Advertisment

ದರ್ಶನ್​​ನಲ್ಲಿ ರಾಕ್ಷಸತ್ವ ಹೆಚ್ಚಲು ವಿನಯ್ ಕಾರಣ? ನಟನ ಕಡೆಯ ಹುಡುಗರಿಗೆ ಎಣ್ಣೆ, ಊಟ ಕೊಟ್ಟು ಕ್ಲೋಸ್ ಆದ!

author-image
AS Harshith
Updated On
ದರ್ಶನ್​​ನಲ್ಲಿ ರಾಕ್ಷಸತ್ವ ಹೆಚ್ಚಲು ವಿನಯ್ ಕಾರಣ? ನಟನ ಕಡೆಯ ಹುಡುಗರಿಗೆ ಎಣ್ಣೆ, ಊಟ ಕೊಟ್ಟು ಕ್ಲೋಸ್ ಆದ!
Advertisment
  • ದರ್ಶನ್​ನ್ನು​ ಹೊಗಳಿ ಹೊಗಳಿ ಅಟ್ಟಕ್ಕೇರಿಸ್ತಿದ್ದ ವಿನಯ್
  • ವಿನಯ್ ಪಬ್​ಗೆ ಗಿರಾಕಿಗಳು ಹೆಚ್ಚಲು ದರ್ಶನ್ ಕಾರಣ
  • ಶೆಡ್​​​ನಲ್ಲಿ ಹಲ್ಲೆ ಮಾಡುವ ಐಡಿಯಾ ಕೊಡ್ತಿದ್ದ ವಿನಯ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಆ್ಯಂಡ್​ ಗ್ಯಾಂಗ್​ ಅರೆಸ್ಟ್​ ಆಗಿದೆ. ದರ್ಶನ್​ ಟೀಂನ ಕೃತ್ಯದಲ್ಲಿ ವಿನಯ್ ಕೂಡ ಪಾಲುದಾರನಾಗಿದ್ದು ಪ್ರಕರಣದಲ್ಲಿ 10ನೇ ಆರೋಪಿಯಾಗಿದ್ದಾನೆ. ಹಾಗಿದ್ರೆ ವಿನಯ್​ ಹಾಗೂ ನಟ ದರ್ಶನ್​​ ಪರಿಚಯ ಆಗಿದ್ದೇಗೆ. ದರ್ಶನ್ ಆಪ್ತ ವಲಯದಲ್ಲಿ ವಿನಯ್ ಖಾಯಂ ಸದಸ್ಯನಾಗಿದ್ದೇಗೆ ಎಂಬುದೇ ಕುತೂಹಲವಾಗಿದೆ.

Advertisment

ಪಟ್ಟಣಗೆರೆ ವಿನಯ್​, ಹೋಟೆಲ್ ಉದ್ಯಮಿ ಹಾಗೂ ಫೈನಾನ್ಶಿಯರ್. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈತನ ಕೈವಾಡ ಇರೋದು ಸಾಬೀತಾಗಿದೆ. ಪಟ್ಟಣಗೆರೆ ಶೆಡ್​​ಗೆ ಕರೆದೊಯ್ದು ರೇಣುಕಾಸ್ವಾಮಿಯನ್ನು ಹತ್ಯೆಗೈದಿರೋದು ಬಯಲಾಗಿದೆ. ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರೋ ವಿನಯ್​​ಗೂ ದರ್ಶನ್​ಗೂ ಫ್ರೆಂಡ್​ಶಿಫ್​​ ಬೆಳೆದಿದ್ದೇ ಇಂಟ್ರೆಸ್ಟಿಂಗ್​.

publive-image

ರಾಬರ್ಟ್ ಸಿನಿಮಾ ವೇಳೆ ದರ್ಶನ್-ವಿನಯ್ ಪರಿಚಯ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್​ ಆಪ್ತ ವಿನಯ್ ಕೂಡ ಬಂಧನ ಆಗಿದ್ದು ವಿಚಾರಣೆ ನಡೆಯುತ್ತಿದೆ. ಆರ್.ಆರ್.ನಗರದ ವಿನಯ್​, ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಓನರ್ ಕಂ ಫೈನಾನ್ಶಿಯರ್. ಪಟ್ಟಣಗೆರೆ ಶೆಡ್​​ನಲ್ಲೇ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು. ನಟ ದರ್ಶನ್​ಗೆ ಪಟ್ಟಣಗೆರೆ ಶೆಡ್ ಪರಿಚಯಿಸಿದ್ದೇ ವಿನಯ್ ಅನ್ನೋದು ವಿಚಾರಣೆ ವೇಳೆ ಬಯಲಾಗಿದೆ. ಹಾಗಿದ್ರೆ ನಟ ದರ್ಶನ್​ಗೆ ವಿನಯ್ ಪರಿಚಯ ಆಗಿದ್ದೇಗೆ, ಪ್ರಕರಣದ ಅರೋಪಿಯಾಗಿರೋ ವಿನಯ್ ಯಾರು ಅಂತ ನೋಡೋದಾದ್ರೆ.

ಇದನ್ನೂ ಓದಿ: ಪ್ರಾಣಕ್ಕೆ ಕುತ್ತು ತಂದ ರೀಲ್ಸ್​​​ ಹುಚ್ಚು.. ವಿಡಿಯೋಗಾಗಿ ಕಾರ್​ ಓಡಿಸಿ ಯುವತಿ ಭಯಾನಕ ಸಾವು

Advertisment

ಯಾರು ಈ ವಿನಯ್? 

ಪಟ್ಟಣಗೆರೆ ಜಯಣ್ಣ ತಂಗಿ ಮಗ, ಸೋದರಳಿಯ ಆಗಿರೋ ವಿನಯ್ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬೂಮ್ ಆಗಿದ್ದ ಹುಡುಗ. ರಾಬರ್ಟ್ ಸಿನಿಮಾ ಇಂಟರ್​​ವ್ಯೂ ವೇಳೆ ನಟ ದರ್ಶನ್​ಗೆ ಪರಿಚಯ ಆಗಿತ್ತು. ಆರ್.ಆರ್.ನಗರದಲ್ಲಿರುವ ಸೋನಿ ಬ್ರೂಕ್ ಪಬ್ ಅಂಡ್ ರೆಸ್ಟೋರೆಂಟ್ ಮಾಲೀಕನಾಗಿದ್ದು ನಟ ದರ್ಶನ್ ಹುಡುಗರಿಗೆ ಎಣ್ಣೆ, ಊಟ ಕೊಟ್ಟು ಕ್ಲೋಸ್ ಆಗಿದ್ದ, ಸೋನಿ ಬ್ರೂಕ್ ಪಬ್​​​ಗೆ ಬರುವ ಸೆಲೆಬ್ರಿಟಿಗಳನ್ನೂ ಸಿಕ್ಕಾಪಟ್ಟೆ ಪರಿಚಯ ಮಾಡಿಕೊಂಡಿದ್ದ.

publive-image

ಇದನ್ನೂ ಓದಿ: ರಾಜ್ಯದಲ್ಲಿ ಮಾಂಸಕ್ಕಾಗಿ ಕಪ್ಪೆಗಳ ಮಾರಾಟ ಜಾಲ ಪತ್ತೆ; ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

ಇನ್ನು ಪೊಲೀಸರ ವಿಚಾರಣೆ ವೇಳೆ ನಟ ದರ್ಶನ್​​ ಬಗ್ಗೆ ವಿನಯ್ ಹೇಳಿದ್ದೇನು? ಹತ್ಯೆ ನಡೆದಿದ್ದ ಬಗ್ಗೆ ಪಟ್ಟಣಗೆರೆ ಶೆಡ್​ ಬಗ್ಗೆ ವಿನಯ್ ಬಾಯ್ಬಿಟ್ಟ ಸತ್ಯವೇನು ಅನ್ನೋದನ್ನು ನೋಡೋದಾದ್ರೆ.

Advertisment

ದರ್ಶನ್​​ನಲ್ಲಿ ರಾಕ್ಷಸತ್ವ ಹೆಚ್ಚಲು ವಿನಯ್ ಕಾರಣ?

ನಟ ದರ್ಶನ್​​ನಲ್ಲಿ ರಾಕ್ಷಸತ್ವ ಹೆಚ್ಚಲು ವಿನಯ್ ಕಾರಣ ಆಗಿದ್ದ.. ನಟ ದರ್ಶನ್​​ನನ್ನ​ ಹೊಗಳಿ ಹೊಗಳಿ ವಿನಯ್ ಅಟ್ಟಕ್ಕೇರಿಸ್ತಿದ್ದ, ಲೋನ್ ರಿಕವರಿ ಮಾಡಲು ವಿನಯ್ ಪಟ್ಟಣಗೆರೆ ಶೆಡ್ ಬಳಕೆ ಮಾಡ್ತಿದ್ದ. ದರ್ಶನ್​ ಜೊತೆ ಸೇರಿದಾಗಿನಿಂದ ವಿನಯ್ ತಲೆ ನಿಲ್ತಾ ಇರಲಿಲ್ಲ. ವಿನಯ್ ಪಬ್​ಗೆ ಗಿರಾಕಿಗಳು ಹೆಚ್ಚಲು ದರ್ಶನ್ ಕಾರಣ ಆಗಿದ್ದರು, ದರ್ಶನ್ ಬರ್ತಾನೆ ಅಂತ ಅನೇಕ ಮಂದಿ ಪಬ್​​ಗೆ ಬರ್ತಾ ಇದ್ರು. ಇನ್ನು ದರ್ಶನ್ ಒಮ್ಮೆ ಯಾರನ್ನೋ ಬಯ್ಯುವಾಗ ಅವರನ್ನು ಕರೆಸಿ ರುಬ್ಬೋಣ ಎಂದಿದ್ದ ವಿನಯ್, ಪಟ್ಟಣಗೆರೆ ಶೆಡ್​​​ನಲ್ಲಿ ಹಲ್ಲೆ ಮಾಡುವ ಐಡಿಯಾ ಕೊಡ್ತಿದ್ದ, 2019ರಲ್ಲಿ ದರ್ಶನ್ ಪರಿಚಯ ಆಗಿದ್ದೇ ತಡ ಎಲ್ಲಾ ಕಡೆ ಕಾರ್ಯಕ್ರಮಗಳಿಗೆ ಕರೆಯುತ್ತಿದ್ದ, ದರ್ಶನ್ ಸಿನಿಮಾ ಬ್ಯಾನರ್ ಹಾಕಿ ಇಂಪ್ರೆಸ್ ಮಾಡಿದ್ದ, ದರ್ಶನ್ ಒಂಟಿಯಾಗಿದ್ದ ವೇಳೆ ಒಳ್ಳೆಯ ಸ್ನೇಹಿತ ಎನ್ನಲಾಗಿದೆ.

publive-image

ಇದನ್ನೂ ಓದಿ: ದರ್ಶನ್ ‘ತೂಗುದೀಪ ನಿವಾಸ’ಕ್ಕೂ ದೊಡ್ಡ ಸಂಚಕಾರ; ಬಚಾವ್ ಆಗೋಕೆ ಆಗಲ್ವಾ?

ಇನ್ನು ರೇಣುಕಾಸ್ವಾಮಿ ಕೊಲೆ ಸಂಬಂಧ ಸ್ಟೋನಿ ಬ್ರೂಕ್ ಪಬ್​​ನಲ್ಲಿ ಪೊಲೀಸರು ಮಹತ್ವದ ಸಾಕ್ಷಿ ಸಂಗ್ರಹಿಸಿದ್ದಾರೆ. ಪಬ್​​ನಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಿದ್ದಾರೆ. ಹತ್ಯೆ ನಡೆದಿದ್ದ ಜೂನ್ 8ರಂದು ದರ್ಶನ್ ಯಾವುದೋ ವಿಚಾರದ ಬಗ್ಗೆ ಸೀರಿಯಸ್ ಆಗಿ ಮಾತನಾಡ್ತಿದ್ರು ಅಂತ ಮಾಹಿತಿ ನೀಡಿದ್ದಾರೆ. ಇನ್ನು ನಟ ಚಿಕ್ಕಣ್ಣ ಹಾಗೂ ನಿರ್ಮಾಪಕರ ಬಗ್ಗೆ ವಿನಯ್ ಮಾಹಿತಿ ಬಿಟ್ಟುಕೊಟ್ಟಿದ್ದು ಎಲ್ಲಾ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment