ಇಂದು ನಿರ್ಧಾರವಾಗಲಿದೆ ವಿನೇಶ್ ಪೋಗಟ್​​ ಭವಿಷ್ಯ.. ಬೆಳ್ಳಿ ಪದಕ ಸಿಗೋದು ಮಾತ್ರ..

author-image
AS Harshith
Updated On
ವಿನೇಶ್ ಪೋಗಟ್‌ ಬೆಳ್ಳಿ ಪದಕದ ಕನಸು ಜೀವಂತ.. ಹೊಸ ಭರವಸೆ; ಅಂತಿಮ ತೀರ್ಪು ಯಾವಾಗ?
Advertisment
  • ಒಲಿಂಪಿಕ್ಸ್ ಫೈನಲ್​ನಲ್ಲಿ ಅನರ್ಹಗೊಂಡ ವಿನೇಶ್​ ಪೋಗಟ್
  • 50ಕೆಜಿ ವಿಭಾಗದ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿ
  • 100 ಗ್ರಾಂ ಹೆಚ್ಚುವರಿ ತೂಕದಿಂದ ಫೈನಲ್​ನಲ್ಲಿ ಹೊರಬಿದ್ದ ವಿನೇಶ್​

ವಿನೇಶ್​ ಪೋಗಟ್​​. ಒಲಿಂಪಿಕ್ಸ್ ಫೈನಲ್​ನಲ್ಲಿ ಅನರ್ಹಗೊಂಡು ಭಾರತೀಯರ ಕಣ್ಣು ತೇವಗೊಳಿಸಿದ ಸ್ಫರ್ಧಿ. ಈಗಲೂ ಸಹ ಈಕೆ ಅನರ್ಹಗೊಂಡ ವಿಚಾರ ತಿಳಿದರೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬರೀ 100 ಗ್ರಾಂ ಹೆಚ್ಚುವರಿ ತೂಕದಿಂದ ಹೊರಬಿದ್ದ ಕುಸ್ತಿಪಟುವಿನ ನೋವಿನ ಕತೆಗೆ ಪ್ರಧಾನಿ ಮೋದಿ ಮಾತ್ರವಲ್ಲ, ಎಲ್ಲರೂ ಬೇಸರ ವ್ಯಕ್ತಪಡಿಸಿದ್ದರು. ಆದರೆ ಆಕೆಯ ಶ್ರಮಕ್ಕಾಗಿ ಬೆಳ್ಳಿಯ ಪದಕವಾದರೂ ಕೈ ಸೇರಲಿದೆ ಎಂಬುದು ಭಾರತೀಯರ ಆಸೆ. ಆದರಿಂದು ಆ ಭವಿಷ್ಯ ನಿರ್ಧಾರವಾಗಲಿದೆ.

ಹೌದು. ಇಂದು ಕುಸ್ತಿಪಟು ವಿನೇಶ್ ಪೋಗಟ್​​ ಭವಿಷ್ಯ ನಿರ್ಧಾರವಾಗಲಿದೆ. ವಿನೇಶ್ ಸಲ್ಲಿಸಿರೋ ಅರ್ಜಿಯ ವಿಚಾರಣೆ ನಡೆಯಲಿದೆ. ಬಹುತೇಕರಿಗೆ ಬೆಳ್ಳಿಯ ಪದಕ ಆಕೆಯ ​​ಕೈಸೇರುತ್ತಾ ಎಂಬ ಕುತೂಹಲವಿದೆ.

publive-image

ಭಾರತದ ಕಾಲಮಾನದ ಪ್ರಕಾರ ರಾತ್ರಿ 9.30ಕ್ಕೆ ತೀರ್ಪು ಪ್ರಕಟವಾಗಲಿದೆ. ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್​​​ನಿಂದ ತೀರ್ಪು ಪ್ರಕಟವಾಗಲಿದೆ. ಪೋಗಾಟ್ ಪರ ಹರೀಶ್ ಸಾಳ್ನೆ ಸೇರಿ ನಾಲ್ಕು ವಕೀಲರು ವಾದ ಮಂಡಿಸಲಿದ್ದಾರೆ.

ಫೈನಲ್​ನಲ್ಲಿ ಏನಾಯ್ತು?

ವಿನೇಶ್ ಫೋಗಟ್ ಅವರು ಈ ಬಾರಿಯ ಒಲಿಂಪಿಕ್ಸ್‌ನ 50 ಕೆಜಿ ಕುಸ್ತಿ ಪಂದ್ಯದಲ್ಲಿ ಫೈನಲ್ ತಲುಪಿದ ಮೊದಲ ಮಹಿಳಾ ಕ್ರೀಡಾಪಟುವಾಗಿದ್ದರು. ಆದರೆ ಹೆಚ್ಚುವರಿ 100 ಗ್ರಾಂ ತೂಕ ಜಾಸ್ತಿ ಇದ್ದ ಕಾರಣ ವಿನೇಶ್ ಫೋಗಟ್ ಅವರು ರಾತ್ರಿ ಇಡೀ ವರ್ಕೌಟ್ ಮಾಡಿದ್ದಾರೆ. ಸೈಕ್ಲಿಂಗ್‌, ಜಾಗಿಂಗ್‌, ಸ್ಕಿಪ್ಪಿಂಗ್ ಹೀಗೆ ತೂಕ ಇಳಿಸಿಕೊಳ್ಳಲು ವಿನೇಶ್ ಫೋಗಟ್ ಅವರು ಅತಿಯಾದ ದೈಹಿಕ ಕಸರತ್ತು ಮಾಡಿದ್ದಾರೆ. ವ್ಯಾಯಾಮದಿಂದ ಸುಸ್ತಾಗಿದ್ದ ಕುಸ್ತಿಪಟು ವಿನೇಶ್​ ಫೋಗಟ್ ಅವರಿಗೆ ದೇಹದಲ್ಲಿ ನೀರಿನ ಅಂಶದ ಕೊರತೆಯಿಂದ ಅಸ್ವಸ್ಥರಾಗಿದ್ದಾರೆ. ಡಿಹೈಡ್ರೇಷನ್​ನಿಂದ ಆಸ್ಪತ್ರೆಗೆ ದಾಖಲಾದರು. ಅತ್ತ ಪಂದ್ಯದಿಂದ ಅನರ್ಹಗೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment