ಒಂದೇ ದಿನ 3 ಪಂದ್ಯ ಗೆಲುವು, ಫೈನಲ್‌ ತಲುಪಿದ ವಿನೇಶ್‌ ಫೋಗಾಟ್‌.. ಇಂದು ಚಿನ್ನಕ್ಕಾಗಿ ಬೇಟೆಯಾಡಲಿದ್ದಾರೆ ದಂಗಲ್​ ಹುಡುಗಿ

author-image
AS Harshith
Updated On
ಗುಡ್​ನ್ಯೂಸ್ ಕೊಟ್ಟ ಫೋಗಟ್​​; ಮತ್ತೆ ಕುಸ್ತಿ ಅಖಾಡದಲ್ಲಿ ತೊಡೆ ತಟ್ಟುವ ಸುಳಿವು ಕೊಟ್ಟ ವಿನೇಶ್​​
Advertisment
  • ಏಷ್ಯಾ ಚಾಂಪಿಯನ್‌ ವಿನೇಶ್‌ ಫೋಗಾಟ್‌ ಬೊಂಬಾಟ್​ ಆಟ
  • 4 ಬಾರಿ ವಿಶ್ವ ಚಾಂಪಿಯನ್‌ ಪಡೆದ ಯೂಯ್‌ ಸುಸಾಕಿಯನ್ನು ಸೋಲಿಸಿದ ದಂಗಲ್​ ಹುಡುಗಿ
  • ಜಪಾನೀಸ್‌ ಕುಸ್ತಿಪಟುವಿನ ದಾಖಲೆಯ ಪುಟ ತಿದ್ದಿದ ಫೋಗಾಟ್.. ಇಂದು ಚಿನ್ನಕ್ಕಾಗಿ ಹೋರಾಟ

ಪ್ಯಾರಿಸ್​​ ಒಲಿಂಪಿಕ್ಸ್​​ನಲ್ಲಿ ಭಾರತ ಪದಕ ಬೇಟೆ ಈಗ ಆರಂಭಿಸಿದೆ. ಚಿನ್ನದ ಬೇಟೆಗೆ ಗುರಿ ಇಟ್ಟಿರುವ ವಿನೇಶ್​ ಫೋಗಾಟ್​, ನೀರಜ್​ ಚೋಪ್ರಾ, ಬಂಗಾರದ ಭರವಸೆ ಮೂಡಿಸಿದ್ದಾರೆ. ಆದ್ರೆ, ಅದೇ ಆಸೆಯಲ್ಲಿದ್ದ ಹಾಕಿ ತಂಡ, ನಿನ್ನೆ ಸೆಮಿ ಫೈನಲ್​ ಪಂದ್ಯ ಸೋತು ಕಂಚಿನ ಕದನಕ್ಕೆ ಕಾದಿದೆ.

ಭಾರತಕ್ಕೆ ಚಿನ್ನದ ಕನಸು. ಬಂಗಾರದ ಭರವಸೆ. ಮಂಗಳವಾರ ಭಾರತದ ಪಾಲಿಗೆ ಶುಭಕರ ಆಗಿತ್ತು. ಪ್ಯಾರಿಸ್‌ ಒಲಿಂಪಿಕ್ಸ್​ನಲ್ಲಿ ಭಾರತ ಭರವಸೆ ಪ್ರದರ್ಶನ, ಹಿಗ್ಗುವಂತೆ ಮಾಡಿತ್ತು. ಅದರಲ್ಲೂ ಸ್ಟಾರ್‌ ಕುಸ್ತಿ ಪಟು ವಿನೇಶ್‌ ಫೋಗಾಟ್​ ಬೊಂಬಾಟ ಆಗಿತ್ತು. ಒಂದೇ ದಿನ ಮೂರು ಮ್ಯಾಚ್​​ ಬಡಿದು ಬಿಸಾಕಿದ ಈ ದಂಗಲ್​ ಹುಡುಗಿ, ಭಾರತದ ಕನಸ್ಸನೇ ಜೀವಂತ ಇರಿಸಿದ್ದಾಳೆ.

publive-image

ಚಿನ್ನದ ಬೇಟೆಗಾಗಿ ಫೋಗಾಟ್​​ಗೆ ಒಂದೇ ಹೆಜ್ಜೆ!

ಮಹಿಳೆಯರ ಕುಸ್ತಿ 50 ಕೆ.ಜಿ ಫ್ರೀ ಸ್ಟೈಲ್‌ ವಿಭಾಗದ ಸೆಮಿಫೈನಲ್​ ಪಂದ್ಯದಲ್ಲಿ ಗೆಲುವು ಪಡೆದ ಏಷ್ಯಾ ಚಾಂಪಿಯನ್‌ ವಿನೇಶ್‌ ಫೋಗಾಟ್‌ ಫೈನಲ್‌ಗೆ ಪ್ರವೇಶ ಮಾಡಿದ್ದಾರೆ. ಆ ಮೂಲಕ ಚಿನ್ನದ ಪದಕ ಗೆಲ್ಲುವ ಭರವಸೆಯ ಮಿಂಚು ಹರಿಸಿದ್ದಾರೆ.

ಇದನ್ನೂ ಓದಿ: ಅಂಬಾನಿ ಐಷಾರಾಮಿ ಮನೆಗೆ ಎಷ್ಟು ಸಾವಿರ ಕೋಟಿ ಖರ್ಚು? ತಿಂಗಳ ಕರೆಂಟ್​ ಬಿಲ್​ ಕೇಳಿದ್ರೆ ಶಾಕ್​ ಆಗ್ತೀರಾ!

ಪ್ರೀಕ್ವಾರ್ಟರ್‌ ಫೈನಲ್‌ ಹಣಾಹಣಿ, ಯೂಯ್‌ ಸುಸಾಕಿಗೆ ಆಘಾತ

ಪ್ರೀಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಯೂಯ್‌ ಸುಸಾಕಿಗೆ ಆಘಾತ ನೀಡಿದ್ದ ವಿನೇಶ್‌ ಫೋಗಾಟ್‌, ಪ್ಯಾರಿಸ್‌ ಒಲಿಂಪಿಕ್ಸ್​ನಲ್ಲಿ ಮಣ್ಣು ಮುಕ್ಕಿಸಿದ್ದಾರೆ. ನಾಲ್ಕು ಬಾರಿ ವಿಶ್ವ ಚಾಂಪಿಯನ್‌ ಯೂಯ್‌ ಸುಸಾಕಿ ಇಲ್ಲಿವರೆಗೂ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಆಡಿದ್ದ ಎಲ್ಲಾ 82 ಬೌಟ್ಸ್‌ ಗೆದ್ದಿದ್ದಾರೆ. ಆದ್ರೆ, ಮಂಗಳವಾರ ಜಪಾನೀಸ್‌ ಕುಸ್ತಿಪಟುವಿನ ದಾಖಲೆಯ ಪುಟವನ್ನ ತಿದ್ದಿದ ವಿನೇಶ್​​ ಫೋಗಾಟ್​​​, ಕೊನೆ ಸೆಕೆಂಡ್​​​ಗಳಲ್ಲಿ 3-2 ಅಂತರದ ಗೆಲುವಿನೊಂದಿಗೆ ಜಪಾನ್ ಕುಸ್ತಿಪಟುವಿಗೆ ನೀರು ಕುಡಿಸಿದ್ರು.

[caption id="attachment_79255" align="alignnone" width="800"]ವಿನೇರ್ಶ್ ಫೋಗಾಟ್​ ಮತ್ತು ಯೂಯ್‌ ಸುಸಾಕಿ ವಿನೇರ್ಶ್ ಫೋಗಾಟ್​ ಮತ್ತು ಯೂಯ್‌ ಸುಸಾಕಿ[/caption]

ಇದನ್ನೂ ಓದಿ: ಸಲ್ಮಾನ್​ ಖಾನ್​ ಮನೆಗೆ ನುಗ್ಗಿದ್ದ ಕಳ್ಳ; ಸೈಲೆಂಟ್​ ಆಗಿ ಖದೀಮನ ಹಿಡಿದ ಸಲ್ಲು ಭಾಯ್​ ಏನ್ ಮಾಡಿದ್ರು?

ಫೈನಲ್‌ಗೆ ಲಗ್ಗೆ ಹಾಕಿದ ಪರಾಕ್ರಮಿ

ಕ್ವಾರ್ಟರ್​ ಫೈನಲ್​ನಲ್ಲಿ ಉಕ್ರೇನ್​ ಒಕ್ಸಾನಾ ಲಿವಾಚ್​ ಎದುರಿಸಿದ ವಿನೇಶ್​ ಫೋಗಾಟ್​ ಪರಾಕ್ರಮ ಮೆರೆದ್ರು. ಇದಾದ ಕೇವಲ 45 ನಿಮಿಷಗಳ ನಂತ್ರ ನಡೆದ ಪಂದ್ಯದಕ್ಕು ಲಿವಾಚ್​ರನ್ನ 7-5 ಅಂಕಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ರು. ಕ್ವಾರ್ಟರ್‌ ಫೈನಲ್‌ ಗೆದ್ದ ವಿಶ್ವಾಸದಲ್ಲಿದ್ದ ಫೋಗಾಟ್​​, ಸೆಮಿಫೈನಲ್‌ನಲ್ಲಿ ಕಣಕ್ಕೆ ಇಳಿದ್ರು. ಎದುರಾಳಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್‌ ವಿರುದ್ಧ ಅಧಿಕಾರಯುತ ಪ್ರದರ್ಶನ ತೋರಿ 5-0 ಅಂತರದಲ್ಲಿ ಗೆದ್ದು ಫೈನಲ್‌ಗೆ ಲಗ್ಗೆ ಹಾಕಿದ್ರು.

ಇದನ್ನೂ ಓದಿ: ಶ್ರೀಗೌರಿ ಸೀರಿಯಲ್ ಈಗ ಫುಲ್​ ಇಂಟ್ರಸ್ಟಿಂಗ್​​.. ಗೌರಿ ಅರ್ಚನಾಗೆ ಬುದ್ಧಿ ಕಲಿಸ್ತಾಳಾ ಇಲ್ವಾ?

[caption id="attachment_79256" align="alignnone" width="800"]ಸಾರಾ ಹಿಲ್ಡೆಬ್ರಾಂಡ್ ಸಾರಾ ಹಿಲ್ಡೆಬ್ರಾಂಡ್[/caption]

ಆಲ್​ ದಿ ಬೆಸ್ಟ್​​ ಫೋಗಾಟ್

ಒಲಿಂಪಿಕ್ಸ್​ನಲ್ಲಿ ಮೊದಲ ಬಾರಿಗೆ ಭಾರತದ ವನಿತೆ ಫೈನಲ್​​ಗೆ ಲಗ್ಗೆ ಇಟ್ಟಿದ್ದಾರೆ. ಒಂದೇ ದಿನ ಮೂರು ಪಂದ್ಯಗಳ ದಂಗಲ್​​​ ಗೆದ್ದ ವಿನೇಶ್​​ ಫೋಗಾಟ್​​, ಪ್ರೀಸ್ಟೈಲ್ ಫೈನಲ್‌ನಲ್ಲಿ ಅಮೆರಿಕಾದ ಸಾರಾ ಹಿಲ್ಡೆಬ್ರಾಂಡ್​ರನ್ನ ಎದುರಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment