/newsfirstlive-kannada/media/post_attachments/wp-content/uploads/2025/02/CABINET-EXPANSION.jpg)
ಒಂದೆಡೆ ಸಿಎಂ ಸ್ಥಾನಕ್ಕಾಗಿ ನಡೀತಿರೋ ಜಟಪಾಟಿ. ಇನ್ನೊಂದೆಡೆ ಕೆಪಿಸಿಸಿ ಕುರ್ಚಿಗಾಗಿ ನಡೀತಿರೋ ಕದನ. ಇವರೆಡು ಕಾಂಗ್ರೆಸ್ ಮನೆಯನ್ನ ಗೊಂದಲದ ಗೂಡಾಗಿಸಿದೆ. ಈ ನಡುವೆ ಸಂಪುಟ ವಿಸ್ತರಣೆಯ ಬಾಣವೊಂದು ಚಿಮ್ಮಿದೆ. ಹೀಗೆ ಬಿಲ್ಲು ಹಿಡಿದು ಕ್ಯಾಬಿನೆಟ್ ಎಕ್ಸ್ಪ್ಯಾನ್ಶನ್ ಬಾಣ ಬಿಟ್ಟಿರೋದು ಖುದ್ದು ಆಡಳಿತ ಪಕ್ಷದ ಶಾಸಕ
ವಿನಯ್ ಕುಲಕರ್ಣಿಯವರ ಒಂದೊಂದು ಮಾತು ಹಸ್ತ ಲೋಕದಲ್ಲಿ ಮತ್ತೊಂದು ಚರ್ಚಾ ಕಿಡಿಯನ್ನ ಹೊತ್ತಿಸೋ ಮುನ್ಸೂಚನೆ ಕೊಟ್ಟಿದೆ. ಸಂಪುಟ ವಿಸ್ತರಣೆಯ ಮಾತು ಮಹಾಬದಲಾವಣೆಗೂ ಪರೋಕ್ಷ ಸುಳಿವು ಕೊಟ್ಟಂತಿದೆ.
ಮಾರ್ಚ್ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಅಂತಾ ಶಾಸಕ ವಿನಯ್ ಕುಲಕರ್ಣಿ ಸ್ಪಷ್ಟವಾಗಿ ಹೇಳಿದ್ದಾರೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದಿರೋ ಮಾಜಿ ಸಚಿವ, ಮತ್ತೊಮ್ಮೆ ಮಂತ್ರಿಗಿರಿ ಸಿಗುತ್ತೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮಾರ್ಚ್ 7ಕ್ಕೆ ಸಿಎಂ ಸಿದ್ದರಾಮಯ್ಯ ದಾಖಲೆಯ ಬಜೆಟ್ ಮಂಡನೆ; ವ್ಹೀಲ್ ಚೇರ್‌ನಲ್ಲೇ ಬಂದು ಮಾಹಿತಿ
ಸಂಪುಟ ವಿಸ್ತರಣೆ ಆಗುತ್ತೆ. ನನಗೂ ಸಚಿವ ಸ್ಥಾನ ಸಿಗುತ್ತೆ ಅಂತಾ ಸ್ಪಷ್ಟ ನುಡಿಯನ್ನ ಹೇಳಿರೋದು ಸರ್ಕಾರದಲ್ಲಿ ಮುಂದಾಗುವ ಬದಲಾವಣೆಯ ಸುಳಿವು ನೀಡಿದಂತಿದೆ.
ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ನಿರ್ಧಾರ!
ಸಂಪುಟ ಸರ್ಜರಿ ಆಗೇ ಆಗುತ್ತೆ ಎಂದ ವಿನಯ್ ಕುಲರ್ಣಿ ಸಿಎಂ ಬದಲಾವಣೆ ವಿಚಾರದ ಪ್ರಶ್ನೆಗೆ ಜಾಣ ಉತ್ತರ ನೀಡಿದ್ದಾರೆ. ಏನೇ ಚೇಂಜ್ ಆದ್ರೂ ಅದು ಹೈಕಮಾಂಡ್ಗೆ ಬಿಟ್ಟಿದ್ದು ಅನ್ನೋ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.
ಇದನ್ನೂ ಓದಿ:KPCC ಕುರ್ಚಿ ಕದನ; ವರಸೆ ಬದಲಿಸಿದ ಸತೀಶ್ ಜಾರಕಿಹೊಳಿ.. ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋ ತಂತ್ರ!
ಬದಲಾವಣೆ ವಿಚಾರವನ್ನ ದೊಡ್ಡದೊಡ್ಡವರು ನಿರ್ಧಾರ ಮಾಡ್ತಾರೆ ಎಂದ ವಿನಯ್ ಕುಲಕರ್ಣಿ ದಲಿತ ಸಿಎಂ ಚರ್ಚೆ ಬಗ್ಗೆಯೂ ಹೇಳಿದ್ದು, ನಗು ಲೇಪಿತ ಉತ್ತರವನ್ನ.
ಸರ್ಕಾರ ನವೆಂಬರ್ಗೆ ಪತನವಾಗುತ್ತೆ ಅನ್ನೋ ಬಿಜೆಪಿಗರ ಭವಿಷ್ಯದ ಬಗ್ಗೆ ಸಾಕಷ್ಟು ಚರ್ಚೆ ನಡುವೆ ವಿನಯ್ ಕುಲಕರ್ಣಿ ಸಂಪುಟ ವಿಸ್ತರಣೆಯ ಮಾತು ಕಾಂಗ್ರೆಸ್ ಮನೆಯಲ್ಲಿ ಮತ್ತೊಂದು ಸುತ್ತಿನ ಚರ್ಚಾ ಸಮರಕ್ಕೆ ನಾಂದಿ ಹಾಡೋ ಎಲ್ಲಾ ಲಕ್ಷಣಗಳಿವೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ