‘ಅವಳು ನನ್ನ ತಂಗಿ, ತೊಂದರೆ ಕೊಡೋದು ನಿಲ್ಲಿಸಿ’- ಖಡಕ್​​ ವಾರ್ನಿಂಗ್​ ಕೊಟ್ಟ ವಿನಯ್​ ಗೌಡ!

author-image
Veena Gangani
Updated On
‘ಅವಳು ನನ್ನ ತಂಗಿ, ತೊಂದರೆ ಕೊಡೋದು ನಿಲ್ಲಿಸಿ’- ಖಡಕ್​​ ವಾರ್ನಿಂಗ್​ ಕೊಟ್ಟ ವಿನಯ್​ ಗೌಡ!
Advertisment
  • ಅನು ನನ್ನ ತಂಗಿ ಅವಳಿಗೆ ತೊಂದರೆ ಕೊಡುವುದನ್ನು ನಿಲ್ಲಿಸಿ- ವಿನಯ್ ಗೌಡ
  • ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅಕ್ಕ ಅನು
  • ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ವಿಡಿಯೋ

ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅಕ್ಕ ಅನು ಅವರು ತಮ್ಮ ಫೇಸ್​ ಬುಕ್​ ಲೈವ್​​ಗೆ ಬಂದು ಕಣ್ಣೀರಿಟ್ಟಿದ್ದರು. ಯಾರಿಂದಲೂ ಸಹಾಯ, ಮೆಚ್ಚುಗೆ ಅಪೇಕ್ಷಿಸದೇ ಕೆಚ್ಚೆದೆಯ ಕನ್ನಡತಿಯಾಗಿ ಸೇವೆ ಸಲ್ಲಿಸಿದ್ದ ಅಕ್ಕ ಅನು ಅವರು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿ ಇನ್ನೊಬ್ಬರ ಮನಸ್ಥಿತಿಯನ್ನು ಹಾಳು ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು.

publive-image

ಇದನ್ನು ಓದಿ: ಮಹಿಳಾ ಸಾಧಕಿ ಪ್ರಶಸ್ತಿ ಪಡೆದ ಬಳಿಕ ಗಳಗಳನೇ ಕಣ್ಣೀರಿಟ್ಟ ‘ಕನ್ನಡತಿ ಅಕ್ಕ ಅನು’.. ಆಗಿದ್ದೇನು?

ಇದೀಗ ಅಕ್ಕ ಅನು ಅವರಿಗೆ ಕೆಟ್ಟದಾಗಿ ಕಾಮೆಂಟ್​ ಮಾಡಿದವರ ವಿರುದ್ಧ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ವಿನಯ್​ ಗೌಡ ಅವರು ಗರಂ ಆಗಿದ್ದಾರೆ. ಇನ್ನೂ ಅಕ್ಕ ಅನು ಅವರ ಬಗ್ಗೆ ಕೆಟ್ಟದಾಗಿ ಕಾಮೆಂಟ್​ ಮಾಡಿ ಹಿಂಸೆ ನೀಡುತ್ತಿದ್ದವರಿಗೆ ಖಡಕ್​ ವಾರ್ನಿಂಗ್​ ಸಹ ನೀಡಿದ್ದಾರೆ. ಹೌದು, ಈ ಬಗ್ಗೆ ನಟ ವಿನಯ್​ ಗೌಡ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ.

ವಿನಯ್​ ಗೌಡ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಏನಿದೆ?

ಅಕ್ಕ ಅನು ಅವರ ವಿಡಿಯೋ ನೋಡಿ ತುಂಬಾ ಬೇಸರ ಆಯ್ತು. ಒಳ್ಳೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ಆರೋಗ್ಯ ಸರಿ ಇಲ್ಲ ಅಂದ್ರು, ರಾತ್ರಿ ಹಗಲು ನೋಡದೇ ಅಲ್ಲೆ ಮಲಗಿಕೊಂಡು ಸರ್ಕಾರಿ ಶಾಲೆಗಳಿಗಾಗಿ ದುಡಿಯುತ್ತಿದ್ದಾರೆ. ಅಂತಹವರಿಗೆ ಕೆಟ್ಟ ಕೆಟ್ಟದಾಗಿ ಕಾಮೆಂಟ್​ ಮಾಡೋದು ಸರಿ ಇಲ್ಲ. ಕೆಲ ಫೇಕ್​ ಅಕೌಂಟ್​ಗಳಿಂದ ಹೀಗೆ ಕೆಟ್ಟದಾಗಿ ಕಾಮೆಂಟ್​ ಮಾಡುತ್ತಿದ್ದಾರೆ. ಇದೆಲ್ಲಾ ನಿಜವಾಗಲೂ ಸರಿ ಇಲ್ಲ. ನಿಮಗೆ ಮನುಷ್ಯತ್ವ ಇದ್ದರೆ ನಿಮ್ಮ ತಾಯಿ ಹಾಗೂ ಅಕ್ಕ, ತಂಗಿಗೆ ಹೀಗೆ ಕಾಮೆಂಟ್​ ಮಾಡಿ. ಅದರಿಂದ ಯಾವ ರೀತಿ ಪ್ರತಿಕ್ರಿಯೆ ಬರುತ್ತೆ ನೋಡಿ. ಅವರಿಗೆ ಆರೋಗ್ಯ ಸರಿ ಇಲ್ಲ ಅಂದ್ರು ಕೆಲಸ ಮಾಡುತ್ತಿದ್ದಾರೆ. ಹೀಗೆ ಮಾಡಿದ ಬಳಿಕ ಏನ್​ ಆಗುತ್ತೆ. ಸೈಬರ್​ ಪೊಲೀಸರಿಗೆ ದೂರು ನೀಡಲಾಗುತ್ತೆ. ಬಳಿಕ ಯಾರು ಇದೆಲ್ಲಾ ಮಾಡ್ತಾ ಇದ್ದೀರಿ ಎಂದು ಗೊತ್ತಾಗುತ್ತೆ. ಅಲ್ಲಿಯ ತನಕ ಹೋಗುವುದು ಬೇಡ. ಅನು ನನ್ನ ತಂಗಿ ಅವಳಿಗೆ ತೊಂದರೆ ಕೊಡುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment