Advertisment

ವಿನೇಶ್ ಫೋಗಟ್ ಫೈನಲ್​​ನಿಂದ ಅನರ್ಹ.. ಅವರಿಗೆ ಬೆಳ್ಳಿ ಅಥವಾ ಕಂಚು ಸಿಗುತ್ತಾ? ನಿಯಮ ಹೇಗಿದೆ?

author-image
Ganesh
Updated On
ವಿನೇಶ್ ಫೋಗಾಟ್​ಗೆ ಸಿಲ್ವರ್ ಮೆಡಲ್ ಬರುತ್ತಾ..? ಭಾರತದ ಸ್ಪರ್ಧಿ ಪರ ಧ್ವನಿ ಎತ್ತಿದ 4 ರಾಷ್ಟ್ರಗಳು!
Advertisment
  • ಫೈನಲ್ ಪ್ರವೇಶ ಬೆನ್ನಲ್ಲೇ ಮತ್ತೆ ಅಭ್ಯಾಸ, ರಾತ್ರಿ ನಿದ್ರೆ ಮಾಡಿರಲಿಲ್ಲ
  • ಬೆಳಗ್ಗೆ ತೂಕ ಮಾಡಿದಾಗ 2 ಕೆಜಿ ಹೆಚ್ಚಿದ್ದರು, ನಂತರ ಮಾಡಿದ್ದೇನು?
  • 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದ ಫೋಗಟ್

ದೇಶದ ಹೆಮ್ಮೆಯ ಕುಸ್ತಿಪಟು ವಿನೇಶ್ ಫೋಗಟ್ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ತಲುಪುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಈಗ ಇದ್ದಕ್ಕಿದ್ದಂತೆ 140 ಕೋಟಿ ಭಾರತೀಯರ ಹೃದಯ ಛಿದ್ರ ಛಿದ್ರಗೊಂಡಿದೆ. ವಿನೇಶ್ 50 ಕೆಜಿಗಿಂತ ಕಡಿಮೆ ತೂಕ ನಿಯಂತ್ರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಫೈನಲ್​​ನಿಂದ ಅನರ್ಹಗೊಂಡಿದ್ದಾರೆ.

Advertisment

ವಿನೇಶ್ ಫೋಗಟ್ ಫೈನಲ್‌ಗೆ ಅನರ್ಹಗೊಂಡ ಬೆನ್ನಲ್ಲೇ ಇದರಿಂದ ಷಡ್ಯಂತ್ರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಫೈನಲ್ ಪ್ರವೇಶ ಮಾಡಿರುವ ಫೋಗಟ್​​ಗೆ ಯಾವುದೇ ಪದಕಗಳು ಸಿಗುವುದಿಲ್ಲವೇ ಎಂಬ ಪ್ರಶ್ನೆಯನ್ನು ಹಲವರು ಮಾಡ್ತಿದ್ದಾರೆ.

ಇದನ್ನೂ ಓದಿ:ವಿನೇಶ್ ಫೋಗಟ್ ಆಸ್ಪತ್ರೆಗೆ ದಾಖಲು.. ದೇಹದ ತೂಕ ದಿಢೀರ್‌ ಹೆಚ್ಚಾಗಲು ಕಾರಣವೇನು? ಅಸಲಿಗೆ ಆಗಿದ್ದೇನು?

publive-image

ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (UWW) ನಿಯಮದ ಪ್ರಕಾರ.. ತೂಕದ ಪ್ರಕ್ರಿಯೆಯು ಎರಡು ಬಾರಿ ನಡೆಯುತ್ತದೆ. ಸಾಮಾನ್ಯವಾಗಿ ಪಂದ್ಯ ಶುರುವಾಗುವ ಕೆಲವೇ ನಿಮಿಷಗಳ ಮುಂಚೆ ಸ್ಪರ್ಧಿಗಳ ತೂಕ ಮಾಡುವ ನಿಯಮವಿದೆ. ಅಥ್ಲೀಟ್ ತೂಕದ ಮಿತಿಗಿಂತ ಹೆಚ್ಚಿರುವುದು ಕಂಡುಬಂದರೆ ಅವರು ಸ್ಪರ್ಧೆಗೆ ಅರ್ಹರಲ್ಲ. ಅವರು ಯಾವುದೇ ಪದಕವನ್ನೂ ಪಡೆಯುವುದಿಲ್ಲ. ಜೊತೆಗೆ ಅವರಿಗೆ ಯಾವುದೇ ಶ್ರೇಣಿಯನ್ನು ಕೂಡ ನೀಡುವುದಿಲ್ಲ. ನೇರವಾಗಿ ಹೇಳೋದಾದರೆ ಅನರ್ಹಗೊಂಡ ನಂತರ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಯಾವುದೇ ಪದಕ ಗೆಲ್ಲಲು ಸಾಧ್ಯವಾಗುವುದಿಲ್ಲ. ಫೈನಲ್ ತಲುಪಿದ್ದರೂ ಪದಕವಿಲ್ಲದೆ ತವರಿಗೆ ಮರಳಬೇಕಾಗಿದೆ. ಫೈನಲ್‌ಗೆ ತಲುಪಿದ್ದರೂ ಚಿನ್ನ ಪಡೆಯುವುದನ್ನು ಮರೆತು ಬೆಳ್ಳಿ ಮತ್ತು ಕಂಚಿನ ಪದಕವನ್ನೂ ಕಳೆದುಕೊಳ್ಳಬೇಕಾಗಿದೆ.

Advertisment

ಇದನ್ನೂ ಓದಿ:ವಿನೇಶ್ ಫೋಗಟ್ ಗೆಲುವಿನ ಬಗ್ಗೆ ಕಂಗನಾ ರಣಾವತ್ ವ್ಯಂಗ್ಯ; ರೊಚ್ಚಿಗೆದ್ದ ಜನ..!

publive-image

ವಿನೇಶ್ ಫೋಗಟ್ ವಿಡಿಯೋ ಬಹಿರಂಗ
ಫೋಗಟ್ ಫೈನಲ್ ಪ್ರವೇಶ ಮಾಡ್ತಿದ್ದಂತೆಯೇ ಫೋಗಟ್​, ಅವರು ಪ್ರ್ಯಾಕ್ಟೀಸ್ ಮಾಡ್ತಿರುವ ವಿಡಿಯೋ ಒಂದನ್ನು ಬಹಿರಂಗ ಮಾಡಲಾಗಿದೆ. ಫೋಗಟ್ ಕೋಚ್​ ಜೊತೆ ಅಭ್ಯಾಸ ಮಾಡುತ್ತಿದ್ದಾರೆ. ವಿನೇಶ್‌ ರಾತ್ರಿಯಿಡೀ ನಿದ್ದೆ ಮಾಡಿರಲಿಲ್ಲ. ಬೆಳಗ್ಗೆ ಎದ್ದ ನಂತರ ತೂಕ ಮಾಡಲಾಗಿದೆ. ಈ ವೇಳೆ ನಿಗದಿತ ಮಿತಿಗಿಂತ ಸುಮಾರು 2 ಕೆಜಿ ತೂಕ ಹೆಚ್ಚಿತ್ತು ಎಂದು ಹೇಳಲಾಗುತ್ತಿದೆ. ಅವರ ತೂಕವನ್ನು ನಿಯಂತ್ರಣಕ್ಕೆ ತರಲು ಆಹಾರ ಸೇವನೆ ಮಾಡಿರಲಿಲ್ಲ. ಕಡಿಮೆ ನೀರು ಕುಡಿಯುತ್ತಿದ್ದರು. ಹೀಗಿದ್ದೂ ಅವರ ತೂಕವು 100 ಗ್ರಾಂಗಳಷ್ಟು ಹೆಚ್ಚಿರುವುದು ಕಂಡುಬಂದಿದೆ. ಹೀಗಾಗಿ ಫೋಗಟ್ ಒಲಿಂಪಿಕ್ಸ್​​ನಿಂದ ಹೊರ ಬಿದ್ದಿದ್ದಾರೆ.

ಇದನ್ನೂ ಓದಿ:Big Updates: ಸುನಿತಾ ವಿಲಿಯಮ್ಸ್​ಗೆ ಮತ್ತೊಂದು ಸಂಕಷ್ಟ.. ಮತ್ತೆ ಏನಾಯ್ತು..?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment