100 ಗ್ರಾಂ ತೂಕ, ಇಡೀ ರಾತ್ರಿ ವರ್ಕೌಟ್.. ವಿನೇಶ್ ಫೋಗಟ್‌ ಕೈ ಜಾರಿದ ಚಿನ್ನದ ಪದಕ; ಅನುಮಾನಗಳೇನು?

author-image
admin
Updated On
100 ಗ್ರಾಂ ತೂಕ, ಇಡೀ ರಾತ್ರಿ ವರ್ಕೌಟ್.. ವಿನೇಶ್ ಫೋಗಟ್‌ ಕೈ ಜಾರಿದ ಚಿನ್ನದ ಪದಕ; ಅನುಮಾನಗಳೇನು?
Advertisment
  • ನಿನ್ನೆ 50 ಕೆ.ಜಿ ಒಳಗಡೆ ತೂಕವನ್ನು ಹೊಂದಿದ್ದ ವಿನೇಶ್ ಫೋಗಟ್!
  • ರಾತ್ರಿ 9.45ಕ್ಕೆ ಫೈನಲ್ ಪಂದ್ಯಕ್ಕೆ ಬೆಳಗ್ಗೆಯೇ ತೂಕ ಪರಿಶೀಲಿಸಿದ್ದು ಯಾಕೆ?
  • ಒಲಿಂಪಿಕ್ಸ್ ನಿಯಮದ ಪ್ರಕಾರ ತೂಕ ಕಾಪಾಡಿಕೊಳ್ಳದಿರಲು ಕಾರಣವೇನು?

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಫೈನಲ್‌ ತಲುಪಿದ್ದ ವಿನೇಶ್ ಫೋಗಟ್‌ ಅಚ್ಚರಿಯ ರೀತಿಯಲ್ಲಿ ಅನರ್ಹರಾಗಿದ್ದಾರೆ. ಒಲಿಂಪಿಕ್ಸ್‌ ಇತಿಹಾಸದಲ್ಲೇ ಅನರ್ಹರಾದ ಮೊದಲ ಭಾರತದ ಕ್ರೀಡಾಪಟು ವಿನೇಶ್ ಫೋಗಟ್ ಅವರಾಗಿದ್ದು, ಎಲ್ಲರಿಗೂ ಆಘಾತ ತಂದಿದೆ. ವಿನೇಶ್ ಫೋಗಟ್ ಅವರು ಒಲಿಂಪಿಕ್ಸ್ ನಿಯಮದ ಪ್ರಕಾರ ತೂಕ ಕಾಪಾಡಿಕೊಳ್ಳದೇ ಇರೋದು ಇಡೀ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.

ವಿನೇಶ್ ಫೋಗಟ್ ಅವರು ಒಲಿಂಪಿಕ್ಸ್‌ನ 50 ಕೆಜಿ ಕುಸ್ತಿ ಪಂದ್ಯದಲ್ಲಿ ಫೈನಲ್ ತಲುಪಿದ ಮೊದಲ ಮಹಿಳಾ ಕ್ರೀಡಾಪಟುವಾಗಿದ್ದರು. ಅಂತೆಯೇ ಒಲಿಂಪಿಕ್ಸ್‌ನಿಂದ ಅನರ್ಹರಾದ ಭಾರತದ ಮೊದಲ ಸ್ಪರ್ಧಿ ಅನ್ನೋ ಕುಖ್ಯಾತಿಗೂ ಗುರಿಯಾಗಿದ್ದಾರೆ. ವಿನೇಶ್ ಫೋಗಟ್‌ ಅವರಿಗೆ ಅಸಲಿಗೆ ಆಗಿದ್ದೇನು? ಪ್ಯಾರಿಸ್‌ನಲ್ಲಿ 100 ಗ್ರಾಂ ತೂಕದ ಸೋಲಿಗೆ ನಿಜವಾದ ಕಾರಣವೇನು ಅನ್ನೋದು ಕುತೂಹಲದ ಕೇಂದ್ರ ಬಿಂದುವಾಗಿದೆ.

publive-image

ಇದನ್ನೂ ಓದಿ:ವಿನೇಶ್ ಫೋಗಟ್ ಫೈನಲ್​​ನಿಂದ ಅನರ್ಹ.. ಅವರಿಗೆ ಬೆಳ್ಳಿ ಅಥವಾ ಕಂಚು ಸಿಗುತ್ತಾ? ನಿಯಮ ಹೇಗಿದೆ?

ಮೇಲ್ಮನವಿಗೆ ಅವಕಾಶವೇ ಇಲ್ಲ!
ಪ್ಯಾರಿಸ್​​ ಒಲಿಂಪಿಕ್ಸ್​​ನಲ್ಲಿ ಫೈನಲ್ ತಲುಪಿದ್ದ ವಿನೇಶ್ ಫೋಗಟ್​ ಅವರಿಗೆ ಪದಕ​ ಕೈ ಜಾರಿ ಹೋಗಿದೆ. ಕೇವಲ 100 ಗ್ರಾಂ ತೂಕ ಹೆಚ್ಚಾಗಿದ್ದಕ್ಕೆ ಫೈನಲ್​​ನಿಂದ ಫೋಗಟ್‌ ಅನರ್ಹರಾಗಿದ್ದಾರೆ. ಒಲಿಂಪಿಕ್ಸ್ ಅಸೋಸಿಯೇಷನ್ ಈ​ ತೀರ್ಪಿಗೆ ಭಾರತದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ ಫೋಗಟ್‌ ಅವರ ಅನರ್ಹತೆಯ ವಿರುದ್ಧ ಮೇಲ್ಮನವಿಗೆ ಇಂಟರ್ ನ್ಯಾಷನಲ್ ಒಲಿಂಪಿಕ್ಸ್ ಸಮಿತಿಯಲ್ಲಿ ಅವಕಾಶವೇ ಇಲ್ಲ.

100 ಗ್ರಾಂ ತೂಕದಿಂದ ಕೈ ಜಾರಿದ ಚಿನ್ನ!
ನಿನ್ನೆ 50 ಕೆ.ಜಿಯ ಒಳಗಡೆಯೇ ತೂಕವನ್ನು ಹೊಂದಿದ್ದ ವಿನೇಶ್ ಫೋಗಟ್
ಇವತ್ತು ಬೆಳಗ್ಗೆ ತೂಕದ ಪರಿಶೀಲನೆಯ ವೇಳೆ 100 ಗ್ರಾಂ ತೂಕ ಹೆಚ್ಚಳ
ಪ್ರತಿ ಸ್ಪರ್ಧೆ ಆರಂಭಕ್ಕೂ ಮುನ್ನ ಕ್ರೀಡಾಪಟುವಿನ ತೂಕ ಪರಿಶೀಲನೆ
ರಾತ್ರಿ 9.45ಕ್ಕೆ ಫೈನಲ್ ಪಂದ್ಯಕ್ಕೆ ಬೆಳಗ್ಗೆಯೇ ತೂಕ ಪರಿಶೀಲಿಸಿದ್ದು ಯಾಕೆ?
53 ಕೆಜಿಯಲ್ಲಿ ಸ್ಪರ್ಧಿಸುತ್ತಿದ್ದ ವಿನೇಶ್ ಫೋಗಟ್ 50 ಕೆಜಿಯಲ್ಲಿ ಸ್ಪರ್ಧೆ
50 ಕೆಜಿಯಲ್ಲಿ ಸ್ಪರ್ಧಿಸುವ ಕ್ರೀಡಾಪಟು 47 ಕೆಜಿ ತೂಕ ಕಾಪಾಡಿಕೊಳ್ಳಬೇಕು

ಇದನ್ನೂ ಓದಿ: ವಿನೇಶ್‌ ಫೋಗಟ್‌ 100 ಗ್ರಾಂ ತೂಕ ಹೆಚ್ಚಾಗಿದ್ದು ಹೇಗೆ? ಒಲಿಂಪಿಕ್ಸ್‌ನಲ್ಲೂ ಕುಸ್ತಿಪಟುಗೆ ಮೋಸ ಆಯ್ತಾ? 

ಸುಸ್ತಾದ ಕುಸ್ತಿಪಟು ಆರೋಗ್ಯ ಹೇಗಿದೆ?
ಫೈನಲ್ ಪಂದ್ಯಕ್ಕೆ ಸಜ್ಜಾಗಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅವರು ರಾತ್ರಿ ಇಡೀ ವರ್ಕೌಟ್ ಮಾಡಿದ್ದಾರೆ. ಸೈಕ್ಲಿಂಗ್‌, ಜಾಗಿಂಗ್‌, ಸ್ಕಿಪ್ಪಿಂಗ್ ಹೀಗೆ ತೂಕ ಇಳಿಸಿಕೊಳ್ಳಲು ವಿನೇಶ್ ಫೋಗಟ್ ಅವರು ಅತಿಯಾದ ದೈಹಿಕ ಕಸರತ್ತು ಮಾಡಿದ್ದಾರೆ. ವ್ಯಾಯಾಮದಿಂದ ಸುಸ್ತಾಗಿದ್ದ ಕುಸ್ತಿಪಟು ವಿನೇಶ್​ ಫೋಗಟ್ ಅವರಿಗೆ ದೇಹದಲ್ಲಿ ನೀರಿನ ಅಂಶದ ಕೊರತೆಯಿಂದ ಅಸ್ವಸ್ಥರಾಗಿದ್ದಾರೆ. ಡಿಹೈಡ್ರೇಷನ್​ನಿಂದ ಆಸ್ಪತ್ರೆಗೆ ದಾಖಲಾದ ವಿನೇಶ್​ ಫೋಗಟ್​ ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment