಳನ್ನ ಸೆರೆ ಹಿಡಿದಿದೆ. ಈ ಕ್ಯಾಮೆರಾ ಸೇಫ್ ಲ್ಯಾಂಡಿಂಗ್ ಪ್ರದೇಶವನ್ನ ಹುಡುಕೋದಕ್ಕೆ ನೆರವಾಗುತ್ತೆ. ಗುಂಡಿ, ಕುಳಿ, ಅಡ್ಡಿ ಇಲ್ಲದ ಪ್ರದೇಶದಲ್ಲಿ ಲ್ಯಾಂಡರ್ ಲ್ಯಾಂಡಿಂಗ್​ ಮಾಡೋದಕ್ಕೆ ಸಹಾಯ ಮಾಡುತ್ತೆ.

ಚಂದ್ರಯಾನ-3

ಇಸ್ರೋದ ಮಹಾತ್ವಾಕಾಂಕ್ಷೆಯ ಚಂದ್ರಯಾನ-3ಅನ್ನು ಜುಲೈ 14ರಂದು ಉಡಾವಣೆ ಮಾಡಲಾಗಿತ್ತು. ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆಗುವ ಅಮೃತಘಳಿಗೆಗೆ ಕ್ಷಣಗಣನೆ ಆರಂಭ ಆಗಿದೆ. ಇಡೀ ವಿಶ್ವವೇ ಇಸ್ರೋದ ಸಾಧನೆ ನೋಡಲು ಕಾತರಗೊಂಡಿದೆ.

Advertisment

ಭಾರತದ ವಿಕ್ರಮ್ ಲ್ಯಾಂಡರ್ ಚಂದ್ರನಿಗೆ ಅತ್ಯಂತ ಸಮೀಪ ಇರುವ 134 ಕಿಮೀ ದೂರದ ಕಕ್ಷೆ ತಲುಪಿದೆ. ಈ ಕಕ್ಷೆಯಿಂದಲೇ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡಿಂಗ್‌ಗೆ ಇಸ್ರೋ ಪ್ರಯತ್ನಿಸಲಿದೆ. 25 ಕಿಲೋ ಮೀಟರ್ x 134 ಕಿಲೋ ಮೀಟರ್ ಕಕ್ಷೆ ಚಂದ್ರನ ಸಮೀಪದ ಕಕ್ಷೆಯಾಗಿದ್ದು ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಆಗಸ್ಟ್ 23ರಂದು ನಡೆಯಲಿದೆ. ಹೀಗಾಗಿ ಇಡೀ ಜಗತ್ತು ಭಾರತದ ಕಡೆ ಕಣ್ಣಿಟ್ಟು ಕಾಯುತ್ತಿದೆ. ಈ ಬಾರಿಯ ಚಂದ್ರಯಾನ-3ಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು ಚಂದ್ರಯಾನ-3 ಅತ್ಯಾಧುನಿಕವಾದ ತಂತ್ರಜ್ಞಾನ ಹೊಂದಿದ್ದು ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ ಕೂಡ ಹೈಫೈ ಆಗಿದೆ. ಸರಿಯಾದ ಹಾಗೂ ಸಮತಟ್ಟು ಜಾಗದಲ್ಲಿ ಲ್ಯಾಂಡಿಂಗ್ ಹುಡುಕಲು ಸಹಾಯ ಮಾಡಲಿದೆ. ಈಗಾಗಲೇ ನೌಕೆಯ ಲ್ಯಾಂಡರ್ ವೇಗವನ್ನು ಇಸ್ರೋ ತಗ್ಗಿಸಿದೆ. ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ನೌಕೆ ಸಾಫ್ಟ್ ಲ್ಯಾಂಡ್ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment