ರಾಜಕೀಯಕ್ಕೆ ಮಹಿಳಾ ಕುಸ್ತಿಪಟು; ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ವಿನೇಶ್​​ ಪೋಗಟ್​ ಕಣಕ್ಕೆ

author-image
Gopal Kulkarni
Updated On
Haryana election ರೋಚಕ ಫಲಿತಾಂಶದಲ್ಲಿ ವಿನೇಶ್ ಫೋಗಟ್‌ಗೆ ಮುನ್ನಡೆ!
Advertisment
  • ಕಾಂಗ್ರೆಸ್ ಸೇರಿದ್ದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್​ಗೆ ಟಿಕೆಟ್
  • ಜುಲಾನ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೇಶ್ ಪೋಗಟ್ ಆಯ್ಕೆ
  • ಇತ್ತೀಚೆಗಷ್ಟೆ ಕಾಂಗ್ರೆಸ್ ಪಾಳಯ ಸೇರಿಕೊಂಡಿದ್ದ ವಿನೇಶ್ ಮತ್ತು ಭಜರಂಗ

ಹರಿಯಾಣ ಹಾಗೂ ಜಮ್ಮು ಕಾಶ್ಮೀರದ ಚುನಾವಣೆ ಘೋಷಣೆಯಾದ ಬೆನ್ನಲ್ಲಿಯೇ ಕಾಂಗ್ರೆಸ್ ಹರಿಯಾಣದ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಒಟ್ಟು 31 ಜನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್​ ಪಾಳಯ ಅದರಲ್ಲಿ ಒಲಿಂಪಿಕ್ಸ್ ಕುಸ್ತಿಪಟು ವಿನೇಶ್​ ಪೋಗಟ್​ಗೆ ಜುಲಾನ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಿದೆ

ಇದನ್ನೂ ಓದಿ:ಕಾಶಿಯಲ್ಲಿ ಪಾನ್​ ಬೀಡ ಮೇಲೆ ಹೂಡಿಕೆ ಮಾಡಿ; ವಿಶ್ವ ಉದ್ಯಮಿಗಳಿಗೆ ಪ್ರಧಾನಿ ಮೋದಿ ಆಫರ್​​

publive-image
ತಮ್ಮ ಕುಸ್ತಿ ಕ್ರೀಡೆಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲಿಯೇ ವಿನೇಶ್​ ಪೋಗಟ್​ಗೆ ಕಾಂಗ್ರೆಸ್​ನಿಂದ ಆಹ್ವಾನ ಬಂದಿರುವ ಬಗ್ಗೆ ಅನೇಕ ಗುಸುಗುಸು ಸುದ್ದಿಗಳು ಶುರುವಾಗಿದ್ದವು. ಇತ್ತೀಚೆಗಷ್ಟೇ ಕಾಂಗ್ರೆಸ್​ ಪಕ್ಷ ಸೇರುವ ಮೂಲಕ ವಿನೇಶ್ ಪೋಗಟ್ ಗುಸುಗುಸು ಸುದ್ದಿ ನಿಜ ಎಂಬುದನ್ನು ಸ್ಪಷ್ಟಪಡಿಸಿದ್ದರು. ಕುಸ್ತಿಪಟು ಭಜರಂಗ ಪೂನಿಯಾ ಹಾಗೂ ವಿನೇಶ್ ಪೋಗಟ್​ ಇಬ್ಬರೂ ಕಾಂಗ್ರೆಸ್ ಪಕ್ಷ ಸೇರಿಕೊಂಡರು. ಸದ್ಯ ಮೊದಲ 90 ವಿಧಾನಸಭಾ ಕ್ಷೇತ್ರಗಳ ಪೈಕಿ 31 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಮಾಡಿದ್ದು. ಮುಂದಿನ ಪಟ್ಟಿಯಲ್ಲಿ ಭಜರಂಗ ಪೂನಿಯಾಗೂ ಟಿಕೆಟ್ ಸಿಗುವ ಸಾಧ್ಯತೆಯನ್ನು ದಟ್ಟವಾಗಿಸಿದೆ.

Advertisment