/newsfirstlive-kannada/media/post_attachments/wp-content/uploads/2024/08/vinesh_phogat_2.jpg)
ನವದೆಹಲಿ: 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 50 ಕೆ.ಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಅನರ್ಹಗೊಂಡಿದ್ದ ವಿನೇಶ್ ಫೋಗಟ್ ಗೋಲ್ಡ್ ಮೆಡಲ್ ಪಡೆಯಲಾಗದೇ ಭಾರೀ ನಿರಾಸೆಗೆ ಒಳಗಾಗಿದ್ದರು. ಆದರೆ ಇದೀಗ ವಿನೇಶ್ ಫೋಗಟ್ ಅವರಿಗೆ ಬಂಗಾರದ ಪದಕ ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ:ಐಫೋನ್ಗಾಗಿ 3 ದಿನ ಮಗ ಉಪವಾಸ.. ಮಿಡಿದ ಮಾತೃ ಹೃದಯ, ಯುವಕನ ಹಠಕ್ಕೆ ಭಾರೀ ಆಕ್ರೋಶ
ವಿನೇಶ್ ಫೋಗಟ್ ಅವರು ಪ್ಯಾರಿಸ್ನಿಂದ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಿಂದ ತಮ್ಮ ಹುಟ್ಟೂರು ಹರಿಯಾಣದ ಭಿವಾನಿ ಜಿಲ್ಲೆಯ ಬಲಾಲಿ ಗ್ರಾಮಕ್ಕೆ ಸುಮಾರು 135 ಕಿ.ಮೀ ದೂರ ಅದ್ಧೂರಿ ಮೆರವಣಿಗೆ ಮೂಲಕ ಸಾಗಿದರು. ಈ ವೇಳೆ ಜನರು ಜೈಕಾರ, ಹೂವಿನ ಹಾರ ಹಾಕಿ ಗೌರವಿಸಿದರು. ಇದರಿಂದ ವಿನೇಶ್ ಫೋಗಟ್ ತಮ್ಮ ಗ್ರಾಮವನ್ನು ತಲುಪಲು ಒಟ್ಟು 13 ಗಂಟೆಗಳು ಬೇಕಾದವು ಎಂದು ತಿಳಿದು ಬಂದಿದೆ.
Vinesh Phogat for CM candidate for congress in coming Haryana election .. ?? https://t.co/FbXfAucLVE
— @nmol ₹astogi Zii (@anmolrastogi)
Vinesh Phogat for CM candidate for congress in coming Haryana election .. 🤭🤭 https://t.co/FbXfAucLVE
— Saree/Suit Bechne Wala Bhaiyya (@anmolrastogi) August 18, 2024
">August 18, 2024
ವಿನೇಶ್ ಫೋಗಟ್ ತಮ್ಮ ಗ್ರಾಮವನ್ನು ತಲುಪುತ್ತಿದ್ದಂತೆ ಖಾಪ್ ಪಂಚಾಯತಿ ವ್ಯಾಪ್ತಿಯ ಅವರ ಅಭಿಮಾನಿಗಳು, ಗ್ರಾಮಸ್ಥರು ಸೇರಿ ದೊಡ್ಡ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ವಿನೇಶ್ ಫೋಗಟ್ರಿಗೆ ನೋಟಿನಿಂದ ಮಾಡಿದ ಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸಿ ಬಳಿಕ ಚಿನ್ನದ ಪದಕವನ್ನು ಕೊರಳಿಗೆ ಹಾಕಲಾಯಿತು. ಇದರಿಂದ ವಿನೇಶ್ ಫೋಗಟ್ ಫುಲ್ ಖುಷಿಯಲ್ಲೇ ಭಾವುಕರಾದರು. ಈ ವೇಳೆ ಮಾತನಾಡಿದ ಅವರು, ಇಂತಹ ಮಹಾನ್ ಗೌರವಕ್ಕೆ ಹೋಲಿಕೆ ಮಾಡಿಕೊಂಡರೆ 1,000 ಒಲಿಂಪಿಕ್ ಚಿನ್ನದ ಪದಕಗಳು ಇದಕ್ಕೆ ಸಮ ಎಂದು ಹೇಳಿದರು. ಇನ್ನು ಇದೇ ವೇಳೆ ನಗದು ಬಹುಮಾನ ಕೂಡ ಅವರಿಗೆ ನೀಡಲಾಯಿತು ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ