Advertisment

ವಿನೇಶ್ ಪೋಗಟ್‌ ಬೆಳ್ಳಿ ಪದಕದ ಕನಸು ಜೀವಂತ.. ಹೊಸ ಭರವಸೆ; ಅಂತಿಮ ತೀರ್ಪು ಯಾವಾಗ?

author-image
Gopal Kulkarni
Updated On
ವಿನೇಶ್ ಪೋಗಟ್‌ ಬೆಳ್ಳಿ ಪದಕದ ಕನಸು ಜೀವಂತ.. ಹೊಸ ಭರವಸೆ; ಅಂತಿಮ ತೀರ್ಪು ಯಾವಾಗ?
Advertisment
  • ಸೋತು ಗೆದ್ದವಳು ಕುಸ್ತಿ ಅಖಾಡ ತೊರೆದಳು, ಪೋಗಟ್ ಹೇಳಿದ್ದೇನು?
  • ಜಂಟಿ ಬೆಳ್ಳಿ ಪದಕ ನೀಡುವಂತೆ ಕ್ರೀಡಾ ನ್ಯಾಯ ಮಂಡಳಿಗೆ ಮನವಿ
  • ಗೌರವ ತಂದ ಹರಿಯಾಣದ ಮನೆಮಗಳಿಗೆ ಸರ್ಕಾರ ನೀಡಿದ ಗೌರವವೇನು?

ಪ್ಯಾರಿಸ್​ ಒಲಿಂಪಿಕ್ಸ್ ಫೈನಲ್​​​ನಲ್ಲಿ ಅನರ್ಹಗೊಂಡ ಬೆನ್ನಲ್ಲೇ ವಿನೇಶ್ ಪೋಗಟ್ ನಿವೃತ್ತಿ ಘೋಷಿಸಿದ್ದಾರೆ. ನಿರಾಸೆಯ ಕಡಲಲ್ಲಿ ಮುಳುಗಿರುವ ವಿನೇಶ್ ಫೋಗಟ್ ಭಾರವಾದ ಮನಸ್ಸಿನಿಂದ ಕುಸ್ತಿಯಾಟಕ್ಕೆ ವಿದಾಯ ಹೇಳಿದ್ದಾರೆ. ತಮ್ಮ ಅನರ್ಹತೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ಫೋಗಟ್ ಬೆಳ್ಳಿಪದಕ ನೀಡುವಂತೆ ಬೇಡಿಕೆ ಇರಿಸಿದ್ದಾರೆ. ಈ ಬೆಳವಣಿಗೆಗಳ ಮಧ್ಯೆ ಹರಿಯಾಣ ಸರ್ಕಾರ ಫೋಗಟ್​​ಗೆ 4 ಕೋಟಿ ಬಹುಮಾನ ಘೋಷಿಸಿದೆ.

Advertisment

publive-image

ಇದು ಜಗಜಟ್ಟಿಯ ಜಂಘಾಬಲ ಕುಗ್ಗಿಸಿದ ಅನಿರೀಕ್ಷಿತ ಆಘಾತ. ಕನಸಿನಲ್ಲೂ ಎಣಿಸಿರದ ನಿರಾಸೆ.. ಇನ್ನೊಂದೇ ಹೆಜ್ಜೆ ದಾಟಿದ್ದರೆ ಬಂಗಾರದ ಹುಡುಗಿ ಎಂಬ ಗರಿಮೆ. ಕೇವಲ ನೂರೇ ನೂರು ಗ್ರಾಂ ತೂಕ ಹೆಚ್ಚಿದ್ದಕ್ಕೆ ಹೃದಯ ಭಾರವಾಗಿಬಿಟ್ಟಿದೆ.. ಕನಸಿನ ಕುಸ್ತಿ ಇನ್ನು ನೆನಪಾಗಿ ಉಳಿಯಲಿದೆ.

ಇದನ್ನೂ ಓದಿ:Congratulations: ಸತತ 2ನೇ ಬಾರಿ ಕಂಚಿನ ಪದಕಕ್ಕೆ ಮುತ್ತಿಟ್ಟ ಹಾಕಿ ತಂಡ; ಐತಿಹಾಸಿಕ ಜಯ

ಅನರ್ಹತೆ ಬೆನ್ನಲ್ಲೇ ಕುಸ್ತಿಗೆ ವಿನೇಶ್ ಫೋಗಟ್ ವಿದಾಯ!

ವಿನೇಶ್ ಫೋಗಟ್ ಅನರ್ಹತೆ ಬೆನ್ನಲ್ಲೇ ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆಲ್ಲುವ 141 ಕೋಟಿ ಭಾರತೀಯರ ಕನಸು ಭಗ್ನಗೊಂಡಿದೆ. 100 ಗ್ರಾಂ ತೂಕ ಹೆಚ್ಚಳದಿಂದ ಅನರ್ಹಗೊಂಡಿರುವ ವಿನೇಶ್ ಫೋಗಟ್​​​ ಅವರ ಒಲಿಂಪಿಕ್ಸ್ ಪದಕದ ಕನಸು ನನಸಾಗಿಯೇ ಉಳಿದಿದೆ. ಅನರ್ಹಗೊಂಡ ಒಂದೇ ದಿನಲ್ಲಿ ಕುಸ್ತಿಗೆ ಫೋಗಟ್ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿ ಘೋಷಣೆ ಬಗ್ಗೆ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ವಿನೇಶ್ ಪೋಗಟ್, ಕುಸ್ತಿ ನನ್ನ ವಿರುದ್ಧ ಗೆದ್ದಿದೆ, ನಾನು ಸೋತಿದ್ದೇನೆ, ನನ್ನನ್ನು ಕ್ಷಮಿಸಿ ಅಂತ ಪೋಸ್ಟ್ ಮಾಡಿದ್ದಾರೆ. 100 ಗ್ರಾಂ ತೂಕ ಹೆಚ್ಚಳದಿಂದ ಒಲಿಂಪಿಕ್ಸ್​ನಿಂದ ಅನರ್ಹಗೊಂಡ ವಿನೇಶ್ ಫೋಗಟ್​​​ ಕುಸ್ತಿಗೆ ವಿದಾಯ ಹೇಳಿದ್ದಾರೆ. ಭಾರವಾದ ಹೃದಯದಿಂದ ಪೋಸ್ಟ್​ನಲ್ಲಿ ಕ್ಷಮೆ ಕೇಳಿದ್ದಾರೆ.

Advertisment

publive-image

ಜಂಟಿ ಬೆಳ್ಳಿ ಪದಕ ನೀಡುವಂತೆ ಪೋಗಟ್ ಬೇಡಿಕೆ

ನಿವೃತ್ತಿ ಘೋಷಣೆ ಬೆನ್ನಲ್ಲೇ ವಿನೇಶ್ ಪೋಗಟ್ ತಮ್ಮ ಅನರ್ಹತೆ ಪ್ರಶ್ನಿಸಿ ಕ್ರೀಡಾ ನ್ಯಾಯ ಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ತಮಗೆ ಜಂಟಿ ಬೆಳ್ಳಿ ಪದಕ ನೀಡಬೇಕು ಅಂತನೂ ಬೇಡಿಕೆ ಇಟ್ಟಿದ್ದಾರೆ. ವಿನೇಶ್ ಫೋಗಟ್ ಮೇಲ್ಮನವಿ ಸಲ್ಲಿಸಿರುವುದನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ದೃಢಪಡಿಸಿದೆ. ಕೋರ್ಟ್​ ಆಫ್ ಅರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್‌ನಿಂದ ಕುಸ್ತಿಪಟು ವಿನೇಶ್​ ಫೋಗಟ್​ರ ಪ್ರತಿಭಟನೆ ಸ್ವೀಕಾರವಾಗಿದೆ. CAS- ಕ್ರೀಡಾ ವಿವಾದ ಬಗೆಹರಿಸುವ ಸ್ವತಂತ್ರ ಸಂಸ್ಥೆಯಾಗಿದ್ದು ಇಂದು ರಾತ್ರಿ 9.30ಕ್ಕೆ ಫೋಗಟ್ ಅರ್ಜಿ ವಿಚಾರಣೆ ನಡೆಯಬೇಕಿತ್ತು. ಆದರೆ ವಕೀಲರ ನೇಮಿಸಲು ಭಾರತ ಕಾಲಾವಕಾಶ ಕೇಳಿದೆ. ಹೀಗಾಗಿ ನಾಳೆ (ಶುಕ್ರವಾರ) ಮಧ್ಯಾಹ್ನ 1.30ಕ್ಕೆ ಫೋಗಟ್​​ ಅರ್ಜಿ ವಿಚಾರಣೆ ನಡೆದು ಅಂತಿಮ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದೆ.

publive-image

ಫೋಗಟ್​​ಗೆ ಹರಿಯಾಣ ಸರ್ಕಾರದಿಂದ 4 ಕೋಟಿ ಬಹುಮಾನ
ವಿನೇಶ್ ಫೋಗಟ್ ಮೇಲ್ಮನವಿ ಸಲ್ಲಿಸಿದ್ದು ಕೋರ್ಟ್ ಆಫ್ ಅರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್ ತೀರ್ಮಾನವನ್ನು ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಪಾಲಿಸಬೇಕು ಅಂತ ಹರಿಯಾಣ ಸರ್ಕಾರ ಮನವಿ ಮಾಡಿದೆ. ವಿನೇಶ್ ಫೋಗಟ್​​​ರನ್ನ ಬೆಳ್ಳಿ ಪದಕ ವಿಜೇತೆ ಅಂತ ಪರಿಗಣಿಸಲು ಹರಿಯಾಣ ಸರ್ಕಾರ ನಿರ್ಧರಿಸಿದೆ. ವಿನೇಶ್ ಫೋಗಟ್​​​​​​​ಗೆ 4 ಕೋಟಿ ರೂ ಬಹುಮಾನ ಘೋಷಿಸಿದೆ.

ಇದನ್ನೂ ಓದಿ: Good News: ಅನರ್ಹರಾದ ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ಸಿಗುತ್ತಾ? ಮನವಿ ಒಪ್ಪಿಕೊಂಡ ಕೋರ್ಟ್!

Advertisment

ಬೆಳಗ್ಗೆ ಸರಿ ಇದ್ದ ತೂಕ ರಾತ್ರಿ ವೇಳೆ ಹೆಚ್ಚಾಗಿದ್ದೇಗೆ? 

ಬೆಳಗ್ಗೆ 49.9 ಕೆಜಿ ಇದ್ದ ವಿನೇಶ್ ಫೋಗಟ್ ದೇಹದ ತೂಕ ಸಂಜೆ ವೇಳೆ 2.7 ಕೆ.ಜಿ ಹೆಚ್ಚಾಗಿತ್ತು.. ವಿನೇಶ್ ಫೋಗಟ್ ತೂಕ ಹೆಚ್ಚಳದ ಕಾರಣಗಳೇನು ಅನ್ನೋದನ್ನು ನ್ಯೂಟ್ರಿಷಿಯನ್ ಬಹಿರಂಗಗೊಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment