ವಿನೇಶ್ ಫೋಗಟ್ ಕುರಿತ ವಿಚಾರಣೆ ಕೋರ್ಟ್ನಲ್ಲಿ ಹೇಗೆ ನಡೀತು?
ವಕೀಲ ಹರೀಶ್ ಸಾಳ್ವೆ ಯಾವೆಲ್ಲ ವಿಚಾರಗಳನ್ನು ಪ್ರಸ್ತಾಪಿಸಿದರು?
ವಾದ-ಪ್ರತಿವಾದ ಬಹುತೇಕ ಪೂರ್ಣಗೊಂಡಿದೆ, ಶೀಘ್ರದಲ್ಲೇ ತೀರ್ಪು
ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ವಿನೇಶ್ ಫೋಗಟ್ ಸಿಎಎಸ್‌ಗೆ ( Court of Arbitration for Sports) ಬೆಳ್ಳಿ ಪದಕ ನೀಡುವಂತೆ ಮನವಿ ಮಾಡಿದ್ದರು. ಒಲಿಂಪಿಕ್ ಕ್ರೀಡಾಕೂಟ ಅಂತ್ಯಕ್ಕೂ ಮೊದಲು ಕೋರ್ಟ್ ನಿರ್ಧಾರ ಪ್ರಕಟ ಮಾಡಬಹುದು ಎಂದು ಹೇಳಲಾಗಿದೆ.
ಹೈ-ಪ್ರೊಫೈಲ್ ಪ್ರಕರಣಗಳ ಹೋರಾಟ ಮಾಡಿ ಸಾಕಷ್ಟು ಅನುಭವ ಇರುವ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ವಿನೇಶ್ ಫೋಗಟ್ ಪರವಾಗಿ ಹೋರಾಡುತ್ತಿದ್ದಾರೆ. ನಿನ್ನೆ ಸುಮಾರು ಒಂದು ಗಂಟೆಗಳ ಕಾಲ ವಿಚಾರಣೆ ನಡೆದಿದೆ. ಹರೀಶ್ ಸಾಳ್ವೆ ನಾಲ್ಕು ವಾದಗಳನ್ನು ಮಂಡಿಸಿದ್ದಾರೆ. ಯಾವೆಲ್ಲ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ ಅನ್ನೋ ವಿವರ ಇಲ್ಲಿದೆ.
ಇದನ್ನೂ ಓದಿ:ನೀರಜ್ ಚೋಪ್ರಾಗೆ ಚಿನ್ನ ಸಿಗುತ್ತಾ? ಡೋಪ್ ಟೆಸ್ಟ್ನಲ್ಲಿ ಸಿಕ್ಕಿಬಿದ್ದರಾ ಪಾಕ್ನ ನದೀಮ್? ಹೊಸ ಟ್ವಿಸ್ಟ್..!
ವಿನೇಶ್ ಪರವಾಗಿ ಹೇಳಿದ್ದೇನು?
ವಿನೇಶ್ ಫೋಗಟ್ ಕುರಿತ ವಿಚಾರಣೆಯಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಮೊದಲ ಅಂಶವೆಂದರೆ ವಿನೇಶ್ ಯಾವುದೇ ವಂಚನೆ ಮಾಡಿಲ್ಲ. ಹೀಗಾಗಿ ಅವರಿಗೆ ಬೆಳ್ಳಿ ಪದಕ ನೀಡಿ ಗೌರವಿಸಬೇಕು. ಎರಡನೇಯದು ವಿನೇಶ್ ಫೋಗಟ್ ತೂಕ ಹೆಚ್ಚಾಗುವುದು ದೇಹದ ಸ್ವಾಭಾವಿಕ ಚೇತರಿಕೆಯ ಪ್ರಕ್ರಿಯೆ. ಇದರಲ್ಲಿ ಅವರು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.
ಮೂರನೇಯದು, ಒಬ್ಬ ಕ್ರೀಡಾಪಟು ತನ್ನ ದೇಹವನ್ನು ನೋಡಿಕೊಳ್ಳುವ ಹಕ್ಕು ಹೊಂದಿದ್ದಾನೆ. ಆದರೆ ಮೊದಲ ದಿನ ವಿನೇಶ್ ಅವರ ತೂಕ ನಿಗದಿತ ಮಾನದಂಡಕ್ಕಿಂತ ಕಡಿಮೆಯಾಗಿದೆ. ಏತನ್ಮಧ್ಯೆ ಪೌಷ್ಟಿಕಾಂಶಗಳನ್ನು ಸೇವಿಸುವುದು ಅವರ ಮೂಲಭೂತ ಹಕ್ಕು ಎಂದು ವಾದ ಮಂಡಿಸಿರುವ ಬಗ್ಗೆ ವರದಿಯಾಗಿದೆ.
ಇದನ್ನೂ ಓದಿ: ಮೂಗಿನಿಂದ ರಕ್ತ ಬರುತ್ತಲೇ ಇತ್ತು.. ಆದರೂ ಛಲ ಬಿಡಲಿಲ್ಲ.. ಭಾರತಕ್ಕೆ ಪದಕ ತಂದ್ಕೊಟ್ಟ ಅಮನ್ ಯಾರು
ಒಂದು ಗಂಟೆ ಕಾಲ ಚರ್ಚೆ..!
ವರದಿಯ ಪ್ರಕಾರ.. ಪ್ರಕರಣದ ವಿಚಾರಣೆ ಮುಗಿದೆ. ಶೀಘ್ರದಲ್ಲೇ ತೀರ್ಪು ಪ್ರಕಟಗೊಳ್ಳಬಹುದು. ಇಂದು ಮತ್ತು ನಾಳೆ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ. ವಿನೇಶ್ ಫೋಗಟ್ ಮತ್ತು ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯೂಡಬ್ಲ್ಯು) ಎರಡೂ ಕಡೆಯ ವಾದ-ಪ್ರತಿವಾದ ಸುಮಾರು ಒಂದು ಗಂಟೆಗಳ ಕಾಲ ನಡೆದಿದೆ ಎನ್ನಲಾಗಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಚ್ (Thomas Bach) ವಿನೇಶ್ ಫೋಗಟ್ ವಿಷಯವನ್ನು ಕೋರ್ಟ್ಗೆ ತೆಗೆದುಕೊಂಡು ಹೋಗುವುದನ್ನು ವಿರೋಧಿಸಿದ್ದರು. ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ನಿಯಮಗಳ ಅಡಿಯಲ್ಲಿ ಇದೆಲ್ಲವೂ ನಡೆಯುತ್ತಿದೆ ಎಂದು ಅವರು ಹೇಳಿದ್ದರು. ಇಂತಹ ಪರಿಸ್ಥಿತಿಯಲ್ಲಿ ಇಬ್ಬರನ್ನು ಬೆಳ್ಳಿ ಪದಕ ವಿಜೇತರೆಂದು ಘೋಷಿಸುವ ಭರವಸೆ ತುಂಬಾ ಕಡಿಮೆಯಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಆಘಾತಕಾರಿ ಸುದ್ದಿ.. ಸುನಿತಾ ವಿಲಿಯಮ್ಸ್ ಭೂಮಿಗೆ ಈ ವರ್ಷ ಬರಲ್ಲ.. ಮತ್ತೊಂದು ಅಪ್ಡೇಟ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ