/newsfirstlive-kannada/media/post_attachments/wp-content/uploads/2024/07/Vinay-Mohan-Kwatra.jpg)
ಭಾರತ ವಿದೇಶಾಂಗ ಸಚಿವಾಲಯವು ಅಮೆರಿಕಾಗೆ ಭಾರತದ ಹೊಸ ರಾಯಭಾರಿಯನ್ನು ನೇಮಕ ಮಾಡಿದೆ. ವಿನಯ್​​​ ಮೋಹನ್​ ಕ್ವಾತ್ರಾ ಅವರು ಹೊಸ ರಾಯಭಾರಿಯಾಗಿ ನೇಮಕಗೊಂಡಿದ್ದು, ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ. ತರಂಜಿತ್ ಸಂಧು ಅವರ ನಿವೃತ್ತಿ ಬಳಿಕ ವಿನಯ್​​​ ಮೋಹನ್​ ಕ್ವಾತ್ರಾ ಅಧಿಕಾರ ಸ್ವೀಕರಿಸುತ್ತಿದ್ದಾರೆ.
ವಿನಯ್​​​ ಮೋಹನ್​ ಕ್ವಾತ್ರಾರವರು 2022ರಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಂಡರು. ಇವರು 1988ರ ಬ್ಯಾಚ್​​ನವರಾಗಿದ್ದು, ವಿದೇಶಾಂಗ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ವಹಿಸಿಕೊಂಡರು. ಇವರು ನೇಪಾಳಕ್ಕೆ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಖೈದಿಗಳ ಹಾಟ್ ಫೇವರೇಟಂತೆ ‘ಕರಿಯ’ನ ಈ ಹಾಡು! ರೌಡಿಗಳ ಆ್ಯಂಥಮ್ ಆಗ್ಬಿಟ್ಟಿದೆ ದರ್ಶನ್​ ಸಿನಿಮಾ ಗೀತೆ!
ಯುನೈಟೆಡ್​​ ಸ್ಟೇಟ್​, ಚೀನಾ ಮತ್ತು ಯುರೀಪಿಯನ್​​ ವ್ಯವಹಾರಗಳಲ್ಲಿ ಪರಿಣಿತರಾಗಿರುವ ವಿನಯ್​​​ ಮೋಹನ್​ ಕ್ವಾತ್ರಾ 2017ರಿಂದ ಫೆಬ್ರವರಿ 2020ರವರೆಗೆ ಫ್ರಾನ್ಸ್​ನಲ್ಲಿ ಭಾರತೀಯ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ಭಾರತಕ್ಕೆ ರಫೇಲ್​​ ಯುದ್ಧ ವಿಮಾನ ಖರೀದಿಸಲು ಶ್ರಮಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು.. ಚಾಲಕನ ಪರಿಸ್ಥಿತಿ?
32 ವರ್ಷಗಳ ಅನುಭವವನ್ನು ವಿನಯ್​​​ ಮೋಹನ್​ ಕ್ವಾತ್ರಾ ಹೊಂದಿದ್ದಾರೆ. 2015 ಮತ್ತು ಆಗಸ್ಟ್​ 2017ರವರೆಗೆ 2 ವರ್ಷಗಳ ಕಾಲ ಪ್ರಧಾನ ಮಂತ್ರಿ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us