Advertisment

‘ನಾನು ಸೋತಿದ್ದೇನೆ, ಆದರೆ..’ ನಿವೃತ್ತಿ ಘೋಷಿಸಿದ ವಿನೇಶ್ ಫೋಗಟ್ ಭಾವುಕ ಪೋಸ್ಟ್​ನಲ್ಲಿ ಏನಿದೆ..?

author-image
Ganesh
Updated On
‘ನಾನು ಸೋತಿದ್ದೇನೆ, ಆದರೆ..’ ನಿವೃತ್ತಿ ಘೋಷಿಸಿದ ವಿನೇಶ್ ಫೋಗಟ್ ಭಾವುಕ ಪೋಸ್ಟ್​ನಲ್ಲಿ ಏನಿದೆ..?
Advertisment
  • ಆಘಾತದ ನೋವಿನ ಬೆನ್ನಲ್ಲೇ ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್
  • ಇಡೀ ಭಾರತೀಯರಿಗೆ ಆಘಾತಕಾರಿ ಸುದ್ದಿ ನೀಡಿದ ಫೋಗಾಟ್
  • 50 ಕೆ.ಜಿಗಿಂತ ಹೆಚ್ಚಿನ ತೂಕ ಹೊಂದಿದ್ದರಿಂದ ಒಲಿಂಪಿಕ್ಸ್​ನಿಂದ ಅನರ್ಹಗೊಂಡಿದ್ದರು

ಆಘಾತದ ಬೆನ್ನಲ್ಲೇ ವಿನೇಶ್ ಫೋಗಟ್ ಕುಸ್ತಿಗೆ ವಿದಾಯ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಗಟ್ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.

Advertisment

ಏನ್ ಹೇಳಿದ್ದಾರೆ ಫೋಗಟ್​..?
ಅಮ್ಮಾ, ನನ್ನಿಂದ ಕುಸ್ತಿ ಗೆದ್ದಿದೆ! ನಾನು ಸೋತಿದ್ದೇನೆ. ಕ್ಷಮಿಸಿ.. ನಿಮ್ಮ ಕನಸು, ನನ್ನ ಧೈರ್ಯ ಎಲ್ಲವೂ ಭಗ್ನವಾಗಿದೆ. ಈಗ ನನಗೆ ಇದಕ್ಕಿಂತ ಹೆಚ್ಚಿನ ಶಕ್ತಿ ಇಲ್ಲ. 2021-2024 ಕುಸ್ತಿಗೆ ವಿದಾಯ. ನಿಮ್ಮೆಲ್ಲರಿಗೂ ನಾನು ಋಣಿಯಾಗಿರುತ್ತೇನೆ.

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಅತಿದೊಡ್ಡ ಭರವಸೆ ಮೂಡಿಸಿದ್ದ, ಬಂಗಾರದ ಪದಕದ ಆಸೆ ಮೂಡಿಸಿದ್ದ ಸ್ಪರ್ಧಿಗಳಲ್ಲಿ ಒಬ್ಬರು ವಿನೇಶ್ ಪೋಗಟ್ ಎಂಬ 29 ವರ್ಷದ ಹರಿಯಾಣದ ಹುಡುಗಿ. ಆರಂಭಿಕ ಹಂತದಲ್ಲಿ ವಿಶ್ವದ ಘಟಾಘಟಿ ಕುಸ್ತಿಪಟುಗಳನ್ನು ಮಕಾಡೆ ಮಲಗಿಸಿ ವೀರಾವೇಶದಿಂದ ಫೈನಲ್​ಗೆ ತಲುಪಿದ್ದರು ವಿನೇಶ್, 50ಕೆಜಿ ಕುಸ್ತಿ ಅಖಾಡದಲ್ಲಿ ಫೈನಲ್​ಗೆ ಹೋದ ಮೊದಲ ಮಹಿಳಾ ಕುಸ್ತಿಪಟು ಎಂಬ ಖ್ಯಾತಿ ಪಡೆದಿದ್ದ ವಿನೇಶ್​ಗೆ, ಕುಸ್ತಿಯಲ್ಲಿ ಪದಕ ತಂದ ಮೊದಲ ಮಹಿಳೆ ಅನ್ನೋ ಪಟ್ಟ ಸಿಗೋಕೆ ಒಂದೇ ಒಂದು ಹೆಜ್ಜೆ ಬಾಕಿಯಿತ್ತು. ಆದ್ರೆ ವಿನೇಶ್ ಅಖಾಡಕ್ಕೆ ಇಳಿಯುವ ಮುನ್ನ ಅವರ ದೇಹ ಬೇರೆಯದ್ದೇ ಆಟ ಆಡಿತ್ತು.

Advertisment

ಇದನ್ನೂ ಓದಿ:RCBಗೆ ಮತ್ತೆ ಕೊಹ್ಲಿ ನಾಯಕ..? 10 ಫ್ರಾಂಚೈಸಿಗಳಲ್ಲಿ 6 ತಂಡಗಳಿಗೆ ಹೊಸ ನಾಯಕರು..!

ಕುಸ್ತಿ ಕಣದಲ್ಲಿ ಎಲ್ಲಾ ಸ್ಪರ್ಧಾಳುಗಳು ಅಖಾಡಕ್ಕೆ ಇಳಿಯುವ ದಿನ ಮುಂಜಾನೆ ತಮ್ಮ ತೂಕ ಎಷ್ಟಿದೆ ಅನ್ನೋದನ್ನ ಸ್ಪಷ್ಟಪಡಿಸಬೇಕು. ಹಿಂದಿನ ದಿನ ರಾತ್ರಿ ವೇಟ್ ಚೆಕ್ ಮಾಡಿದಾಗ ವಿನೇಶ್ ಅವರ ದೇಹದ ತೂಕ 52 ಕೆಜಿ ಇತ್ತು. ಅದನ್ನು 50ಕ್ಕೆ ಇಳಿಸಲು ನೂರಾರು ಸರ್ಕಸ್ ಮಾಡಿದ್ದಾರೆ ರಾತ್ರಿಯಿಡೀ ಪೋಗಟ್​. ನಿರಂತರವಾಗಿ ಸ್ಕಿಪ್ಪಿಂಗ್, ಸೈಕ್ಲಿಂಗ್ ಮಾಡುವ ಮೂಲಕ ತೂಕ ಇಳಿಸಲು ನೋಡಿದ್ದಾರೆ. ಕೊನೆಗೆ ಉದ್ದನೆಯ ಕೂದಲಿಗೆ ಕತ್ತರಿ ಹಾಕಿ ಚಿಕ್ಕದಾಗಿ ಮಾಡಿಕೊಂಡಿದ್ದಾರೆ. ಅದಾಗ್ಯೂ ಒಂದಿಷ್ಟು ಗ್ರಾಂನಷ್ಟು ತೂಕ ಹೆಚ್ಚೇ ಬಂದಿದ್ದರಿಂದ ಕೊನೆಗೆ ಸೀರಂಜ್​ ಮೂಲಕ ದೇಹದಲ್ಲಿನ ರಕ್ತ ತೆಗೆದು ಹೊರಗೆ ಕೂಡ ಚೆಲ್ಲಿದ್ದಾರೆ. ಇದ್ಯಾವ ಸಾಹಸವೂ ಕೂಡ ಪೋಗಟ್​ ಅವರ ಕೈ ಹಿಡಿಯಲಿಲ್ಲ. ಕೊನೆಗೆ ಬೆಳಗ್ಗೆ ತೂಕವನ್ನು ನೋಡಿದಾಗ 50 ಕೆಜಿಗಿಂತ 150 ಗ್ರಾಂ ಹೆಚ್ಚಿಗೆ ಬಂದಿದೆ. ಒಲಿಂಪಿಕ್ಸ್ ನಿಯಮದನ್ವಯ ವಿನೀಶ್ ಪೋಗಟ್​ ಸ್ಪರ್ಧೆಯಿಂದ ಅನರ್ಹರಾಗಿದ್ದರು.

ಇದನ್ನೂ ಓದಿ:ವಿನೇಶ್ ಫೋಗಟ್ ಅನರ್ಹ; ಬ್ರಿಜ್ ಭೂಷಣ್​ರ ಇಬ್ಬರು ಮಕ್ಕಳಿಂದ ಅಚ್ಚರಿಯ ಪ್ರತಿಕ್ರಿಯೆ..

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment