Advertisment

ಸಚಿನ್ ಕೈ ಹಿಡಿದ ವಿನೋದ್ ಕಾಂಬ್ಳಿ.. ಬಾಲ್ಯದ ಗೆಳೆಯರ ಅಪರೂಪದ ವಿಡಿಯೋ ಫುಲ್ ವೈರಲ್‌!

author-image
admin
Updated On
ಆಪ್ತಮಿತ್ರನ ಆಪತ್ತಿನ ಕಾಲಕ್ಕೆ ಆಗದ ಸಚಿನ್​; ಬಾಲ್ಯ ಸ್ನೇಹಿತ ತೆಂಡೂಲ್ಕರ್ ಬಗ್ಗೆ ಕಾಂಬ್ಳಿ​ ಏನಂದ್ರು?
Advertisment
  • ವಿನೋದ್ ಕಾಂಬ್ಳಿ ಹಾಗೂ ಸಚಿನ್ ತೆಂಡೂಲ್ಕರ್ ಮಹಾ ಮಿಲನ
  • ವಿನೋದ್ ಕಾಂಬ್ಳಿ ಬಳಿಗೆ ಹೋಗಿ ಮಾತನಾಡಿಸಿದ ಸಚಿನ್ ತೆಂಡೂಲ್ಕರ್
  • ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೈಲಿಗಲ್ಲುಗಳನ್ನ ಸೃಷ್ಟಿಸಿದ್ದ ಅಪರೂಪದ ಜೋಡಿ

ಬಾಲ್ಯದ ಗೆಳೆಯರು ಬಹಳ ವರ್ಷಗಳ ಬಳಿಕ ಮತ್ತೆ ಸೇರಿದ್ರೆ ಆಗೋ ಆನಂದವೇ ಬೇರೆ. ಕ್ರಿಕೆಟ್‌ ಜಗತ್ತಿನಲ್ಲಿ ವಿನೋದ್ ಕಾಂಬ್ಳಿ ಹಾಗೂ ಸಚಿನ್ ತೆಂಡೂಲ್ಕರ್ ಇಬ್ಬರು ಈ ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಗಿದ್ದಾರೆ. ಕಾಂಬ್ಳಿ ಹಾಗೂ ಸಚಿನ್ ಇಬ್ಬರ ಈ ಮಿಲನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Advertisment

ಬಹಳ ವರ್ಷಗಳ ಬಳಿಕ ವಿನೋದ್ ಕಾಂಬ್ಳಿ ಹಾಗೂ ಸಚಿನ್ ತೆಂಡೂಲ್ಕರ್ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕ ಸಮಾರಂಭದಲ್ಲಿ ಈ ಇಬ್ಬರ ಮರು ಮಿಲನ ಕ್ರಿಕೆಟ್ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಅಡಿಲೇಡ್​​ನಲ್ಲಿ ಭಾರತ-ಆಸ್ಟ್ರೇಲಿಯಾ ಟೆಸ್ಟ್; ಸ್ಟಾರ್​ ಬ್ಯಾಟ್ಸಮನ್ ಪಂದ್ಯದಿಂದ ಔಟ್..! 

ಸಚಿನ್ ಹಾಗೂ ವಿನೋದ್ ಕಾಂಬ್ಳಿ ಅವರ ಬಾಲ್ಯದ ಕೋಚ್‌ ರಮಾಕಾಂತ್ ಅಚ್ರೇಕರ್ ಅವರ ಮೆಮೋರಿಯಲ್ ಕಾರ್ಯಕ್ರಮ ಮುಂಬೈನಲ್ಲಿ ನೆರವೇರಿತು. ಈ ವೇಳೆ ಬಾಲ್ಯದ ಕೋಚ್‌ಗೆ ಗೌರವ ಸಲ್ಲಿಸಲು ಇಬ್ಬರು ಲೆಜೆಂಡ್ ಕ್ರಿಕೆಟರ್ ಒಟ್ಟಿಗೆ ಸೇರಿ ವೇದಿಕೆಯನ್ನು ಹಂಚಿಕೊಂಡರು. ರಮಾಕಾಂತ್ ಅಚ್ರೇಕರ್ ಅವರು ಶಾಲೆಯಲ್ಲಿ ಸಚಿನ್ ಹಾಗೂ ಕಾಂಬ್ಳಿ ಅವರಿಗೆ ಕೋಚ್ ಆಗಿದ್ದರು.

Advertisment


">December 3, 2024

ಒಟ್ಟಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೈಲಿಗಲ್ಲುಗಳನ್ನ ಸೃಷ್ಟಿಸಿದ್ದ ಸಚಿನ್ ಹಾಗೂ ವಿನೋದ್ ಕಾಂಬ್ಳಿ ಅವರ ಈ ಜೋಡಿ ಬಹಳ ವರ್ಷಗಳಿಂದ ಬೇರೆ, ಬೇರೆ ಆಗಿದ್ದರು. ಇವರಿಬ್ಬರ ಸ್ನೇಹದಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳು ಕೇಳಿ ಬಂದಿತ್ತು. ವಿನೋದ್ ಕಾಂಬ್ಳಿ ಅವರು ಸಚಿನ್ ಮೇಲೆ ತಮ್ಮ ಬೇಸರವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು.

ಇತ್ತೀಚೆಗೆ ವಿನೋದ್ ಕಾಂಬ್ಳಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು ಸಾಕಷ್ಟು ಸುದ್ದಿಯಾಗಿತ್ತು. ಇದಾದ ಬಳಿಕ ವಿನೋದ್ ಕಾಂಬ್ಳಿ ಅವರು ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಿದ್ದು, ಸಚಿನ್ ತೆಂಡೂಲ್ಕರ್ ಅವರೇ ಕಾಂಬ್ಳಿ ಅವರ ಬಳಿ ಹೋಗಿ ಯೋಗಕ್ಷೇಮ ವಿಚಾರಿಸಿದರು. ಸಚಿನ್ ಅವರನ್ನು ನೋಡಿದ ವಿನೋದ್ ಕಾಂಬ್ಳಿ ತುಂಬಾ ಸಂತೋಷದಲ್ಲಿ ಅವರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ವಿನೋದ್ ಕಾಂಬ್ಳಿ ಅವರಿಂದ ಬಿಡಿಸಿಕೊಳ್ಳಲು ಸಚಿನ್ ಕಷ್ಟಪಟ್ಟು ನಂತರ ಅಲ್ಲಿಂದ ನಿರ್ಗಮಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment