newsfirstkannada.com

ಕಿಚ್ಚನ ಸಿನಿಮಾದಲ್ಲಿ ವಿನಯ್​ ಗೌಡಗೆ ಅವಕಾಶ! ಫ್ಯಾನ್ಸ್​ ಕೇಳಿದ ಪ್ರಶ್ನೆಗೆ ಮನಸಾರೆ ಉತ್ತರಿಸಿದ ಸುದೀಪ್​​

Share :

Published January 30, 2024 at 8:36am

Update January 30, 2024 at 10:05am

    ಬಿಗ್​ ಬಾಸ್​ ಸೀಸನ್​ 10 ಸ್ಪರ್ಧಿ ವಿನಯ್​ ಗೌಡ

    ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ಸುದೀಪ್

    ಅಭಿಮಾನಿಗಳ ಜೊತೆಗೆ ಬಾದ್​ಷಾನ ಮಾತುಕತೆ

ಬಿಗ್​ ಬಾಸ್​ ಸೀಸನ್​ 10 ಕೊನೆಗೊಂಡಿದೆ. ಕಾರ್ತಿಕ್​ ಮಹೇಶ್​ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ. ಬಿಗ್​ ಬಾಸ್​ ಮುಗಿದ ಮೇಲೆ ಕಿಚ್ಚ ಸುದೀಪ್ ಸಿನಿಮಾದ ಜೊತೆಗೆ​ ಸಾಮಾಜಿಕ ಜಾಲತಾಣದಲ್ಲಿ ತೊಡಗಿಸಿಕೊಳ್ಳೋದರಲ್ಲೂ ಬ್ಯುಸಿಯಾಗಿದ್ದು, ಅಭಿಮಾನಿಗಳ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸುತ್ತಾ ಬಂದಿದ್ದಾರೆ. ಅಂದರಂತೆಯೇ ಅಭಿಮಾನಿಯೊಬ್ಬ ವಿನಯ್​ ಬಗ್ಗೆ ಕೇಳಿದ ಪ್ರಶ್ನೆಗೂ ಅಚ್ಚರಿ ಎಂಬಂತೆ ಉತ್ತರಿಸಿದ್ದಾರೆ.

ಟ್ವಿಟ್ಟರ್​ನಲ್ಲಿ #Askkiccha ಎಂಬ ಹ್ಯಾಶ್​​ಟ್ಯಾಗ್​ನಡಿಯಲ್ಲಿ ಕಿಚ್ಚನಿಗೆ ಪ್ರತಿಯೊಬ್ಬರು ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಅದರಂತೆಯೇ ಅಭಿಮಾನಿಯೊಬ್ಬ ವಿನಯ್ ಗೌಡ ಬಗ್ಗೆಯೂ ಕೇಳಿದ್ದಾರೆ. ‘ನಿಮ್ಮನ್ನು ಮತ್ತು ವಿನಯ್​ ಗೌಡ ಅವರನ್ನು ಒಂದು ಸಿನಿಮಾದಲ್ಲಿ ಕಾಣುವಂತೆ ಬಯಸುತ್ತೇನೆ.. ಇದು ಸಾಧ್ಯವೇ ಸರ್​?’ ಎಂದು ಪ್ರಶ್ನಿಸಿದ್ದಾನೆ.

ಅಭಿಮಾನಿಯ ಪ್ರಶ್ನೆಗೆ ಕಿಚ್ಚ ಉತ್ತರಿಸಿದ್ದು, ‘ಖಂಡಿತಾ.. ಅವರದ್ದು, ಅದ್ಭುತವಾದ ವ್ಯಕ್ತಿತ್ವ’ ಎಂದು ಮರು ಉತ್ತರ ನೀಡಿದ್ದಾರೆ.

ಕಿಚ್ಚನ ಉತ್ತರ ಕಂಡು ವಿನಯ್​ ಫ್ಯಾನ್ಸ್​ ತುಂಬಾ ಸಂತೋಷಗೊಂಡಿದ್ದಾರೆ. ಮಾತ್ರವಲ್ಲದೆ, ಕಿಚ್ಚನ ಟ್ವೀಟ್​ ಸ್ಕ್ರೀನ್​ ಶಾಟ್​​ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಚ್ಚನ ಸಿನಿಮಾದಲ್ಲಿ ವಿನಯ್​ ಗೌಡಗೆ ಅವಕಾಶ! ಫ್ಯಾನ್ಸ್​ ಕೇಳಿದ ಪ್ರಶ್ನೆಗೆ ಮನಸಾರೆ ಉತ್ತರಿಸಿದ ಸುದೀಪ್​​

https://newsfirstlive.com/wp-content/uploads/2024/01/Vinay-Gowda-1-2.jpg

Load More