/newsfirstlive-kannada/media/post_attachments/wp-content/uploads/2025/03/Rajath-Vinay-gowda-reels-Case-5.jpg)
ಕನ್ನಡದ ಬಿಗ್​ ಬಾಸ್ ಮಾಜಿ​ ಸ್ಪರ್ಧಿಗಳು ಮಚ್ಚು ಹಿಡಿದು ರೀಲ್ಸ್​ನಲ್ಲಿ ರೂಲ್ಸ್ ಬ್ರೇಕ್​​ ಮಾಡಿದ್ದರಿಂದ ಜೈಲು ಸೇರಿದ್ದರು. ರಜತ್​ ಮತ್ತು ವಿನಯ್​ಗೆ ಶುಕ್ರವಾರವೇ ಕೋರ್ಟ್​ ಜಾಮೀನು ಕರುಣಿಸಿತ್ತು. ಆದರೆ ಜಾಮೀನು ಪ್ರಕ್ರಿಯೆ ಮುಗಿಸಲು ವಿಳಂಬವಾದ ಕಾರಣ ಶುಕ್ರವಾರ ಬಿಡುಗಡೆಯ ಭಾಗ್ಯ ಸಿಗಲಿಲ್ಲ. ಇಂದು ಬೆಳಗ್ಗೆ ಇಬ್ಬರು ಕೈಯಲ್ಲಿ ಬ್ಯಾಗು ಹಿಡಿದು ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್​ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2025/03/Rajat-Vinay-release-from-jail-3.jpg)
ಮಾರ್ಚ್​ 24, ಪೊಲೀಸ್ ವಶಕ್ಕೆ
ಕಳೆದ ಮಾರ್ಚ್​ 24 ರಜತ್​ ಮತ್ತು ವಿನಯ್​ ಗೌಡ ಇಬ್ಬರಿಗೂ ಬಸವೇಶ್ವರ ನಗರ ಪೊಲೀಸರು ಬಿಗ್ ಶಾಕ್ ಕೊಟ್ಟಿದ್ದರು. ರಿಯಾಲಿಟಿ ಶೋನ ಸ್ಪರ್ಧಿಗಳು ತುಕ್ಕು ಹಿಡಿದ ಮಚ್ಚು ಹಿಡ್ಕೊಂಡು ರೀಲ್ಸ್​ ಮಾಡಿದ್ರು. ಇದೇ ರೀಲ್ಸ್​ ಇಷ್ಟು ದೊಡ್ಡ ತಪ್ಪಾಗುತ್ತೆ ಅಂತ​ ಇವರಿಬ್ಬರೂ ಊಹಿಸಿಯೇ ಇರಲಿಲ್ಲ. ಪೊಲೀಸರ ಕೆಂಗಣ್ಣಿಗೆ ಗುರಿಯಾದ ಇಬ್ಬರೂ ಜೈಲುವಾಸವನ್ನು ಅನುಭವಿಸಬೇಕಾಯಿತು.
/newsfirstlive-kannada/media/post_attachments/wp-content/uploads/2025/03/Rajath-Vinay-gowda-reels-Case-3.jpg)
ಮಾರ್ಚ್​ 24, ಬಿಡುಗಡೆ
ಮಚ್ಚಾ.. ಮಚ್ಚು ಹಿಡಿಯೋ ಅಂತ ರೀಲ್ಸ್ ಮಾಡಿದ ಪ್ರಕರಣದಲ್ಲಿ ರಜತ್​ ಮತ್ತು ವಿನಯ್​ ವಿರುದ್ಧ ಬಸವೇಶ್ವರ ನಗರ ಠಾಣೆ ಪೊಲೀಸರು ಕೇಸ್ ಹಾಕಿದ್ದರು. ಶಸ್ತ್ರಾಸ್ತ್ರ ಕಾಯ್ದೆಯಡಿ FIR ಹಾಕಿದ ಒಂದೇ ರಾತ್ರಿಯಲ್ಲಿ ವಿಚಾರಣೆ ನಡೆಸಿ ವಾಪಸ್​ ಕಳಿಸಿದ್ರು. ಇದೇ ವೇಳೆ ರೀಲ್ಸ್​ನಲ್ಲಿ ಬಳಸಲಾಗಿದ್ದ ಮಚ್ಚು ಎನ್ನಲಾದ ಆಯುಧವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಆದರೆ ಈ ಮಚ್ಚು, ರೀಲ್ಸ್​ನಲ್ಲಿ ಬಳಸಿದ್ದ ಮಚ್ಚಾಗಿರಲಿಲ್ಲ. ಹೀಗಾಗಿ ಪೊಲೀಸರು ಇಬ್ಬರನ್ನ ಬಂಧಿಸಿ ಸ್ಥಳ ಮಹಜರು ಮಾಡಿದ್ರು. ಆಗಲೂ ಅಸಲಿ ಮಚ್ಚು ಪತ್ತೆಯಾಗಿರಲಿಲ್ಲ. ಬಳಿಕ ಕೋರ್ಟ್​ಗೆ ಹಾಜರು ಪಡಿಸಲಾಗಿತ್ತು. ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿ ಜೈಲಿಗೆ ಕಳುಹಿಸಿದ್ರು. ಸದ್ಯ ಈ ಇಬ್ಬರಿಗೂ 24ನೇ ಎಸಿಎಂಎಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅದ್ರಂತೆ ಷರತ್ತುಗಳನ್ನ ಪೂರೈಸಿ ಇವತ್ತು ಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್​ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2025/03/Rajath-Vinay-gowda-reels-Case-6.jpg)
ಜೈಲಿಂದ ರಿಲೀಸ್​ ಆದ ಬೆನ್ನಲ್ಲೇ ವಿನಯ್ ಗೌಡ, ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಪೋಸ್ಟ್​ ಮಾಡಿ ಎಲ್ಲರ ಬಳಿ ಕ್ಷಮೆ ಕೇಳಿದ್ದಾರೆ.
ವಿಡಿಯೋದಲ್ಲಿ ವಿನಯ್ ಹೇಳಿದ್ದೇನು?
ಕಳೆದ 4 ದಿನಗಳಿಂದ ರಾಜ್ಯದಲ್ಲಿ 1 ಮಚ್ಚಿನ ಕಥೆ ನಡೀತು. ಅದಕ್ಕೋಸ್ಕರ ನಾನು ಪ್ರತಿಯೊಬ್ಬರಿಗೂ ಸಾರಿ ಕೇಳಿ ಈ ವಿಡಿಯೋ ಮಾಡುತ್ತಿದ್ದೇನೆ. ಮೊದಲು ನನ್ನಿಂದ ನನ್ನ ಹೆಂಡತಿ, ಮಗನಿಗೆ ತೊಂದರೆಯಾಗಿದೆ. ನನ್ನ ಸ್ನೇಹಿತರು ರಾತ್ರಿಯಲ್ಲೂ ನನಗಾಗಿ ಪೊಲೀಸ್ ಸ್ಟೇಷನ್, ಜೈಲಿನ ಮುಂದೆ ಕಾದಿದ್ದಾರೆ. ಅವರಿಗೆ ಕ್ಷಮೆಯಾಚಿಸುತ್ತೇನೆ.
‘ಮಚ್ಚು ಹಿಡಿದಿದ್ದು ತಪ್ಪು..’
ವಿನಯ್ ಗೌಡ ಅವರು ಮಾಡಬಾರದ ಮಚ್ಚಿನಿಂದ ರೀಲ್ಸ್ ಮಾಡಿದ್ದು ತಪ್ಪಾಗಿದೆ. ಒಂದು ಮಚ್ಚಿನಿಂದ ಇಷ್ಟೆಲ್ಲಾ ತೊಂದರೆ ಆಗಿದೆ. ಈ ಒಂದು ವಿಷ್ಯ ಇಷ್ಟೊಂದು ದೊಡ್ಡ ತಪ್ಪಾಗುತ್ತೆ ಅನ್ನೋದು ಗೊತ್ತಿರಲಿಲ್ಲ. ನನ್ನದು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಮಚ್ಚು ಹಿಡಿದು ನನ್ನ ಫಾಲೋವರ್ಸ್‌ಗೂ ಈ ರೀತಿಯ ಮೆಸೇಜ್ ಕೊಡಬಾರದಿತ್ತು. ನನ್ನ ಅಭಿಮಾನಿಗಳೇ ದಯವಿಟ್ಟು ನನ್ನ ಕ್ಷಮಿಸಿ.
/newsfirstlive-kannada/media/post_attachments/wp-content/uploads/2025/03/Vinay-Rajat-kishan-Arrest-2.jpg)
ಪೊಲೀಸ್ ಇಲಾಖೆ ಅವ್ರು..
ಈ ಪ್ರಕರಣದಲ್ಲಿ ಪೊಲೀಸರು ಅವರ ತನಿಖೆಯನ್ನು ಮಾಡಿದ್ದಾರೆ. ನಾನೊಬ್ಬ ಸೆಲೆಬ್ರಿಟಿ ಎಂದು ಟ್ರೀಟ್ ಮಾಡಲಿಲ್ಲ. ನಮ್ಮನ್ನು ಕಾಮನ್ ಮ್ಯಾನ್ ರೀತಿ ನೋಡಿ ವರ್ತಿಸಿದ್ದಾರೆ. ದಯವಿಟ್ಟು ಪೊಲೀಸರ ಮೇಲೆ ಯಾವುದೇ ಆರೋಪವನ್ನು ಮಾಡಬೇಡಿ ಎಂದು ವಿನಯ್ ಗೌಡ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮಚ್ಚಿನ ಸುತ್ತಾ ನಡೆದಿದ್ದೇನು? ವಿಡಿಯೋ ರಿಲೀಸ್ ಮಾಡಿದ ವಿನಯ್ ಗೌಡ; ಕಿಚ್ಚ ಸುದೀಪ್‌ಗೆ ಸ್ಪೆಷಲ್ ಥ್ಯಾಂಕ್ಸ್!
ನಾನು ಮಾಡಿದ ಮಚ್ಚಿನ ವಿಡಿಯೋದಿಂದ ಎಲ್ಲರಿಗೂ ತೊಂದರೆಯಾಗಿದೆ. ಇದರಲ್ಲಿ ನನ್ನ ತಪ್ಪಿದೆ. ನಾನು ಎಚ್ಚರಿಕೆಯಿಂದ ಇರಬೇಕಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ನನ್ನ ಬಗ್ಗೆ ಅಭಿಮಾನಿಗಳು ಮಾತನಾಡಿರುವ ಎಲ್ಲಾ ಮಾತುಗಳನ್ನ ನೋಡಿದ್ದೇನೆ.
ಅದೇನೇ ಇರ್ಲಿ ಸೆಲೆಬ್ರಿಟಿಗಳ ಮಾಡುವ ಒಂದು ಯಡವಟ್ಟು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಜೈಲಿಗೆ ಹೋಗಿ ಬಂದ್ಮೇಲೆ ಅವರಿಗೆ ತಮ್ಮ ತಪ್ಪಿನ ಅರಿವೂ ಆಗಿದ್ದು, ವಿನಯ್​ ತಮ್ಮ ಇನ್ಸ್ಟಾಗ್ರಾಮ್‌ನಿಂದ ವಿಡಿಯೋ ಡಿಲೀಟ್​ ಕೂಡ ಮಾಡಿದ್ದು, ಒಳ್ಳೆಯ ಬೆಳವಣಿಗೆ. ಆದರೆ ರಜತ್​ ಕಡೆಯಿಂದ ಯಾವುದು ಉತ್ತರ ಸಿಕ್ಕಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us