/newsfirstlive-kannada/media/post_attachments/wp-content/uploads/2024/08/Vinesh-Phogat-4.jpg)
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿಪಟು ವಿನೇಶ್ ಪೋಗಟ್ ಅವರು ಇತಿಹಾಸ ಬರೆದಿದ್ದಾರೆ. ಸೆಮಿಫೈನಲ್‌ನಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದ್ದು, ಬೆಳ್ಳಿ ಅಥವಾ ಚಿನ್ನದ ಪದಕ ಬೇಟೆಯಾಡುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ವಿನೇಶ್ ಪೋಗಟ್ ಏನೇನ್ ತಿಂತಾರೆ? ಸಿಂಪಲ್ ಫುಡ್‌ನಿಂದ ಹರಿಯಾಣದ ಕುಸ್ತಿಪಟು ಸ್ಟ್ರಾಂಗ್ ಆಗಿದ್ದು ಹೇಗೆ?
ಇದನ್ನೂ ಓದಿ: NeerajChopra: ಭಲೇ.. ಭಲೇ ಚಿನ್ನದ ಹುಡುಗ; 89 ಮೀ. ಜಾವಲಿನ್ ಎಸೆದ ನೀರಜ್ ಚೋಪ್ರಾ!
ವಿನೇಶ್ ಪೋಗಟ್ ಅವರು ಒಲಿಂಪಿಕ್ಸ್ ಇತಿಹಾಸದಲ್ಲಿ ಕುಸ್ತಿಯಲ್ಲಿ ಫೈನಲ್ ಪ್ರವೇಶಿಸಿರುವ ಮೊಟ್ಟ ಮೊದಲ ಮಹಿಳಾ ಕ್ರೀಡಾಪಟು. ವಿನೇಶ್ ಪೋಗಟ್ ಅವರು ಚಿನ್ನದ ಪದಕವನ್ನೇ ಗೆದ್ದು ಬರಲಿ ಎಂದು ಕೋಟ್ಯಾಂತರ ಭಾರತೀಯರು ಶುಭ ಕೋರುತ್ತಿದ್ದಾರೆ. ಫೈನಲ್‌ನಲ್ಲಿ ವಿನೇಶ್ ಪೋಗಟ್ ಅವರಿಗೆ ಚಿನ್ನದ ಪದಕ ಗೆಲ್ಲುವ ಅವಕಾಶ ಬಹಳಷ್ಟಿದೆ. ಹೀಗಾಗಿ ನಿರೀಕ್ಷೆಯೂ ಹೆಚ್ಚಾಗಿದೆ.
ಕ್ವಾರ್ಟರ್‌ಫೈನಲ್‌ನಲ್ಲಿ ವೀರಾವೇಶ!
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಅವರು ವೀರಾವೇಶದ ಆಟ ಪ್ರದರ್ಶಿಸಿದ್ದರು. 50 ಕೆಜಿ ಕುಸ್ತಿ ವಿಭಾಗದಲ್ಲಿ ಇದುವರೆಗೂ ಸೋತೇ ಇರದ ಜಪಾನ್ ದೇಶದ ವರ್ಲ್ಡ್ ಚಾಂಪಿಯನ್ ಯುಯಿ ಸುಸಾಕಿ ಅವರನ್ನು ಸೋಲಿಸೋ ಮೂಲಕ ಸೆಮಿ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದರು.
ಕ್ವಾರ್ಟರ್ ಫೈನಲ್‌ನಲ್ಲಿ ಉಕ್ರೇನ್ ಸ್ಪರ್ಧಿಯನ್ನು ಸೋಲಿಸಿದ ವಿನೇಶಾ ಪೋಗಟ್ ಅವರು ಇದೀಗ ಸೆಮಿ ಫೈನಲ್ ಕೂಡ ಪ್ರವೇಶಿಸಿದ್ದರು. ಸೆಮಿಫೈನಲ್‌ನಲ್ಲಿ ಕ್ಯೂಬ್ ಸ್ಪರ್ಧಿ ವಿರುದ್ಧ ಹೋರಾಡಿದ ವಿನೇಶ್ ಪೋಗಟ್ ಸೀದಾ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಪ್ಯಾರಿಸ್‌ನಲ್ಲಿ ವಿನೇಶ್ ಪೋಗಟ್ ಅವರ ಸಾಧನೆ ನೋಡಿ ಇಡೀ ಭಾರತವೇ ಹೆಮ್ಮೆಪಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ