/newsfirstlive-kannada/media/post_attachments/wp-content/uploads/2025/03/Rajat-Vinay-release-from-jail-10.jpg)
ಕನ್ನಡದ ಬಿಗ್​ಬಾಸ್​​ ಮಾಜಿ ಸ್ಪರ್ಧಿಗಳಾದ ವಿನಯ್​ ಗೌಡ ಹಾಗೂ ರಜತ್​ ಕಿಶನ್​ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಮಚ್ಚು ಹಿಡಿದುಕೊಂಡು ರೀಲ್ಸ್ ಮಾಡಿದ್ದ ವಿನಯ್ ಗೌಡ ಹಾಗೂ ರಜತ್​ ಕಿಶನ್​ನನ್ನು ಮಾರ್ಚ್ 25ರಂದು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದರು.
/newsfirstlive-kannada/media/post_attachments/wp-content/uploads/2025/03/Rajath-Vinay-gowda-reels-Case-3.jpg)
ಪೊಲೀಸರು ಇಬ್ಬರನ್ನು ವಶಕ್ಕೆ ಪಡೆಯುತ್ತಿದ್ದಂತೆ ರಜತ್​ ಪತ್ನಿ ಅಕ್ಷತಾ ಫೈಬರ್ ಮಚ್ಚನ್ನು ನೀಡಿದ್ದರು. ರೀಲ್ಸ್​ನಲ್ಲಿ ಬಳಸಿದ ಅಸಲಿ ಮಚ್ಚಿಗೂ ಹಾಗೂ ಪೊಲೀಸರಿಗೆ ನೀಡಿದ್ದ ಫೈಬರ್ ಮಚ್ಚಿಗೂ ತುಂಬಾನೇ ವ್ಯತ್ಯಾಸ ಇದ್ದಿದ್ದರಿಂದ ಆರೋಪಿಗಳನ್ನು ಬಂಧನವಾಗಿತ್ತು.
/newsfirstlive-kannada/media/post_attachments/wp-content/uploads/2025/03/Rajath-Vinay-gowda-reels-Case-4.jpg)
ಇದೀಗ ರಜತ್​ ಹಾಗೂ ವಿನಯ್​ ಅಸಲಿ ಸತ್ಯ ಬಾಯ್ಬಿಟ್ಟಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಮೃತದೇಹ ಬಿಸಾಡಿದ್ದ ಜಾಗದಲ್ಲೇ ರಜತ್ ಹಾಗೂ ವಿನಯ್ ಮಚ್ಚು ಬಿಸಾಡಿರೋದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗ ರೀಲ್ಸ್​ನಲ್ಲಿ ಬಳಸಿದ್ದ ಮಚ್ಚನ್ನೂ ಸುಮ್ಮನಹಳ್ಳಿ ರಾಜಕಾಲುವೆಗೆ ಬಿಸಾಡಿದ್ದಾಗಿ ತಿಳಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/03/Vinay-Rajat-kishan-Reels-Case.jpg)
ಹೀಗಾಗಿ ವಿನಯ್ ರಜತ್​ರನ್ನು ಸುಮ್ಮನಹಳ್ಳಿ ರಾಜಕಾಲುವೆ ಬಳಿ ಕರೆದುಕೊಂಡು ಹೋಗಿ ಮಹಜರ್ ನಡೆಸಿದ್ದಾರೆ. ಆದ್ರೆ, ಪೊಲೀಸರ ಮಹಜರ್ ವೇಳೆಯೂ ರೀಲ್ಸ್​ನಲ್ಲಿ ಬಳಸಿದ್ದ ಮಚ್ಚು ಪತ್ತೆಯಾಗಿರಲಿಲ್ಲ. ಸದ್ಯ ಆರೋಪಿಗಳು ಪೊಲೀಸರಿಗೆ ಮೊದಲು ನೀಡಿದ್ದ ಫೈಬರ್ ಮಚ್ಚನ್ನ ಎಫ್.ಎಸ್.ಎಲ್ ಗೆ ರವಾನೆ ಮಾಡಿದ್ದಾರೆ. ಎಫ್.ಎಸ್.ಎಲ್ ವರದಿ ಬರುತ್ತಿದ್ದಂತೆ ಆರ್ಮ್ಸ್ ಆಕ್ಟ್ ಜೊತೆಗೆ ಸಾಕ್ಷನಾಶ ಸೆಕ್ಷನ್ ಅಡಿ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us