Advertisment

ವಿನೇಶ್ ಫೋಗಟ್ ಆಸ್ಪತ್ರೆಗೆ ದಾಖಲು.. ದೇಹದ ತೂಕ ದಿಢೀರ್‌ ಹೆಚ್ಚಾಗಲು ಕಾರಣವೇನು? ಅಸಲಿಗೆ ಆಗಿದ್ದೇನು?

author-image
admin
Updated On
ವಿನೇಶ್ ಫೋಗಟ್ ಫೈನಲ್​​ನಿಂದ ಅನರ್ಹ.. ಅವರಿಗೆ ಬೆಳ್ಳಿ ಅಥವಾ ಕಂಚು ಸಿಗುತ್ತಾ? ನಿಯಮ ಹೇಗಿದೆ?
Advertisment
  • ನಿನ್ನೆ ಇಡೀ ರಾತ್ರಿ ಮಲಗೇ ಇಲ್ಲ ಕುಸ್ತಿಪಟು ವಿನೇಶ್ ಫೋಗಟ್!
  • ಜಾಗಿಂಗ್‌, ಸೈಕ್ಲಿಂಗ್‌, ಸ್ಕಿಪ್ಪಿಂಗ್ ಮಾಡಿದ ವಿನೇಶ್ ಫೋಗಟ್ ಅಸ್ವಸ್ಥ
  • ಸೆಮಿಫೈನಲ್‌ನಲ್ಲಿ ದೇಹದ ತೂಕ ನಿನ್ನೆ 50 ಕೆಜಿಗಿಂತ ಕಡಿಮೆ ಇತ್ತು

ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳಾ ಕುಸ್ತಿ ಪಂದ್ಯದಲ್ಲಿ ಫೈನಲ್ ತಲುಪಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್‌ ಅವರು ಅನರ್ಹರಾಗಿದ್ದಾರೆ. ವಿನೇಶ್ ಫೋಗಟ್ ಅವರ ದೇಹದ ತೂಕದಲ್ಲಿ 150 ಗ್ರಾಂ ಏರಿಕೆಯಾದ ಪರಿಣಾಮ ಒಲಿಪಿಂಕ್ಸ್ ನಿಯಮದ ಅನುಸಾರ ಅನರ್ಹಗೊಳಿಸಲಾಗಿದೆ. ಈ ಆಘಾತದ ಸುದ್ದಿಯ ಮಧ್ಯೆ ವಿನೇಶ್ ಫೋಗಟ್‌ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

Advertisment

ಇದನ್ನೂ ಓದಿ: ವಿನೇಶ್ ಪೋಗಟ್ ಏನೇನ್‌ ತಿಂತಾರೆ? ಸಿಂಪಲ್​ ಫುಡ್‌ನಿಂದ ಹರಿಯಾಣದ ಕುಸ್ತಿಪಟು ಸ್ಟ್ರಾಂಗ್​​ ಆಗಿದ್ದು ಹೇಗೆ?  

ವಿನೇಶ್ ಫೋಗಟ್ ಅವರು ನಿನ್ನೆ 50 ಕೆಜಿ ವಿಭಾಗದ ಮಹಿಳಾ ಕುಸ್ತಿ ಪಂದ್ಯದಲ್ಲಿ ಕ್ವಾರ್ಟರ್‌ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯವನ್ನು ಆಡಿದ್ದರು. ಎರಡೂ ಪಂದ್ಯದಲ್ಲಿ ವೀರಾವೇಶದ ಆಟ ಪ್ರವೇಶಿಸಿದ್ದ ವಿನೇಶ್ ಫೈನಲ್ ಪ್ರವೇಶಿಸಿದ್ದರು. ಇಂದು ರಾತ್ರಿ 9.45ಕ್ಕೆ 50 ಕೆಜಿ ವಿಭಾಗದ ಕುಸ್ತಿ ಪಂದ್ಯ ಫೈನಲ್ ಪಂದ್ಯ ನಿಗದಿಯಾಗಿದೆ.

ಇದನ್ನೂ ಓದಿ: ವಿನೇಶ್‌ ಫೋಗಟ್‌ 100 ಗ್ರಾಂ ತೂಕ ಹೆಚ್ಚಾಗಿದ್ದು ಹೇಗೆ? ಒಲಿಂಪಿಕ್ಸ್‌ನಲ್ಲೂ ಕುಸ್ತಿಪಟುಗೆ ಮೋಸ ಆಯ್ತಾ? 

Advertisment

ಸೆಮಿಫೈನಲ್‌ನಲ್ಲಿ ಭಾಗಿಯಾಗಿದ್ದ ವಿನೇಶ್ ಫೋಗಟ್ ಅವರ ತೂಕ ನಿನ್ನೆ 50 ಕೆಜಿಗಿಂತ ಕಡಿಮೆಯೇ ಇತ್ತು. ಕ್ವಾರ್ಟರ್ ಫೈನಲ್‌, ಸೆಮಿಫೈನಲ್ ಮುಗಿದ ಮೇಲೆ ನೀರು ಕುಡಿದಿದ್ದಾರೆ. ಇದರ ಜೊತೆಗೆ ಊಟ ಮಾಡಿದ ಮೇಲೆ ವಿನೇಶ್ ಪೋಗಟ್ ಅವರ ದೇಹದ ತೂಕ ಬರೋಬ್ಬರಿ 2 ಕೆಜಿ ಹೆಚ್ಚಾಗಿದೆ. ಇದೇ ನೋಡಿ ಯಡವಟ್ಟಿಗೆ ಕಾರಣವಾಗಿದೆ.

publive-image

ಇಡೀ ರಾತ್ರಿ ವರ್ಕೌಟ್ ಮಾಡಿದ ಫೋಗಟ್‌! 
ಒಂದೇ ದಿನದಲ್ಲಿ 2 ಕೆಜಿ ತೂಕ ಜಾಸ್ತಿ ಆದ ವಿನೇಶ್ ಫೋಗಟ್ ಅವರು ಫೈನಲ್ ಪಂದ್ಯಕ್ಕೆ ಸಜ್ಜಾಗಿದ್ದಾರೆ. ನಿನ್ನೆ ಸೆಮಿಫೈನಲ್‌ ಪಂದ್ಯ ಮುಗಿದ ಮೇಲೆ ಊಟ ಮಾಡಿದ ಫೋಗಟ್ ಅವರು ದೇಹದ ತೂಕ ನೋಡಿ ಶಾಕ್ ಆಗಿದ್ದಾರೆ.

ವಿನೇಶ್ ಫೋಗಟ್ ಅವರು ನಿನ್ನೆ ಇಡೀ ರಾತ್ರಿ ಮಲಗೇ ಇಲ್ಲ. ಜಾಗಿಂಗ್, ಸ್ಕಿಪ್ಪಿಂಗ್, ಸೈಕ್ಲಿಂಗ್‌ ಮಾಡಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ರಾತ್ರಿ ಪೂರ್ತಿ ವರ್ಕೌಟ್ ಮಾಡಿದ ವಿನೇಶ್ ಫೋಗಟ್ ಅವರು 1.85 ಕಿ.ಲೋ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಆದರೆ 150 ಗ್ರಾಂ ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಈ 150 ಗ್ರಾಂ ತೂಕ ಕಡಿಮೆಯಾಗದ ಹಿನ್ನೆಲೆಯಲ್ಲಿ ವಿನೇಶ್ ಫೋಗಟ್ ಅವರು 50 ಕೆಜಿ 150 ಗ್ರಾಂಗೆ ತಲುಪಿದ್ದಾರೆ. 150 ಗ್ರಾಂ ತೂಕ ಹೆಚ್ಚಾದ ಹಿನ್ನೆಲೆಯಲ್ಲಿ ವಿನೇಶ್ ಫೋಗಟ್ ಅವರು ಒಲಿಂಪಿಕ್ಸ್ ಫೈನಲ್ ಪಂದ್ಯದಿಂದಲೇ ಅನರ್ಹರಾಗಿದ್ದಾರೆ.

Advertisment

ಇದನ್ನೂ ಓದಿ:ದಿಟ್ಟ ಹೋರಾಟಕ್ಕೆ ಸಂದ ಜಯ.. 82 ಬಾರಿ ಗೆದ್ದ ಕುಸ್ತಿಪಟುಗೆ ಮಣ್ಣು ಮುಕ್ಕಿಸಿದ ವಿನೇಶ್ ಪೋಗಟ್!

ವಿನೇಶ್‌ ಫೋಗಟ್ ಆರೋಗ್ಯ ಹೇಗಿದೆ?
ಇಡೀ ರಾತ್ರಿ ಜಾಗಿಂಗ್‌, ಸೈಕ್ಲಿಂಗ್‌, ಸ್ಕಿಪ್ಪಿಂಗ್ ಮಾಡಿದ ವಿನೇಶ್ ಫೋಗಟ್ ಅವರಿಗೆ ಡಿಹೈಡ್ರೇಷನ್ ಆಗಿದೆ. ಡಿಹೈಡ್ರೇಷನ್​ನಿಂದ ಬಳಿಸದ ವಿನೇಶ್​ ಫೋಗಟ್ ಅವರನ್ನು ಕೂಡಲೇ​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅತಿಯಾದ ದೈಹಿಕ ಕಸರತ್ತಿನಿಂದ ವಿನೇಶ್​ ಫೋಗಟ್​ ಅವರು ಬಳಲಿದ್ದು, ಪ್ಯಾರಿಸ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸದ್ಯ ವಿನೇಶ್​ ಫೋಗಟ್ ಅವರ ಆರೋಗ್ಯ ಸ್ಥಿರವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ವಿನೇಶ್​ ಫೋಗಟ್​ ಅವರು ತೂಕ ಇಳಿಸಲು ವ್ಯಾಯಾಮ ಮಾಡಿದ್ದೇ ಈ ಸ್ಥಿತಿಗೆ ಕಾರಣ ಎನ್ನಲಾಗಿದೆ. ದೇಹದಲ್ಲಿ ನೀರಿನ ಅಂಶದ ಕೊರತೆಯಿಂದ ವಿನೇಶ್​ ಅಸ್ವಸ್ಥರಾಗಿದ್ದಾರೆ. ವಿನೇಶ್ ಫೋಗಟ್ ಅವರು ಆಸ್ಪತ್ರೆ ಸೇರಿದ ಮೇಲೆ ತೂಕ ಜಾಸ್ತಿಯಾಗಿರುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment