Advertisment

ಅಬ್ಬಬ್ಬಾ.. ಲಕ್ಕಿ ಡ್ರಾ ವಿಜೇತರಿಗೆ ಸಿಗಲಿದೆ ಕುರಿ, ಮೇಕೆ, ಜಾನಿ ವಾಕರ್ ಸ್ಕ್ಯಾಚ್ ವಿಸ್ಕಿ.. ನೀವು ಅದೃಷ್ಟ ಪರೀಕ್ಷಿಸಿ!

author-image
Veena Gangani
Updated On
ಅಬ್ಬಬ್ಬಾ.. ಲಕ್ಕಿ ಡ್ರಾ ವಿಜೇತರಿಗೆ ಸಿಗಲಿದೆ ಕುರಿ, ಮೇಕೆ, ಜಾನಿ ವಾಕರ್ ಸ್ಕ್ಯಾಚ್ ವಿಸ್ಕಿ.. ನೀವು ಅದೃಷ್ಟ ಪರೀಕ್ಷಿಸಿ!
Advertisment
  • 4 ಗಂಟೆಗಳಲ್ಲಿ 600 ಲಾಟರಿ ಟಿಕೆಟ್ ಖರೀದಿಸಿದ ಜನರು ಸಾಮಾನ್ಯರು
  • ತಾಂಡೂರು ಬಳಿಯ ಬೋಯಪಲ್ಲಿ ಗ್ರಾಮದಲ್ಲಿ ದಸರಾ ಅದ್ಧೂರಿ ಆಚರಣೆ
  • ಹಬ್ಬಕ್ಕಾಗಿ ಬೋಯಪಲ್ಲಿ ಗ್ರಾಮದಲ್ಲಿ 6 ರೈತರು ಸೇರಿ ಲಕ್ಕಿ ಡ್ರಾ ಆಯೋಜನೆ

ಲಕ್ಕಿ ಡ್ರಾ ವಿಜೇತರಿಗೆ ಗೃಹೋಪಯೋಗಿ ವಸ್ತು, ಬೈಕ್, ದುಡ್ಡು, ಕೊಡುವುದನ್ನು ಕೇಳಿದ್ದೀರಿ. ಇಲ್ಲೊಂದು ಗ್ರಾಮದಲ್ಲಿ ದಸರಾ ನಿಮಿತ್ತ ವಿಶೇಷ ಲಕ್ಕಿ ಡ್ರಾ ನಡೆಯುತ್ತಿದ್ದು ಗೆದ್ದರೆ ಬಹುಮಾನವಾಗಿ ಕುರಿ, ವಿಸ್ಕಿ ಸಿಗಲಿದೆ. ತೆಲಂಗಾಣದ ತಾಂಡೂರು ಬಳಿಯ ಬೋಯಪಲ್ಲಿ ಗ್ರಾಮದಲ್ಲಿ ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು ಹಬ್ಬಕ್ಕಾಗಿ ಬೋಯಪಲ್ಲಿ ಗ್ರಾಮದ 6 ಯುವ ರೈತರು ಸೇರಿ ಲಕ್ಕಿ ಡ್ರಾ ಆಯೋಜಿಸಿದ್ದಾರೆ.

Advertisment

ಇದನ್ನೂ ಓದಿ:ಮಹಾಲಕ್ಷ್ಮಿ ಕೊ*ಲೆಗಾರ ಶವವಾಗಿ ಪತ್ತೆ.. ಪೀಸ್, ಪೀಸ್‌ ಮಾಡಿದ ‘ಮುಕ್ತಿ’ ಮಾಡಿದ್ದೇನು? ಪಾಪಿ ಅಂತ್ಯ ಹೇಗಾಯ್ತು?

publive-image

ಈ ಲಕ್ಕಿ ಡ್ರಾ ಮೂಲಕ ಆಡು, ಕೋಳಿ, ಪ್ರೀಮಿಯಂ ಸ್ಕ್ಯಾಚ್ ವಿಸ್ಕಿ ಬಹುಮಾನವಾಗಿ ನೀಡುತ್ತಿರುವುದು ವಿಶೇಷ. 10 ವಿಜೇತರಿಗೆ ಬಹುಮಾನ ನೀಡಲಾಗುತ್ತಿದ್ದು, ಮೊದಲ ಅದೃಷ್ಟಶಾಲಿಗೆ ಬಹುಮಾನವಾಗಿ ಗಂಡು ಕುರಿ, 2ನೇ ಬಹುಮಾನವಾಗಿ ಗಂಡು ಮೇಕೆ, 3 ರಿಂದ 6 ವಿಜೇತರಿಗೆ ಜಾನಿ ವಾಕರ್ ಸ್ಕ್ಯಾಚ್ ವಿಸ್ಕಿ ನೀಡುತ್ತಿದ್ದಾರೆ. 8 ರಿಂದ 10ನೇ ಬಹುಮಾನ ವಿಜೇತರಿಗೆ ನಾಟಿ ಕೋಳಿ ಬಹುಮಾನವಿದೆ.

publive-image

ಅಂದಹಾಗೆ ದಸರಾ ಧಮಾಕಾ ಲಕ್ಕಿ ಡ್ರಾ ಟಿಕೆಟ್ ಆನ್​​ಲೈನ್ ಮೂಲಕವೂ ಮಾರಾಟ ಮಾಡುತ್ತಿದ್ದಾರೆ. ಟಿಕೆಟ್ ದರ ಕೇವಲ 100 ರೂ. ಅಕ್ಟೋಬರ್ 10ರಂದು ಲಾಟರಿ ಡ್ರಾ ಘೋಷಣೆಯಾಗಲಿದೆ. ಲಕ್ಕಿ ಡ್ರಾಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, 24 ಗಂಟೆಗಳಲ್ಲಿ 600 ಲಾಟರಿ ಟಿಕೆಟ್ ಮಾರಾಟವಾಗಿವೆ. ತೆಲಂಗಾಣ, ಆಂಧ್ರ, ಮಹಾರಾಷ್ಟ್ರದಿಂದಲೂ ಟಿಕೆಟ್ ಕೊಳ್ಳಲು ಜನ ಮುಗಿಬಿದ್ದಿದ್ದಾರೆ. ರೈತರು ಆಯೋಜಿಸಿರುವ ಲಕ್ಕಿ ಡ್ರಾ ಲಾಟರಿ ಟಿಕೆಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment