Advertisment

Good News: ಅನರ್ಹರಾದ ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ಸಿಗುತ್ತಾ? ಮನವಿ ಒಪ್ಪಿಕೊಂಡ ಕೋರ್ಟ್!

author-image
Gopal Kulkarni
Updated On
Good News: ಅನರ್ಹರಾದ ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ಸಿಗುತ್ತಾ? ಮನವಿ ಒಪ್ಪಿಕೊಂಡ ಕೋರ್ಟ್!
Advertisment
  • ಒಲಿಂಪಿಕ್ಸ್​ನಲ್ಲಿ ಗೇಮ್ ಸ್ಟ್ರಾಟಜಿಯೇ ಪೋಗಟ್​​ಗೆ ಮುಳುವಾಯ್ತಾ?
  • ಪೋಗಟ್​ ಅನರ್ಹತೆಗೆ ಕಾರಣವಾದ ಆ ‘100 ಗ್ರಾಂ’ ರಹಸ್ಯವೇನು?
  • ಒಲಿಂಪಿಕ್ಸ್​ನಲ್ಲಿ ತಮಗೆ ಬೆಳ್ಳಿ ಪದಕ ನೀಡುವಂತೆ ಫೋಗಟ್‌ ಮೇಲ್ಮನವಿ

ಪ್ಯಾರಿಸ್: ವಿನೇಶ್ ಪೋಗಟ್ ಒಲಿಂಪಿಕ್ಸ್​ ಅಂಗಳದಿಂದ ತೂಕದ ವಿಚಾರವಾಗಿ ಅನರ್ಹಗೊಂಡಾಗಿನಿಂದಲೂ ದೇಶದಲ್ಲಿ ಆ ವೀರ ಕುಸ್ತಿಪಟುವಿನ ಬಗ್ಗೆಯೇ ದೊಡ್ಡ ಚರ್ಚೆಯಾಗುತ್ತಿದೆ. ತರಹೇವಾರಿ ವಾದಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ನೋಡಲು ಸಿಗುತ್ತಿವೆ. ಆದ್ರೆ ಒಲಿಂಪಿಕ್ಸ್​ ಆಟ ಅಂದ್ರೆ ಗದ್ದೆಯಲ್ಲಿ ಗಲ್ಲಿ ಹುಡುಗರು ಆಡುವ ಕ್ರಿಕೆಟ್ ಪಂದ್ಯಾವಳಿಯಲ್ಲಿ, ಅದಕ್ಕೆ ಅದರದೇ ಆದ ನೀತಿ ನಿಯಮಗಳಿವೆ. ಅದರಂತೆಯೇ ಒಲಿಂಪಿಕ್ಸ್ ಕ್ರೀಡಾಕೂಟಗಳು ನಡೆಯುವುದು. ಸದ್ಯ ಪೋಗಟ್​ ಸ್ಪರ್ಧೆಯಿಂದ ಅನರ್ಹಗೊಳ್ಳಲು ಪ್ರಮುಖ ಕಾರಣ ಅವರ ಗೇಮ್​ ಸ್ಟ್ರಾಟರ್ಜಿಯೇ ಎಂಬ ವಾದವೊಂದು ಸುಳಿದಾಡುತ್ತಿದೆ.

Advertisment

ಕುಸ್ತಿಪಟು ಪೋಗಟ್​ಗೆ ನಿಜಕ್ಕೂ ಮುಳುವಾಗಿದ್ದು ಏನು..?

ವೈದ್ಯರು, ಪರಿಣಿತರು ಹೇಳುವ ಪ್ರಕಾರ, ಪೋಗಟ್​ಗೆ ತಾವು ಹಾಕಿಕೊಂಡಿದ್ದ ಗೇಮ್ ಸ್ಟಾಟರ್ಜಿಯೇ ಮುಳುವಾಯ್ತು ಎನ್ನಲಾಗುತ್ತಿದೆ. ಅನರ್ಹತೆಗೆ ಕಾರಣವಾದ 100 ಗ್ರಾಂ ರಹಸ್ಯವೇನು ಅಂತ ನೋಡಿದ್ರೆ ವೀಫ್ ಮೆಡಿಕಲ್ ಆಫೀಸರ್ ಡಾ ದಿನ್ಶಾ ಪರ್ದಿವಾಲ್ ಹೇಳುವ ಪ್ರಕಾರ ವಿನೇರ್ಶ ಪೋಗಟ್ ಹಾಕಿಕೊಂಡಿದ್ದ ಗೇಮ್ ಸ್ಟಾಟರ್ಜಿಯೇ ಕಾರಣ ಎನ್ನಲಾಗಿದೆ.

ಕುಸ್ತಿ, ಬಾಕ್ಸಿಂಗ್ ಕ್ರೀಡೆಯಲ್ಲಿ ದೇಹ ತೂಕದ ಮೇಲೆ ಸ್ಫರ್ಧೆ ನಡೆಯುತ್ತದೆ. ಕ್ರೀಡಾಪಟುಗಳು ನಿಗದಿತ ತೂಕಕ್ಕಿಂತಲೂ ಕಡಿಮೆ ತೂಕ ಇರಬೇಕು. ವಿನೇಶ್ ಪೋಗಟ್​ರದ್ದು ಸಾಮಾನ್ಯವಾಗಿ 53 ಕೆಜಿ ತೂಕ ಇರ್ತಿತ್ತು. 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವಾಗ ಪೋಗಟ್​ ತೂಕ ಇಳಿಸಲಾಗುತ್ತಿತ್ತು. ತೂಕ ತಪಾಸಣೆಗೆ ಹೋಗುವ ಮುನ್ನ 50 ಕೆಜಿ ತೂಕವನ್ನು ಕಾಯ್ದುಕೊಳ್ಳಬೇಕಿತ್ತು. ನೀರು ಕುಡಿಯದೆ ಆಹಾರ ಸೇವಿಸಿದೇ ಪೋಗಟ್​ ಪ್ರತಿ ಬಾರಿ ತಮ್ಮ ತೂಕವನ್ನು ಇಳಿಸುತ್ತಿದ್ದರು. ತಪಾಸಣೆ ಬಳಿಕ, ಕುಸ್ತಿಗೂ ಮುನ್ನ ಆಹಾರ ಸೇವನೆ ಮಾಡುತ್ತಿದ್ದರು. ತೂಕ ತಪಾಸಣೆ ಬಳಿಕ ನ್ಯೂಟ್ರೀಷಿಯನ್ ಆಹಾರ ಹಾಗೂ ನೀರು ಸೇವನೆಯಿಂದ ತೂಕ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುತ್ತಿತ್ತು.

ಆದ್ರೆ ಸ್ಪರ್ಧೆ ವೇಳೆ ತೂಕದ ಅಡ್ವಾಂಟೇಜ್ ಸಿಗ್ತಿತ್ತು. ಅದು ಗೇಮ್ ಸ್ಟ್ರಾಟರ್ಜಿ, ಮೊದಲ ದಿನ ಇದೇ ಸ್ಟ್ರಾಟರ್ಜಿಯ ಮೂಲಕ ಸಕ್ಸಸ್ ಕಂಡಿದ್ದರು ಪೋಗಟ್​. ಮಾರನೇ ದಿನ ಬೆಳಗ್ಗೆ ಮತ್ತೆ ತೂಕ ತಪಾಸಣೆಗೆ ಒಳಗಾಗಬೇಕಾಗಿತ್ತು. ಹೆಚ್ಚಾದ ತೂಕವನ್ನು ಮತ್ತೆ 50 ಕೆಜಿ ಇಳಿಸಬೇಕಾಗಿತ್ತು. ಪೋಗಟ್ ಅದಕ್ಕೋಸ್ಕರವೇ ಊಟ, ನಿದ್ದೆ ಬಿಟ್ಟು ಇಡೀ ರಾತ್ರಿ ಶ್ರಮಿಸಿದ್ದರು. ಆದ್ರೆ ದುರಾದೃಷ್ಟಕ್ಕೆ ತೂಕದ ತಪಾಸಣೆ ವೇಳೆ 100ಗ್ರಾಂ ಹೆಚ್ಚಿಗೆ ತೂಗಿದ್ದರು ಪೋಗಟ್, ಕೇವಲ 100 ಗ್ರಾಂ ಹೆಚ್ಚಿನ ತೂಕ ಪೋಗಟ್​ರ ಹಾಗೂ ಕೋಟ್ಯಾಂತರ ಭಾರತೀಯರ ಚಿನ್ನದ ಕನಸಿಗೆ ಕೊಳ್ಳಿಯಿಟ್ಟಿತ್ತು. ಪ್ಯಾರಿಸ್ ಒಲಿಂಪಿಕ್ಸ್ ಅಖಾಡ ಹೊಸ ಇತಿಹಾಸ ಬರೆಯಬೇಕಾಗಿದ್ದ ಒಂದು ಸುವರ್ಣಗಳಿಗೆಯಿಂದ ವಂಚಿತವಾಯಿತು. ಹೀಗೆ ಪೋಗಟ್ ತಾವು ಹಾಕಿಕೊಂಡಿದ್ದ ಗೇಮ್ ಸ್ಟಾರ್ಜಿಯೇ ಅವರಿಗೆ ಮುಳುವಾಯ್ತು ಎಂದು ಹೇಳುತ್ತಾರೆ ಮೆಡಿಕಲ್ ಚೀಫ್ ಆಫಿಸರ್ ದಿನ್ಯಾ ಪರ್ದಿವಾಲ್.

Advertisment

ಇದನ್ನೂ ಓದಿ:ವಿನೇಶ್ ಫೋಗಟ್​​ ನಿವೃತ್ತಿ ಘೋಷಣೆಗೆ ಶಶಿ ತರೂರು ಆಕ್ರೋಶ; ಹೊಣೆ ಮಾಡಿದ್ದು ಯಾರನ್ನ..?

publive-image

ಇದನ್ನೂ ಓದಿ: ವಿನೇಶ್ ಫೋಗಟ್ ನಮ್ಮ ಹೆಮ್ಮೆ; ಹರಿಯಾಣ ಸರ್ಕಾರದಿಂದ ದೊಡ್ಡ ಘೋಷಣೆ

ಸೋತು ಗೆದ್ದವಳಿಗೆ ಸಿಗಲಿದೆಯಾ ಬೆಳ್ಳಿ ಪದಕ?
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವ ಹಾಗೆ, ಚಿನ್ನ ಬಿಟ್ಟರೆ ಬೆಳ್ಳಿ ಕೊರಳಿಗೆ ಹಾಕಿಕೊಂಡೇ ಭಾರತಕ್ಕೆ ವಿನೇಶ್ ಪೋಗಟ್​ ಬರಲಿದ್ದಾರೆ ಅನ್ನೋ ಮಾತುಗಳಿದ್ದವು. ಆದ್ರೆ ಅದು ಹುಸಿಯಾಯ್ತು. ತೂಕದ ವಿಚಾರದಲ್ಲಿ ಪೋಗಟ್ ಅನರ್ಹರೆಂದು ಆಚೆ ಬಂದರು, ಕೋಟ್ಯಾನುಕೋಟಿ ಭಾರತೀಯರ ಹೃದಯಲ್ಲಿ ಅವರು ಸೋತು ಗೆದ್ದವರು ಎಂದೇ ಗುರುತಿಸಲಾಗುತ್ತಿದೆ. ಪೋಗಟ್ ತಮ್ಮ ಸಾಧನೆ ವ್ಯರ್ಥವಾಗಬಾರದು ಎಂದು ಅನರ್ಹತೆಯ ಬೆನ್ನಲ್ಲೆ ಹೋರಾಟದ ಹಾದಿ ಹಿಡಿದಿದ್ದಾರೆ. ಒಲಿಂಪಿಕ್ಸ್​ನಲ್ಲಿ ತಮಗೆ ಬೆಳ್ಳಿ ಪದಕ ನೀಡುವಂತೆ ಕೋರ್ಟ್​ ಆಫ್​ ಅರ್ಬಿಟ್ರೇಷನ್​ ಫಾರ್ ಸ್ಫೋರ್ಟ್ಸ್​​ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಈ ಮೇಲ್ಮನವಿಗೆ ಸಂಬಂಧಿಸಿದ ಆದೇಶ ಹೊರಬೀಳಲಿದೆ. ಒಲಿಂಪಿಕ್ಸ್​ನಲ್ಲಿ ಕೊನೆ ಕ್ಷಣದಲ್ಲಿ ನನ್ನನ್ನು ಅನರ್ಹಗೊಳಿಸಲಾಗಿದೆ. ಕೂಡಲೇ ಈ ವಿಚಾರದಲ್ಲಿ ಸಿಎಎಸ್ ಮಧ್ಯಸ್ಥಿಕೆವಹಿಸಬೇಕು. ಬೆಳ್ಳಿ ಪದಕವನ್ನು ಕೊಡಬೇಕು ಎಂದು ವಿನೇಶ್ ಪೋಗಟ್​ ಮೇಲ್ಮನವಿ ಸಲ್ಲಿಸಿದ್ದಾರೆ.

ವಿನೇಶ್ ಪೋಗಟ್‌ ಅವರ ಪ್ರತಿಭಟನೆಯನ್ನು ಕೋರ್ಟ್ ಆಫ್ ಅರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್ ಒಪ್ಪಿಕೊಂಡಿದೆ. ಇಂದು ಸಂಜೆ 5 ಗಂಟೆಯ ವೇಳೆಗೆ ಸಿಎಎಸ್‌ ತನ್ನ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment