/newsfirstlive-kannada/media/post_attachments/wp-content/uploads/2025/03/Vinay-Rajat-kishan-Arrest-2-1.jpg)
ಬೆಂಗಳೂರು: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ಗೆ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಇದನ್ನೂ ಓದಿ:ವಿನಯ್ ಗೌಡ, ರಜತ್ ಮೇಲೆ ಕಮಿಷನರ್ ಗರಂ.. ಮತ್ತೊಂದು ಕೇಸ್ ದಾಖಲಾಗಿರುವ ಬಗ್ಗೆ ಮಾಹಿತಿ..!
ರೀಲ್ಸ್ ಮಾಡುವ ಬರದಲ್ಲಿ ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಮಚ್ಚು ಹಿಡಿದುಕೊಂಡು ವಿಡಿಯೋ ಶೂಟ್ ಮಾಡಿದ್ದರು. ಹೀಗಾಗಿ ಈ ಇಬ್ಬರ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ FIR ದಾಖಲಾಗಿತ್ತು. ಇದಾದ ಬಳಿಕ ವಿಚಾರಣೆಗೆ ಬರುವಂತೆ ಪೊಲೀಸರು ಸೂಚನೆ ಕೊಟ್ಟಿದ್ದರು. ಆದ್ರೆ, ವಿನಯ್ ಗೌಡ ಹಾಗೂ ರಜತ್ ಕಿಶನ್ ಫೈಬರ್ ಮಚ್ಚು ನೀಡಿ ಯಾಮಾರಿಸಿದ್ದರು. ಹೀಗಾಗಿ ಪೊಲೀಸರು ಆ ರಿಯಲ್ ಮಚ್ಚಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದರ ಮಧ್ಯೆ 24ನೇ ಎಸಿಎಂಎಂ ನ್ಯಾಯಾಲಯವು ರಜತ್ ಹಾಗೂ ವಿನಯ್ ಗೌಡಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಇಂದು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಪೊಲೀಸರಿಂದ ಮನವಿ ಮಾಡಿಕೊಂಡಿದ್ದರು. ಆದ್ರೆ, ಆರೋಪಿಗಳ ಪರ ವಕೀಲ ಪ್ರಕಾಶ್ ಅವರ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ರಜತ್ ಹಾಗೂ ವಿನಯ್ ಗೌಡಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ