ರಜತ್.. ನನ್ನ ಇಗೋ ನಿನಗಿಂತ ದೊಡ್ಡದು; ಗೆಳೆಯನ ಮಾತಿಗೆ ರೊಚ್ಚಿಗೆದ್ದ ವಿನಯ್​ ಗೌಡ!

author-image
Veena Gangani
Updated On
ರಜತ್.. ನನ್ನ ಇಗೋ ನಿನಗಿಂತ ದೊಡ್ಡದು; ಗೆಳೆಯನ ಮಾತಿಗೆ ರೊಚ್ಚಿಗೆದ್ದ ವಿನಯ್​ ಗೌಡ!
Advertisment
  • ಮಚ್ಚು ಹಿಡಿದು ರೀಲ್ಸ್ ಮಾಡಿದ ರಜತ್​, ವಿನಯ್​ ಪ್ರಕರಣ
  • ಮಚ್ಚು ಹಿಡಿದು ರೀಲ್ಸ್ ಮಾಡಿದ್ದು ರಜತ್ ಐಡಿಯಾ ಎಂದ ವಿನಯ್
  • ನ್ಯೂಸ್​​ಫಸ್ಟ್​ಗೆ ಬಿಗ್​ಬಾಸ್​​ ಮಾಜಿ ಸ್ಪರ್ಧಿ ವಿನಯ್ ಹೇಳಿದ್ದೇನು?

ಸೋಷಿಯಲ್​ ಮೀಡಿಯಾದಲ್ಲಿ ಬಿಗ್​ಬಾಸ್​ ಮಾಜಿ ಸ್ಪರ್ಧಿಗಳು ಮಚ್ಚು ಹಿಡಿದುಕೊಂಡು ರೀಲ್ಸ್​ ಮಾಡಿದಕ್ಕೆ ಕೋರ್ಟ್ ಮೆಟ್ಟಿಲೇರುವಂತೆ ಆಗಿತ್ತು. ಆದ್ರೆ, ಈ ಒಂದು ರೀಲ್ಸ್​ನಿಂದ ವಿನಯ್​ ಗೌಡ ಹಾಗೂ ರಜತ್​ ಕಿಶನ್​ ಸ್ನೇಹದ ಮಧ್ಯೆ ಬಿರುಕು ಮೂಡುವುದಕ್ಕೆ ಕಾರಣವಾಯ್ತಾ ಎಂಬ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ:ವಿನಯ್ ಗೌಡ ಕೈಯಲ್ಲಿ ಕೊಲೆ, ದರೋಡೆ ಮಾಡ್ಸಿಲ್ಲ; ಕುಚಿಕು ಸ್ನೇಹಿತರ ಮಧ್ಯೆ ಬಿರುಕು..!

publive-image

ನಿನ್ನೆ, ನ್ಯೂಸ್​ಫಸ್ಟ್​ನೊಂದಿಗೆ ರಜತ್​ ಕಿಶನ್​ ಮಾತಾಡಿ, ನಂದು ಹಾಗೂ ವಿನಯ್​ ಗೌಡ ಸ್ನೇಹ ಅಷ್ಟಾಗಿ ಚೆನ್ನಾಗಿಲ್ಲ. ನಮ್ಮಿಬ್ಬರ ಮಧ್ಯೆ ವೈಮನಸ್ಸು ಇದೆ ಅಂತ ಹೇಳಿದ್ದರು. ಇದೀಗ ಈ ಬಗ್ಗೆ ಖುದ್ದು ವಿನಯ್​ ಗೌಡ ಮಾತಾಡಿದ್ದಾರೆ. ನ್ಯೂಸ್​ಫಸ್ಟ್​ನೊಂದಿಗೆ ಮಾತಾಡಿದ ವಿನಯ್​ ಗೌಡ, ಮಚ್ಚು ಹಿಡಿದು ರೀಲ್ಸ್ ಮಾಡಿದ್ದು ರಜತ್ ಐಡಿಯಾ. ರಜತ್ ಜೊತೆ ರೀಲ್ಸ್ ಮಾಡಲ್ಲ ಅಂದಿದ್ದು ತಮಾಷೆಗಾಗಿ. ಆ ಇಂಟರ್ವ್ಯೂನಲ್ಲಿ ತಮಾಷೆಗೆ ಹೇಳಿದ್ದೆ. ನನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಗಳನ್ನ ನನ್ನ ಪಿಆರ್ ಟೀಂ ಹ್ಯಾಂಡಲ್ ಮಾಡುತ್ತೆ. ರಜತ್ ಸಹವಾಸ ಬೇಡ ಅನ್ನೋ ಕಮೆಂಟ್​ಗಳಿಗೆ ಲೈಕ್ ಮಾಡಿರೋದು ನನಗೆ ಗೊತ್ತಿಲ್ಲ. ರಜತ್ ನನಗಿಂತ ಹತ್ತು ವರ್ಷ ಸಣ್ಣವನು. ನನ್ನ ಇಗೋ ಅವನಿಗಿಂತ ದೊಡ್ಡದು. ಮೊದಲು ಅವನೇ ಫೋನ್ ಮಾಡಲಿ ನಾನು ಮಾತಾಡ್ತೀನಿ ಎಂದಿದ್ದಾರೆ.

ಮತ್ತೆ ಮಾತನ್ನು ಮುಂದುವರೆಸಿದ ಅವರು, ಸುದೀಪ್ ಸರ್ ಕೂಡ ನನಗೆ ತುಂಬಾ ಸಹಾಯ ಮಾಡಿದ್ದಾರೆ. ಅವರು ನನಗೆ ಗಾಡ್ ಫಾದರ್. ಕೇಸ್ ಆದಾಗ ತುಂಬಾ ಸಹಾಯ ಮಾಡಿದ್ದಾರೆ. ಇಲ್ಲಿ ಫ್ಯಾನ್ ವಾರ್ ಎಲ್ಲಾ ಬೇಡ. ಬಾಯ್ಸ್ ಅಂಡ್ ಗರ್ಲ್ಸ್ ಶೂಟಿಂಗ್​ನಲ್ಲಿ ಭಾಗಿಯಾಗ್ತೀನಿ. ಆದ್ರೆ, ಸಿನಿಮಾ ಶೂಟಿಂಗ್ ಇರೋ ಕಾರಣ ಈ ವಾರ ಹೋಗ್ತಿಲ್ಲ. ಮತ್ತೆ ಈ ವಾರ ಹೋಗಿಲ್ಲ ಅಂತ ಬೇರೆ ಅರ್ಥ ಕಲ್ಪಿಸೋದು ಬೇಡ. ಸಣ್ಣ ವಿಚಾರಕ್ಕೆ ಸ್ನೇಹ ಕಳೆದುಕೊಳ್ಳುವುದಿಲ್ಲ. ನಮಗೆ ಗೊತ್ತಿಲ್ಲದೇ ಈ ರೀತಿ ತಪ್ಪಾಗಿದೆ. ಯಾರು ಕೂಡ ಈ ರೀತಿ ರೀಲ್ಸ್ ಮಾಡ್ಬೇಡಿ. ಮುಂದೆ ನಾನು ರಜತ್ ಜೊತೆಯಾಗಿ ರೀಲ್ಸ್ ಮಾಡ್ತೀವಿ. ಆದ್ರೆ ಅದರಲ್ಲಿ ಏನು ಬಳಸದೇ ರೀಲ್ಸ್ ಮಾಡ್ತೀವಿ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment