newsfirstkannada.com

ಕೊಹ್ಲಿಯನ್ನು ತಬ್ಬಿ ಪೊಲೀಸ್ರಿಂದ ಒದೆ ತಿಂದ ಫ್ಯಾನ್​ಗೆ ಊರಲ್ಲಿ ಅದ್ದೂರಿ ಸ್ವಾಗತ.. ಇದಕ್ಕೂ ಇದೆ ಒಂದು ಕಾರಣ..!

Share :

Published January 18, 2024 at 1:06pm

Update January 18, 2024 at 1:07pm

  ಇಂದೋರ್​​ನಲ್ಲಿ ಮೈದಾನಕ್ಕೆ ನುಗ್ಗಿ ಹೈಡ್ರಾಮಾ

  ಅಫ್ಘಾನ್ ವಿರುದ್ಧ ಪಂದ್ಯದ ವೇಳೆ ಘಟನೆ

  ಕೊಹ್ಲಿಯ ಪಾದ ಮುಟ್ಟಿ ನಮಸ್ಕರಿಸಿದ್ದ ಅಭಿಮಾನಿ

ವಿರಾಟ್​ ಕೊಹ್ಲಿಯನ್ನು ನೋಡಬೇಕು, ಮಾತನಾಡಿಸಬೇಕು ಅನ್ನೋದು ಪ್ರತಿಯೊಬ್ಬ ಅಭಿಮಾನಿಯ ಕನಸು. ಹಾಗಂತ ಮೈದಾನಕ್ಕೆ ನುಗ್ಗೋದು ತಪ್ಪು. ಆದ್ರೆ ಈ ಊರಲ್ಲಿ ಆ ತಪ್ಪನ್ನು ಮಾಡಿದವನಿಗೆ ಸನ್ಮಾನ ಮಾಡಿದ್ದಾರೆ.

ಮೊನ್ನೆ ಇಂದೋರ್​ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ಕೊಹ್ಲಿಯ ಹಗ್​ ಮಾಡಿ, ಕಾಲಿಗೆ ಬಿದ್ದು ಆಶಿರ್ವಾದ ಪಡೆದ. ಆ ಬಳಿಕ ಸೆಕ್ಯೂರಿಟಿ ಹಾಗೂ ಪೊಲೀಸರು ಆತನನ್ನ ಮೈದಾನದಿಂದ ಹೊರಗೆ ಎಳೆದುಕೊಂಡು ಬಂದರು. ಈ ವೇಳೆ ಕೊಹ್ಲಿ ಹೊಡೆಯಬೇಡಿ ಎಂದು ಹೇಳಿದರು. ಪೊಲೀಸ್​​ ಸ್ಟೇಷನ್​ಗೆ ಕರೆದುಕೊಂಡು ಹೋಗಿ ಪೊಲೀಸರು ತಮ್ಮ ಕೆಲಸವನ್ನು ಮಾಡಿದ್ದರು.

ಇದೆಲ್ಲಾ ಮುಗಿದ ಮೇಲೆ ರಿಲೀಸ್​ ಆದ ಕೊಹ್ಲಿಯ ಫ್ಯಾನ್​, ತವರಿಗೆ ಮರಳಿದಾಗ ಸರ್​​​ಪ್ರೈಸ್​​ ಕಾದಿತ್ತು. ಇಡೀ ಊರ ಜನ, ಕುಟುಂಬಸ್ಥರು ಅದ್ದೂರಿ ಸ್ವಾಗತ ಕೋರಿದ್ದಾರೆ. ಯಾಕಂದ್ರೆ ಆ ಊರಿನಲ್ಲಿರೋ ಬಹುತೇಕರು ಕೊಹ್ಲಿಯ ಅಭಿಮಾನಿಗಳು. ನಮ್ಮೂರ ಹುಡುಗ ನಾವು ಆರಾಧಿಸೋ ಕೊಹ್ಲಿಯ ಪಾದ ಮುಟ್ಟಿ ಆಶಿರ್ವಾದ ಪಡೆದಿದ್ದು ಅವರಿಗೆ ಹೆಮ್ಮೆಯ ವಿಚಾರವಂತೆ. ಹೀಗಾಗಿಯೇ ಕೊಹ್ಲಿ ದರ್ಶನ ಪಡೆದ ಅಭಿಮಾನಿಗೆ ಅದ್ದೂರ ಸ್ವಾಗತ ಮಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿಯನ್ನು ತಬ್ಬಿ ಪೊಲೀಸ್ರಿಂದ ಒದೆ ತಿಂದ ಫ್ಯಾನ್​ಗೆ ಊರಲ್ಲಿ ಅದ್ದೂರಿ ಸ್ವಾಗತ.. ಇದಕ್ಕೂ ಇದೆ ಒಂದು ಕಾರಣ..!

https://newsfirstlive.com/wp-content/uploads/2024/01/KOHLI-6.jpg

Load More