/newsfirstlive-kannada/media/post_attachments/wp-content/uploads/2025/04/vinay-gowda10.jpg)
ವಿನಯ್ ಗೌಡ ಹಾಗೂ ರಜತ್ ಕಿಶನ್ ಅವರದ್ದು 10 ವರ್ಷದ ಗೆಳೆತನ. ನಮ್ಮಿಬ್ಬರ ಮಧ್ಯೆ ಬಿರುಕು ಮೂಡಿದೆ ಎಂದು ರಜತ್ ಮಾತಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ ವಿನಯ್ ಗೌಡ. ಒಂದೇ ಒಂದು ರೀಲ್ಸ್ ಮಾಡಿ ಕೋರ್ಟ್ ಮೆಟ್ಟಿಲೇರಿದ್ದರು ವಿನಯ್ ಗೌಡ ಹಾಗೂ ರಜತ್.
ಇದನ್ನೂ ಓದಿ:2025 ಬೆಂಗಳೂರು ಕರಗ ಹೇಗಿತ್ತು? ಐತಿಹಾಸಿಕ ಉತ್ಸವದ ಟಾಪ್ 10 ಫೋಟೋ ಇಲ್ಲಿದೆ!
ಆದ್ರೆ, ಇದರಿಂದ ನಿಜಕ್ಕೂ ವಿನಯ್ ಗೌಡ ಹಾಗೂ ರಜತ್ ನಡುವೆ ಮನಸ್ತಾಪ ಮೂಡಿದ್ಯಾ ಎಂಬುವುದಕ್ಕೆ ಉತ್ತರ ಸಿಕ್ಕಿದೆ. ಈ ಬಗ್ಗೆ ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ವಿನಯ್ ಗೌಡ, ಈ ಫ್ರೆಂಡ್‌ಶಿಪ್ ಬೇಡ ಅಂದಾಗ ಹೋಗೋಕೆ, ಬೇಕು ಅಂದಾಗ ಬರೋದಾಗಲಿ ಅಲ್ಲ. 10-12 ವರ್ಷವಿರೋ ಈ ಫ್ರೆಂಡ್‌ಶಿಪ್ ಇದು. ಫ್ರೆಂಡ್ಶಿಪ್ನಲ್ಲಿ ಜಗಳ ಇರಲಿಲ್ಲ ಅಂದ್ರೆ ಅದು ಫ್ರೆಂಡ್‌ಶಿಪ್ ಆಗೋದಿಲ್ಲ. ಹಾಗೇ ಇದ್ದರೆ ಅದು ಬಿಸಿನೆಸ್ ಆಗುತ್ತೆ. ಕೋಪ ಬಂದಿದೆ, ಸಿಟ್ಟು ಇದೆ. ಅದು ಏಕೆ ಇದೆ ಅಂತ ಅವನಿಗೆ ಗೊತ್ತು. ಒಂದು ಫೋನ್ ಕಾಲ್ನಲ್ಲಿ ಮಾತಾಡಿದ್ರೆ ಎಲ್ಲ ಮುಗಿದು ಹೋಗುತ್ತದೆ. ಮುಂದೊಂದು ದಿನ ಒಂದು ರೀಲ್ಸ್ ಕೂಡ ಮಾಡ್ತೀನಿ ಎಂದಿದ್ದಾರೆ.
ಹೀಗೆ ಮಾತನ್ನು ಮುಂದುವರೆಸಿದ ಅವರು, ಮಚ್ಚು ಹಿಡಿದು ರೀಲ್ಸ್ ಮಾಡಿದ್ದು ರಜತ್ ಐಡಿಯಾ. ರಜತ್ ಜೊತೆ ರೀಲ್ಸ್ ಮಾಡಲ್ಲ ಅಂದಿದ್ದು ತಮಾಷೆಗಾಗಿ. ಆ ಇಂಟರ್ವ್ಯೂನಲ್ಲಿ ತಮಾಷೆಗೆ ಹೇಳಿದ್ದೆ. ನನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಗಳನ್ನ ನನ್ನ ಪಿಆರ್ ಟೀಂ ಹ್ಯಾಂಡಲ್ ಮಾಡುತ್ತೆ. ರಜತ್ ಸಹವಾಸ ಬೇಡ ಅನ್ನೋ ಕಮೆಂಟ್ಗಳಿಗೆ ಲೈಕ್ ಮಾಡಿರೋದು ನನಗೆ ಗೊತ್ತಿಲ್ಲ. ರಜತ್ ನನಗಿಂತ ಹತ್ತು ವರ್ಷ ಸಣ್ಣವನು. ನನ್ನ ಇಗೋ ಅವನಿಗಿಂತ ದೊಡ್ಡದು. ಮೊದಲು ಅವನೇ ಫೋನ್ ಮಾಡಲಿ ನಾನು ಮಾತಾಡ್ತೀನಿ ಎಂದಿದ್ದಾರೆ.
ಮತ್ತೆ ಮಾತನ್ನು ಮುಂದುವರೆಸಿದ ಅವರು, ಸುದೀಪ್ ಸರ್ ಕೂಡ ನನಗೆ ತುಂಬಾ ಸಹಾಯ ಮಾಡಿದ್ದಾರೆ. ಅವರು ನನಗೆ ಗಾಡ್ ಫಾದರ್. ಕೇಸ್ ಆದಾಗ ತುಂಬಾ ಸಹಾಯ ಮಾಡಿದ್ದಾರೆ. ಇಲ್ಲಿ ಫ್ಯಾನ್ ವಾರ್ ಎಲ್ಲಾ ಬೇಡ. ಬಾಯ್ಸ್ ಅಂಡ್ ಗರ್ಲ್ಸ್ ಶೂಟಿಂಗ್ನಲ್ಲಿ ಭಾಗಿಯಾಗ್ತೀನಿ. ಆದ್ರೆ, ಸಿನಿಮಾ ಶೂಟಿಂಗ್ ಇರೋ ಕಾರಣ ಈ ವಾರ ಹೋಗ್ತಿಲ್ಲ. ಮತ್ತೆ ಈ ವಾರ ಹೋಗಿಲ್ಲ ಅಂತ ಬೇರೆ ಅರ್ಥ ಕಲ್ಪಿಸೋದು ಬೇಡ. ಸಣ್ಣ ವಿಚಾರಕ್ಕೆ ಸ್ನೇಹ ಕಳೆದುಕೊಳ್ಳುವುದಿಲ್ಲ. ನಮಗೆ ಗೊತ್ತಿಲ್ಲದೇ ಈ ರೀತಿ ತಪ್ಪಾಗಿದೆ. ಯಾರು ಕೂಡ ಈ ರೀತಿ ರೀಲ್ಸ್ ಮಾಡ್ಬೇಡಿ. ಮುಂದೆ ನಾನು ರಜತ್ ಜೊತೆಯಾಗಿ ರೀಲ್ಸ್ ಮಾಡ್ತೀವಿ. ಆದ್ರೆ, ಅದರಲ್ಲಿ ಏನು ಬಳಸದೇ ರೀಲ್ಸ್ ಮಾಡ್ತೀವಿ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ