newsfirstkannada.com

ರಕ್ತ ಹೀರಿದ್ರು.. ಹೇರ್ ​ಕಟ್ ಮಾಡಿದ್ರು; ತೂಕ ಇಳಿಸಲು ವಿನೇಶ್ ಫೋಗಟ್‌ ಮಾಡಿದ ಸಾಹಸ ಭಯಾನಕ!

Share :

Published August 7, 2024 at 8:22pm

Update August 7, 2024 at 8:23pm

    ತೂಕ ಇಳಿಸಲು ಕುಸ್ತಿ ಪಟು ವಿನೇಶ್ ಪೋಗಟ್ ಮಾಡಿದ ಸಾಹಸಗಳೇನು?

    ಊಟ ಬಿಟ್ಟು, ನಿದ್ದೆ ಬಿಟ್ಟು, ನಿರಂತರ ವ್ಯಾಯಮ ಮಾಡಿದ್ರು ಇಳಿಲಿಲ್ಲ ತೂಕ

    ಸೆಮಿಫೈನಲ್​ ರಾತ್ರಿಯಿಂದ ಶುರುವಾಯ್ತು ಕುಸ್ತುಪಟುವಿಗೆ ತೂಕ ಏರಿಕೆ ಕಾಟ

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಅತಿದೊಡ್ಡ ಭರವಸೆ ಮೂಡಿಸಿದ್ದ, ಬಂಗಾರದ ಪದಕದ ಆಸೆ ಮೂಡಿಸಿದ್ದ ಸ್ಪರ್ಧಿಗಳಲ್ಲಿ ಒಬ್ಬರು ವಿನೇಶ್ ಪೋಗಟ್ ಎಂಬ 29 ವರ್ಷದ ಹರಿಯಾಣದ ಹುಡುಗಿ. ಆರಂಭಿಕ ಹಂತದಲ್ಲಿ ವಿಶ್ವದ ಘಟಾಘಟಿ ಕುಸ್ತಿಪಟುಗಳನ್ನು ಮಕಾಡೆ ಮಲಗಿಸಿ ವೀರಾವೇಶದಿಂದ ಫೈನಲ್​ಗೆ ತಲುಪಿದ್ದರು ವಿನೇಶ್, 50ಕೆಜಿ ಕುಸ್ತಿ ಅಖಾಡದಲ್ಲಿ ಫೈನಲ್​ಗೆ ಹೋದ ಮೊದಲ ಮಹಿಳಾ ಕುಸ್ತಿಪಟು ಎಂಬ ಖ್ಯಾತಿ ಪಡೆದಿದ್ದ ವಿನೇಶ್​ಗೆ, ಕುಸ್ತಿಯಲ್ಲಿ ಪದಕ ತಂದ ಮೊದಲ ಮಹಿಳೆ ಅನ್ನೋ ಪಟ್ಟ ಸಿಗೋಕೆ ಒಂದೇ ಒಂದು ಹೆಜ್ಜೆ ಬಾಕಿಯಿತ್ತು. ಆದ್ರೆ ವಿನೇಶ್ ಅಖಾಡಕ್ಕೆ ಇಳಿಯುವ ಮುನ್ನ ಅವರ ದೇಹ ಬೇರೆಯದ್ದೇ ಆಟ ಆಡಿತ್ತು.

ಇದನ್ನೂ ಓದಿ: ‘ಅನರ್ಹ ಮಾಡಿದ್ದು ಫೋಗಟ್​ ವಿರುದ್ಧ ನಡೆದ ದೊಡ್ಡ ಷಡ್ಯಂತ್ರ’- ವಿಜೇಂದ್ರ ಸಿಂಗ್ ಶಾಕಿಂಗ್ ರಿಯಾಕ್ಷನ್!

ವಿನೇಶ್ ಮಾಡದ ಸಾಹಸಗಳು ಅನೇಕ: ಆದರೂ ಇಳಿಯಲಿಲ್ಲ ತೂಕ

ಕುಸ್ತಿ ಕಣದಲ್ಲಿ ಎಲ್ಲಾ ಸ್ಪರ್ಧಾಳುಗಳು ಅಖಾಡಕ್ಕೆ ಇಳಿಯುವ ದಿನ ಮುಂಜಾನೆ ತಮ್ಮ ತೂಕ ಎಷ್ಟಿದೆ ಅನ್ನೋದನ್ನ ಸ್ಪಷ್ಟಪಡಿಸಬೇಕು. ಹಿಂದಿನ ದಿನ ರಾತ್ರಿ ವೇಟ್ ಚೆಕ್ ಮಾಡಿದಾಗ ವಿನೇಶ್ ಅವರ ದೇಹದ ತೂಕ 52 ಕೆಜಿ ಇತ್ತು. ಅದನ್ನು 50ಕ್ಕೆ ಇಳಿಸಲು ನೂರಾರು ಸರ್ಕಸ್ ಮಾಡಿದ್ದಾರೆ ರಾತ್ರಿಯಿಡೀ ಪೋಗಟ್​. ನಿರಂತರವಾಗಿ ಸ್ಕಿಪ್ಪಿಂಗ್, ಸೈಕ್ಲಿಂಗ್ ಮಾಡುವ ಮೂಲಕ ತೂಕ ಇಳಿಸಲು ನೋಡಿದ್ದಾರೆ. ಕೊನೆಗೆ ಉದ್ದನೆಯ ಕೂದಲಿಗೆ ಕತ್ತರಿ ಹಾಕಿ ಚಿಕ್ಕದಾಗಿ ಮಾಡಿಕೊಂಡಿದ್ದಾರೆ. ಅದಾಗ್ಯೂ ಒಂದಿಷ್ಟು ಗ್ರಾಂನಷ್ಟು ತೂಕ ಹೆಚ್ಚೇ ಬಂದಿದ್ದರಿಂದ ಕೊನೆಗೆ ಸೀರಂಜ್​ ಮೂಲಕ ದೇಹದಲ್ಲಿನ ರಕ್ತ ತೆಗೆದು ಹೊರಗೆ ಕೂಡ ಚೆಲ್ಲಿದ್ದಾರೆ. ಇದ್ಯಾವ ಸಾಹಸವೂ ಕೂಡ ಪೋಗಟ್​ ಅವರ ಕೈ ಹಿಡಿಯಲಿಲ್ಲ. ಕೊನೆಗೆ ಬೆಳಗ್ಗೆ ತೂಕವನ್ನು ನೋಡಿದಾಗ 50 ಕೆಜಿಗಿಂತ 150 ಗ್ರಾಂ ಹೆಚ್ಚಿಗೆ ಬಂದಿದೆ. ಒಲಿಂಪಿಕ್ಸ್ ನಿಯಮದನ್ವಯ ವಿನೀಶ್ ಪೋಗಟ್​ ಸ್ಪರ್ಧೆಯಿಂದ ಅನರ್ಹರಾಗಿದ್ದಾರೆ.

ಇದನ್ನೂ ಓದಿ: ‘ಶೇಮ್​ ಆನ್​ ಯೂ ರೋಹಿತ್​​’- ಟೀಮ್​ ಇಂಡಿಯಾ ಕ್ಯಾಪ್ಟನ್​​ ವಿರುದ್ಧ ಬಹಿರಂಗ ಆಕ್ರೋಶ

ಸೆಮಿಫೈನಲ್‌ಗೆ ಹಿಂದಿನ ದಿನ ರಾತ್ರಿ ವಿನೇಶ್​ಳ ತೂಕ 49.9 ಕಿಲೋಗ್ರಾಮ್​ನಷ್ಟಿತ್ತು. ಅವರ ನಾರ್ಮಲ್ ತೂಕ 57. ಅವರು ಹೇಗಾದರು ಮಾಡಿ 50ಕ್ಕೆ ತೂಕವನ್ನು ತಂದಿಡಲು ಒದ್ದಾಡಿದ್ದಾರೆ. ಆದ್ರೆ ಎರಡನೇ ದಿನದಿಂದ ಅವರ ತೂಕದಲ್ಲಿ ಹೆಚ್ಚಾಗುತ್ತಾ ಹೋಗಿದೆ. ಏನೇ ತಿಂದರೂ ಅದು ತೂಕದ ಮೇಲೆ ಪರಿಣಾಮ ಬೀರಲು ಶುರುವಾಯ್ತು. ಆವತ್ತು ತಿಂದ ಮಿನಿ ಮೀಲ್ಸ್ ಕೂಡ ಆಕೆಯ ತೂಕವನ್ನು 53ಕೆಜಿಗೆ ತಂದು ನಿಲ್ಲಿಸಿತು. ಹೀಗಾಗಿ ಏನು ತಿನ್ನದೇ ಏನು ಕುಡಿಯದೇ ಸೆಮಿ ಫೈನಲ್ ದಿನದ ರಾತ್ರಿ ಕಳೆದು ಬಿಟ್ಟರು. ಹನಿ ನೀರನ್ನು ಕುಡಿಯದೇ ಉಳಿದು ಬಿಟ್ಟರು. ಅದರ ಜೊತಗೆ ನಿರಂತರ ವರ್ಕೌಟ್ ಮಾಡಿದ್ರು. ಆದ್ರೂ ಕೂಡ ತೂಕ 100 ರಿಂದ 150 ಗ್ರಾಂನಷ್ಟು ಹೆಚ್ಚಿಗೆನೇ ಉಳಿದ ಕಾರಣ ವಿನೇಶ್​ ಪೋಗಟ್​ ಒಲಿಂಪಿಕ್ಸ್​ ಪಂದ್ಯಾವಳಿಯಿಂದ ಅನರ್ಹರಾಗಬೇಕಾಗಿದೆ.

ಪೋಗಟ್​ ಬೆನ್ನಿಗೆ ನಿಂತ ಭಾರತೀಯ ಒಲಿಂಪಿಕ್ಸ್ ಸಮಿತಿ

ಪೋಗಟ್​ ಅನರ್ಹತೆಯಾದ ಬಗ್ಗೆ ಮಾತನಾಡಿದ ಭಾರತೀಯ ಒಲಿಂಪಿಕ್ಸ್ ಅಸೋಸಿಯಷನ್​ನ ಅಧ್ಯಕ್ಷೆ ಪಿ.ಟಿ. ಉಷಾ, ವಿನೇಶ್ ಅನರ್ಹತೆ ನಮಗೆ ನಿಜಕ್ಕೂ ಆಘಾತ ನೀಡಿದೆ. ಒಲಿಂಪಿಕ್​ ವಿಲೇಜ್​ನಲ್ಲಿ ಆಕೆಯನ್ನು ನಾನು ಭೇಟಿ ಮಾಡಿದ್ದೇನೆ, ಆಕೆಯ ಬೆನ್ನ ಹಿಂದೆ ಭಾರತೀಯ ಒಲಿಂಪಿಕ್ಸ್ ಸಮಿತಿ ಸದಾ ಇರುತ್ತದೆ ಎಂಬ ಭರವಸೆಯನ್ನು ನೀಡಿದ್ದಾರೆ. ಕೇವಲ ನಾವು ಮಾತ್ರವಲ್ಲ ಭಾರತ ಸರ್ಕಾರ ಹಾಗೂ ಇಡೀ ದೇಶವೇ ಅವರೊಂದಿಗೆ ಇದೆ. ಅವರಿಗೆ ಬೇಕಾದ ಎಲ್ಲ ವೈದ್ಯಕೀಯ ಬೆಂಬಲದ ಜೊತೆಗೆ ನೈತಿಕ ಬಲವನ್ನು ನೀಡಲು ನಾವೆಲ್ಲರೂ ಇದ್ದೇವೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಕ್ತ ಹೀರಿದ್ರು.. ಹೇರ್ ​ಕಟ್ ಮಾಡಿದ್ರು; ತೂಕ ಇಳಿಸಲು ವಿನೇಶ್ ಫೋಗಟ್‌ ಮಾಡಿದ ಸಾಹಸ ಭಯಾನಕ!

https://newsfirstlive.com/wp-content/uploads/2024/08/Vinesh-Phogat-PT-USha.jpg

Load More