/newsfirstlive-kannada/media/post_attachments/wp-content/uploads/2024/12/VINOD-KAMBLI-DANCE.jpg)
ವಿನೋದ ಕಾಂಬ್ಳಿ ಎರಡು ದಶಕಗಳ ಹಿಂದೆ ಕ್ರಿಕೆಟ್​ ಅಂಗಳದಲ್ಲಿ ಬ್ಯಾಟ್ ಬೀಸಿ ತನ್ನದೇ ಆದ ಒಂದು ಹೆಸರು ಗಳಿಸಿಕೊಂಡಿದ್ದರು. ವಿಧಿಯ ವಿಲಾಸವೋ, ಏನೋ. ಅವರ ಬದುಕಲ್ಲಿ ನಡೆಯಬಾರದ ಘಟನೆಗಳು ನಡೆದು ಈಗ ತಮ್ಮ ಆರೋಗ್ಯದ ಜೊತೆ ಬ್ಯಾಟ್ ಬೀಸುತ್ತಿದ್ದಾರೆ ವಿನೋದ್ ಕಾಂಬ್ಳಿ. ಕಳೆದ ಎರಡು ವಾರಗಳಿಂದ ವಿನೋದ್ ಕಾಂಬ್ಳಿ ಆಸ್ಪತ್ರೆಯಲ್ಲಿದ್ದಾರೆ. ಅನಾರೋಗ್ಯ ಅವರನ್ನು ಹೈರಾಣು ಮಾಡಿ ಹಾಕಿದೆ. ಆದರೂ ಕೂಡ 90ರ ದಶಕದ ಈ ಕ್ರಿಕೆಟ್​ ಸ್ಟಾರ್​, ಜೀವನೋತ್ಸಹವನ್ನು ರವೆಯಷ್ಟು ಕಡಿಮೆ ಮಾಡಿಕೊಂಡಿಲ್ಲ. ಅದಕ್ಕೆ ಸಾಕ್ಷಿಯೆನ್ನುವಂತೆ ಹರಿದಾಡುತ್ತಿದೆ ಸೋಷಿಯಲ್ ಮೀಡಿಯಾಗಳಲ್ಲಿ ಒಂದು ವಿಡಿಯೋ.
ಇದನ್ನೂ ಓದಿ:ಅಪ್ಪನ ತ್ಯಾಗ ಒಂದೇ ಅಲ್ಲ.. ನಿತೀಶ್ ರೆಡ್ಡಿ ಯಶಸ್ಸಿನ ಹಿಂದೆ ಮತ್ತೊಬ್ಬ ಗಾಡ್​ ಫಾದರ್..!
ವಿನೋದ್ ಕಾಂಬ್ಳಿಯ ಒಂದು ವಿಡಿಯೋ ಸದ್ಯ ಲಕ್ಷಾಂತರ ಜನ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದೆ. ನಟ ಶಾರುಖ್​ ಖಾನ್ ಸಿನಿಮಾದ ಚಕ್​ ದೇ ಇಂಡಿಯಾ ಹಾಡಿಗೆ ಕಾಂಬ್ಳಿ ಡ್ಯಾನ್ಸ್ ಮಾಡಿದ್ದು ಸದ್ಯ ವೈರಲ್ ಆಗಿದೆ. 52 ವರ್ಷದ ಈ ಮಾಜಿ ಕ್ರಿಕೆಟಿಗ ಈಗಷ್ಟೇ ತಮ್ಮ ಆರೋಗ್ಯ ಸಮಸ್ಯೆಯಿಂದ ಸುಧಾರಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ಸಮಸ್ಯೆಯಿಂದಾಗಿಯೇ ಅವರು ಸದ್ಯ ಆಕೃತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ದಿನದಿಂದ ದಿನಕ್ಕೆ ಸುಧಾರಿಸಿಕೊಳ್ಳುತ್ತಿದ್ದಾರೆ. ಯುರಿನರಿ ಇನ್ಫೆಕ್ಷನ್​ನಿಂದ ಬಳಲುತ್ತಿರುವ ಕಾಂಬ್ಳಿ ಕಳೆದ ಎರಡು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ
ಸದ್ಯ ಆಸ್ಪತ್ರೆಯ ಸಿಬ್ಬಂದಿ ಹಾಗೂ ನರ್ಸ್​ ಜೊತೆ ವಿನೋದ್ ಕಾಂಬ್ಳಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ.
View this post on Instagram
ಇದನ್ನೂ ಓದಿ:ಕಾಂಬ್ಳಿ ಫೋನ್ ವಾಪಸ್ ಕಿತ್ಕೊಂಡ ಅಂಗಡಿ ಮಾಲೀಕ.. ಇತ್ತ ವೈದ್ಯರ ತಪಾಸಣೆಯಲ್ಲಿ ಆಘಾತಕಾರಿ ವಿಚಾರ ಬಹಿರಂಗ..
ಕಾಂಬ್ಳಿಯವರನ್ನು ಚೀಯರ್​​ ಮಾಡಲು ಅಂತ ಸಿಬ್ಬಂದಿ ಹಾಗೂ ನರ್ಸ್​ ಕೂಡ ಅವರ ಡ್ಯಾನ್ಸ್​ನಲ್ಲಿ ಭಾಗಿಯಾಗಿದ್ದಾರೆ. ಈ ಒಂದು ವಿಡಿಯೋ ನೋಡಿದವರು, ಕಾಂಬ್ಳಿಯ ಜೀವನ ಪ್ರೀತಿಯನ್ನು ಕೊಂಡಾಡಿದ್ದಾರೆ. ಅವರ ಬೇಗನೆ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಮತ್ತೊಂದು ಕಡೆ ಕಾಂಬ್ಳಿಯವರನ್ನು ಆಸ್ಪತ್ರೆಯ ಸಿಬ್ಬಂದಿ ಅಷ್ಟೊಂದು ಕಾಳಜಿಯಿಂದ ನೋಡಿಕೊಳ್ಳುತ್ತಿರುವುದಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ. ಇತ್ತೀಚೆಗಷ್ಟೇ ಕಾಂಬ್ಳಿ ಹಾಗೂ ಸಚಿನ್​ ಗುರುಗಳಾದ ರಮಾಕಾಂತ್​ ಅಚ್ರೇಕರ್ ಅವರ ಸ್ಮಾರಕ ಅನಾವರಣದ ದಿನ ಇಬ್ಬರು ಗೆಳೆಯರು ಒಂದೇ ವೇದಿಕೆಯಲ್ಲಿ ಕಂಡಿದ್ದ ವಿಡಿಯೋವೊಂದು ವೈರಲ್ ಆಗಿತ್ತು.
ವಿಡಿಯೋ ವೈರಲ್ ಆದಾಗಿನಿಂದಲೂ ಕಾಂಬ್ಳಿ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬುದು ಗೊತ್ತಾಗಿತ್ತು. ಅವರ ಸಹಾಯಕ್ಕಾಗಿ ನಾನು ಇದ್ದೇನೆ, ಕಾಂಬ್ಳಿ ನನಗೆ ಮಗನಿದ್ದಂತೆ ಅಂತ ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಸುನೀಲ್ ಗವಾಸ್ಕರ್ ಹೇಳಿದ್ದರು, ಅದು ಕೂಡ ನೆಟ್ಟಿಗರ ಗಮನ ಸೆಳೆದಿತ್ತು .
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us