/newsfirstlive-kannada/media/post_attachments/wp-content/uploads/2025/05/vinay-gowda11.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಹಾಗೂ 11ರ ಸ್ಪರ್ಧಿಗಳು ಒಂದಾಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಈ ಇಬ್ಬರು ಬಿಗ್ಬಾಸ್ನಿಂದ 3 ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು.
ಇದನ್ನೂ ಓದಿ: ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು ನಟಿಗೆ ಬ್ಲಾಕ್ ಮೇಲ್.. ಮಡೆನೂರು ಮನು ಮೇಲೆ ಸಾಲು ಸಾಲು ಆರೋಪ
ಬಿಗ್ಬಾಸ್ನಿಂದ ಆಚೆ ಬಂದ ಬಳಿಕ ಇದೇ ಮೊದಲ ಬಾರಿಗೆ ಈ ಇಬ್ಬರು ಒಟ್ಟಾಗಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಹೌದು. ಬಿಗ್ಬಾಸ್ ಮೂಲಕ ಅತೀ ಹೆಚ್ಚು ಖ್ಯಾತಿ ಪಡೆದುಕೊಂಡಿರೋ, ಸೀಸನ್ 10 ಹಾಗೂ 11ರ ಮಾಜಿ ಸ್ಪರ್ಧಿಗಳು ಆಗಿರೋ ಮೋಕ್ಷಿತಾ ಪೈ ಹಾಗೂ ವಿನಯ್ ಗೌಡ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
View this post on Instagram
ದೃತಿ ಕ್ರಿಯೇಷನ್ಸ್ನಲ್ಲಿ ನಿರ್ಮಾಣವಾಗುತ್ತಿರುವ ಸೀರಿಸ್ವೊಂದರಲ್ಲಿ ಮೋಕ್ಷಿತಾ ಪೈ ಹಾಗೂ ವಿನಯ್ ಗೌಡ ಅಭಿನಯಿಸುತ್ತಿದ್ದಾರೆ. ಈಗಾಗಲೇ ಈ ಇಬ್ಬರು ನಟಿಸಿರೋ ಒಂದು ಸಣ್ಣ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಬಗ್ಗೆ ಮೋಕ್ಷಿತಾ ಪೈ ಹಾಗೂ ವಿನು್ ಗೌಡ ಇನ್ನಷ್ಟು ಮಾಹಿತಿ ನೀಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ