/newsfirstlive-kannada/media/post_attachments/wp-content/uploads/2024/12/VINOD-KAMBLI-1.jpg)
ಭಾರತೀಯ ಕ್ರಿಕೆಟ್ನಲ್ಲಿ ಅದೆಷ್ಟೋ ಕ್ರಿಕೆಟರ್ಗಳ ಕಥೆಗಳು ಸ್ಫೂರ್ತಿದಾಯಕ. ಯುವಕರ ಪಾಲಿಗೆ ದಾರಿದೀಪ. ಕೆಲವೊಬ್ಬ ಕ್ರಿಕೆಟರ್ಗಳ ಜೀವನ ಮಾತ್ರ ಕಲಿಕೆಯ ಪಾಠ. ಈ ಪೈಕಿ ವಿನೋದ್ ಕಾಂಬ್ಳೆಯ ಜೀವನವೋ ಒಂದಾಗಿದೆ.
ವಿನೋದ್ ಕಾಂಬ್ಳಿ.. ಈತನ ಅದೃಷ್ಟ.. ಹಣೆಬರಹ, ನಡತೆ ಚೆನ್ನಾಗಿದ್ದರೆ, ಇವತ್ತು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಬ್ಬ ಸಚಿನ್ ಆಗಿ ಮೆರೆದಾಡುತ್ತಿದ್ದರು. ಪ್ರತಿಭೆ ಎಂಬ ಅಹಃ ವಿನೋದ ಎಂಬ ವ್ಯಸನದಾಟದಲ್ಲಿ ಪಾತಾಳಕ್ಕೆ ಕುಸಿದರು. ಅಲ್ಪ ಯಶಸ್ಸಿನಲ್ಲೇ ಕುಬೇರನಾದ ವಿನೋದ್ ಕಾಂಬ್ಳೆ, ಇವತ್ತು ಒಂದೊಂದು ರೂಪಾಯಿಗೂ ಪರದಾಡ್ತಿದ್ದಾರೆ. ಆರೋಗ್ಯವೂ ಕ್ಷೀಣಿಸಿ ಮುಂದೇನು ಎಂಬ ಯಕ್ಷಪ್ರಶ್ನೆಯಲ್ಲಿ ಜೀವನ ದೂಡುತ್ತಿದ್ದಾರೆ. ಇದಕ್ಕೆ ಕಾರಣ ವಿನೋದ ವ್ಯಸನದಾಟ. ಈ ಹಿಂದೆ ಸವಿ ನೆನಪಿನ ಇನ್ನಿಂಗ್ಸ್ ಕಟ್ಟಿದ ಆಪ್ತ ಸ್ನೇಹಿತರು. ಇವತ್ತು ಆಪ್ತ ಗೆಳೆಯನ ಕೈ ಹಿಡಿದು ಎದ್ದೇಳುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ವಿನೋದ್ ಕಾಂಬ್ಳೆ ದುಚ್ಚಟಗಳು.
ಇದನ್ನೂ ಓದಿ:ವಿನೋದ್ ಕಾಂಬ್ಳಿ ನನ್ನ ಮಗನಿದ್ದಂತೆ.. ಅವನ ಜವಾಬ್ದಾರಿ ನನ್ನದು; ಹೀಗೆ ಹೇಳಿದ ಮಾಜಿ ಕ್ರಿಕೆಟಿಗ ಯಾರು?
ಕ್ರಿಕೆಟ್ ಶಿಖರವೇರಬೇಕಿದ್ದ ಕುಸಿದಿದ್ದು ಪಾತಾಳಕ್ಕೆ
1993ರಲ್ಲಿ ಟೀಮ್ ಇಂಡಿಯಾಗೆ ಎಂಟ್ರಿ ನೀಡಿದ ಕಾಂಬ್ಳಿ, ಕರಿಯರ್ ಆರಂಭದಲ್ಲೇ ಸಾಲು ಸಾಲು ಶತಕ ಬಾರಿಸಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಅದೇನು ಆಯ್ತೋ ಏನೋ 12 ಪಂದ್ಯಗಳಲ್ಲೇ 1 ಸಾವಿರ ರನ್ ಗಡಿ ದಾಟಿದ ಕಾಂಬ್ಳಿ 17 ಪಂದ್ಯಗಳಿಂದ ಗಳಿಸಿದ್ದು 1084 ರನ್ ಮಾತ್ರ. ಪರಿಣಾಮ ಟೆಸ್ಟ್ ಕರಿಯರ್ ಕೇವಲ 24ನೇ ವರ್ಷದಲ್ಲೇ ಅಂತ್ಯವಾಯ್ತು. ಏಕದಿನ ತಂಡದ ಭಾಗವಾಗಿದ್ದರೂ ಅಸ್ಥಿರ ಪ್ರದರ್ಶನ ಮುಳುವಾಯ್ತು. ಕುಡಿತದ ಮತ್ತು ಕಾಂಬ್ಳಿ ಅಧಃಪತನಕ್ಕೆ ನಾಂದಿಯಾಡ್ತು.
ಲೇಟ್ ನೈಟ್ ಪಾರ್ಟೀಸ್ನಲ್ಲಿ ಬ್ಯುಸಿಯಾಗಿದ್ದ ಕಾಂಬ್ಳಿ, ಟೀಮ್ ಇಂಡಿಯಾದ ನೆಟ್ ಸೆಷನ್ಗೆ ಬಂಕ್ ಹೊಡಿತಿದ್ದರು. ಮತ್ತೊಂದೆಡೆ ವೈಫಲ್ಯ ಹಾದಿ ಹಿಡಿದಿದ್ದ ಕಾಂಬ್ಳಿಗೆ ಒಂದಲ್ಲ. ಎರಡಲ್ಲ ಮೂರು ಬಾರಿ ವಾರ್ನ್ ಮಾಡಿ ಚಾನ್ಸ್ ನೀಡಿತ್ತು. 1996ರ ಏಕದಿನ ವಿಶ್ವಕಪ್ನಲ್ಲೂ ನೀಡಿದ್ದ ಚಾನ್ಸ್ ಉಪಯೋಗಿಸಿಕೊಳ್ಳದ ಕಾಂಬ್ಳಿಗೆ ತಂಡದಿಂದಲೇ ಕಿಕ್ಔಟ್ ಮಾಡ್ತು.
ಇದನ್ನೂ ಓದಿ:ಸಚಿನ್ ಕೈ ಹಿಡಿದ ವಿನೋದ್ ಕಾಂಬ್ಳಿ.. ಬಾಲ್ಯದ ಗೆಳೆಯರ ಅಪರೂಪದ ವಿಡಿಯೋ ಫುಲ್ ವೈರಲ್!
ವೈವಾಹಿಕ ಜೀವನದಲ್ಲೂ ಏಳುಬೀಳು
ಕ್ರಿಕೆಟ್ ಆಟದಂತೆ ವೈವಾಹಿಕ ಜೀವನದಲ್ಲೂ ಏಳು ಬೀಳು ಕಂಡವರು.1998ರಲ್ಲಿ ಹೋಟೆಲ್ನಲ್ಲಿ ಕೆಲಸ ಮಾಡ್ತಿದ್ದ ನಿಯೋಲಾ ಲೀವಿಸ್ರನ್ನ ಮದುವೆಯಾದ ಕಾಂಬ್ಳಿ, ನಂತರ ವಿಚ್ಛೇದನ ನೀಡಿ, ಫ್ಯಾಶನ್ ಮಾಡೆಲ್ ಆಗಿದ್ದ ಆಂಡ್ರಿಯಾ ಹೆವೈಟ್ರನ್ನ ವರಿಸ್ತಾರೆ. ಈಕೆಗಾಗಿ ಕ್ರೈಸ್ತ ಧರ್ಮಕ್ಕೂ ಸೇರ್ಪಡೆಯಾಗ್ತಾರೆ. ಇಷ್ಟೋತ್ತಿಗಾಗಲೇ ಹಳಿತಪ್ಪಿದ್ದ ಕಾಂಬ್ಳಿ ನಂತರ ವಿವಾದಗಳಿಂದಲೇ ಸುದ್ದಿಯಾಗಿದ್ದೇ ಹೆಚ್ಚು.
2015ರಲ್ಲಿ ಮನೆ ಕೆಲಸದವರಿಗೆ ಕಿರುಕುಳ, ಹಲ್ಲೆ.. ಮಾಲ್ವೊಂದರಲ್ಲಿ ಖ್ಯಾತ ಗಾಯಕ ಅಂಕಿತ್ ತಿವಾರಿ ತಂದೆ ರಾಜೇಂದ್ರ ತಿವಾರಿಗೆ ಥಳಿಸಿದ್ದ ಕಾಂಬ್ಳಿ, ನಂತರ ಪತ್ನಿಯ ಮೇಲೆಯೇ ಹಲ್ಲೆ ಮಾಡಿ ಸುದ್ದಿಯಾಗಿದ್ದರು. 2022ರಲ್ಲಿ ಕುಡಿದ ಮತ್ತಲ್ಲಿ ಕಿರಿಕ್ ಮಾಡಿಕೊಂಡು ಜೈಲುವಾಸ ಅನುಭವಿಸಿದ್ರು.
ಸಿನಿಮಾ, ರಾಜಕೀಯ ಕ್ಷೇತ್ರದಲ್ಲೂ ಅದೃಷ್ಟದ ಪರೀಕ್ಷೆ
ಕ್ರಿಕೆಟ್ನಿಂದ ದೂರವಾಗಿದ್ದ ವಿನೋದ್ ಕಾಂಬ್ಳಿ ಸಿನಿಮಾ, ರಾಜಕೀಯ ಅದೃಷ್ಟದ ಪರೀಕ್ಷೆಗೆ ಇಳಿದರು. ಮೊದಲು ಬಾಲಿವುಡ್ಗೆ ಎಂಟ್ರಿ ನೀಡಿದ ಕಾಂಬ್ಳಿ, ಅನರ್ಥ್, ಪಲ್ ಪಲ್ ದಿಲ್ ಕೇ ಸಾಥ್, ಸೇರಿದಂತ ಕನ್ನಡದ ಬೆತ್ತನಗೆರೆ ಎಂಬ ಚಿತ್ರದಲ್ಲೂ ಬಣ್ಣ ಹಚ್ಚಿದ್ದರು. 2009ರಲ್ಲಿ ರಾಜಕೀಯದ ಅದೃಷ್ಟ ಪರೀಕ್ಷೆಗೆ ಇಳಿದು ಮುಂಬೈನ ವಿಕ್ರೋಲಿ ವಿಧಾನಸಭಾ ಕ್ಷೇತ್ರದಿಂದ ಸೋಲುಂಡಿದ್ದರು. ಬಳಿಕ ರಿಯಾಲಿಟಿ ಶೋನಲ್ಲಿ ಅದೃಷ್ಟದ ಪರೀಕ್ಷೆಗೆ ಇಳಿದ ಕಾಂಬ್ಳಿ, ಬಿಗ್ ಬಾಸ್ ಸೀಸನ್ 3ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ದರು. ಈ ವೇಳೆ ವಾರಕ್ಕೆ ಒಂದೂವರೆ ಲಕ್ಷದಂತೆ ಕಾಂಬ್ಳಿಗೆ ಹಣ ಸಿಕ್ತಿತ್ತು. ಶ್ರೀಶಾಂತ್ಗೆ ವಾರಕ್ಕೆ 50 ಲಕ್ಷ ಪಾವತಿ ಮಾಡಲಾಗ್ತಿತ್ತು.
ಇದನ್ನೂ ಓದಿ:ಸಚಿನ್ ಕೈ ಹಿಡಿದ ವಿನೋದ್ ಕಾಂಬ್ಳಿ.. ಬಾಲ್ಯದ ಗೆಳೆಯರ ಅಪರೂಪದ ವಿಡಿಯೋ ಫುಲ್ ವೈರಲ್!
ಲಕ್ಸುರಿ ಜೀವನ ಕಂಡಿದ್ದ ಕಾಂಬ್ಳಿಗೆ ಪೆನ್ಷನ್ ಮೂಲಾಧಾರ
ಒಂದು ಕಾಲದಲ್ಲಿ ಕೋಟಿ ಲೆಕ್ಕದಲ್ಲಿ ದುಡ್ಡು ನೋಡಿದ್ದ ವಿನೋದ್ ಕಾಂಬ್ಳಿ, ಇವತ್ತು ಬಿಡಿಗಾಸಿಲ್ಲದೆ ಮತ್ತೊಬ್ಬರ ನೆರವಿಗೆ ಅಂಗಲಾಚುತ್ತಿದ್ದಾರೆ. ಬಿಸಿಸಿಐನಿಂದ ಬರೋ 30 ಸಾವಿರ ಪೆನ್ಷನ್ ಹಣದಲ್ಲೇ ಜೀವನ ಸಾಗಿಸಬೇಕಾದ ದುಸ್ಥಿತಿಯಲ್ಲಿದ್ದಾರೆ. ಆರ್ಥಿಕ ಸಮಸ್ಯೆಯ ಜೊತೆಗೆ ಅನಾರೋಗ್ಯದ ಸಮಸ್ಯೆಯೂ ಎದುರಿಸುತ್ತಿರುವ ಕಾಂಬ್ಳಿ, ನೆರವಿಗೆ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರು ಸಹಾಯಾಸ್ತ ಚಾಚುವ ಭರವಸೆ ನೀಡಿದ್ದಾರೆ. ಇದಕ್ಕೆ ದುಚ್ಚಟದಿಂದ ಹೊರ ಬರುವ ಷರತ್ತು ವಿಧಿಸಿರುವ ಕಪಿಲ್ ದೇವ್ ಟೀಮ್, ಆಸ್ಪತ್ರೆಯ ಬಿಲ್ ಸಹಿತ, ಆರ್ಥಿಕ ಸಹಾಯವೂ ಮಾಡುವ ಭರವಸೆ ನೀಡಿದ್ದಾರೆ. 14 ಬಾರಿ ರಿಹ್ಯಾಬ್ನಲ್ಲಿದ್ದರೂ ಆ ದುಚ್ಚಟದಿಂದ ಹೊರಬರದ ಕಾಂಬ್ಳಿ, ಈಗಲಾದರೂ ಎಚ್ಚೆತ್ತುಕೊಳ್ತಾರಾ ಅನ್ನೋದೇ ದೊಡ್ಡ ಪ್ರಶ್ನೆ.
ಮಾಹಿತಿಗಳ ಪ್ರಕಾರ, ಕಪಿಲ್ ದೇವ್ ನೀಡಿರುವ ಷರತ್ತುಗಳಿಗೆ ಕಾಂಬ್ಳಿ ಒಪ್ಪಿಕೊಂಡಿದ್ದಾರೆ. ಅಂತೆಯೇ ಕಾಂಬ್ಳಿ 15ನೇ ಭಾರಿಗೆ ರಿಹ್ಯಾಬ್ಗೆ ಸೇರಲಿದ್ದಾರೆ.
ಇದನ್ನೂ ಓದಿ:ಡ್ರೋನ್ ಪ್ರತಾಪ್ ಪ್ರಕರಣ.. ಮತ್ತಿಬ್ಬರಿಗೆ ಶುರುವಾಗಿದೆ ಬಂಧನದ ಭೀತಿ.. ಮೂವರ ವಿರುದ್ಧ ಕೇಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ