ಆಂಧ್ರದಲ್ಲಿ ಹೊಸ ಸರ್ಕಾರ ರಚನೆಗೆ ಮುಹೂರ್ತ..!
ಜೂನ್ 12ರಂದು ಚಂದ್ರಬಾಬು ನಾಯ್ಡು ಪ್ರಮಾಣ
ಕಲ್ಲು, ಮೊಟ್ಟೆ ದಾಳಿ, ಪೊಲೀಸರ ಮೇಲು ಅಟ್ಯಾಕ್!
ಅತ್ತ ಮೋದಿ ಪ್ರಮಾಣ ವಚನದ ಬಳಿಕ ಇತ್ತ ಆಂಧ್ರದಲ್ಲೂ ಹೊಸ ಸರ್ಕಾರವೂ ಅಸ್ತಿತ್ವಕ್ಕೆ ಬರ್ತಿದೆ. ಬುಧವಾರ ಚಂದ್ರಬಾಬು ನಾಯ್ಡು 4ನೇ ಬಾರಿ ಸಿಂಹಾಸನ ಏರ್ತಿದ್ದು, ಹೊಸ ದಾಖಲೆ ಬರೀತಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ಭುಗಿಲೆದ್ದಿದೆ.
ಆಂಧ್ರದಲ್ಲಿ ಸಂಪ್ರದಾಯದಂತೆ ಅಧಿಕಾರ ಪಲ್ಟಿಯಾಗಿದೆ. ತೆಲುಗು ದೇಶಂ ಪಾರ್ಟಿ ಅಧಿಕಾರದ ಗದ್ದುಗೆ ಏರಿದೆ.. ಜಗನ್ ಪಕ್ಷವನ್ನ ಪುಡಿಗಟ್ಟಿದ ಟಿಡಿಪಿ, ಮತ್ತೊಮ್ಮೆ ತೆಲುಗು ನಾಡಿನಲ್ಲಿ ಅಧಿಕಾರ ಪಡೆದಿದೆ. ನಾಲ್ಕನೇ ಬಾರಿ ಚಂದ್ರಬಾಬು ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯಲಿದ್ದಾರೆ.
ಆಂಧ್ರದಲ್ಲಿ ಹೊಸ ಸರ್ಕಾರ ರಚನೆಗೆ ಮುಹೂರ್ತ!
ಆಂಧ್ರಪ್ರದೇಶದಲ್ಲಿ ಹೊಸ ಸರ್ಕಾರ ರಚನೆಗೆ ಮುಹೂರ್ತ ಫಿಕ್ಸ್ ಆಗಿದೆ. ಚಂದ್ರಬಾಬು ನಾಯ್ಡು ಜೂನ್ 12 ರಂದು ಸಂಜೆ 4.55ಕ್ಕೆ ಆಂಧ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಭಾನುವಾರ ಸಂಜೆ ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಿ ರಾಜ್ಯಕ್ಕೆ ಮರಳಿದ ಬಳಿಕ ರಾಜಕೀಯ ಗರಿಗೆದರಲಿದೆ. ಹೊಸ ಸಂಪುಟ ಸರ್ಕಸ್ ಶುರುವಾಗಲಿದ್ದು, ಪವನ್ ಕಲ್ಯಾಣ್ಗೆ ಹೊಸ ಸರ್ಕಾರದಲ್ಲಿ ಯಾವ ಸ್ಥಾನ ಸಿಗಲಿದೆ ಕುತೂಹಲ ಮನೆ ಮಾಡಿದೆ.
ಇದನ್ನೂ ಓದಿ:ಅಯೋಧ್ಯೆಯಲ್ಲಿ ಬಿಜೆಪಿಗೆ ಮುಖಭಂಗ.. ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಸ್ಥಳೀಯ ನಿವಾಸಿಗಳು..!
ವಿಜಯವಾಡದಲ್ಲಿ ಜಗನ್ ಆಪ್ತರ ಮನೆ ಮೇಲೆ ದಾಳಿ!
ಮತದ ಆಟ ಮುಗಿದ ಬಳಿಕ ಬೇಟೆ ಶುರುವಾಗಿದೆ. ಮತದಾನದ ದಿನದಿಂದ ಆಂಧ್ರದಲ್ಲಿ ಹಿಂಸಾಚಾರ ನಿಲ್ಲುತ್ತಲೇ ಇಲ್ಲ.. ಫಲಿತಾಂಶದ ನಂತ್ರವಂತೂ ನಿತ್ಯ ಘರ್ಷಣೆ ಸಾಮಾನ್ಯವಾಗಿದೆ.. ವಿಜಯವಾಡದಲ್ಲಿ ರಾಜಕೀಯ ಹಿಂಸಾಚಾರ ಭುಗಿಲೆದ್ದಿದ್ದು, ವೈಎಸ್ಆರ್ ಪಾರ್ಟಿಯ ಕೊಡಲಿ ನಾಣಿ ಮತ್ತು ವಲ್ಲಭನೇನಿ ವಂಶಿ ಅವರ ಮನೆಗಳ ಮೇಲೆ ಮೊಟ್ಟೆ, ಕಲ್ಲುಗಳನ್ನ ತೂರಲಾಗಿದೆ. ಕಾರುಗಳು ಜಖಂ ಆಗಿವೆ.. ಕಿಡಿಗೇಡಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಸಹ ಮಾಡಿದ್ದಾರೆ.. ಇದೇ ವೇಳೆ, ಪೊಲೀಸರನ್ನೂ ಸಹ ಬೆದರಿಸುವ ಕೆಲಸ ಆಗಿದೆ.. ದೇವಿನೇನಿ ಅವಿನಾಶ ನಿವಾಸಕ್ಕೆ ಭಾರೀ ಪೊಲೀಸ್ ಭದ್ರತೆ ನೀಡಲಾಗಿದೆ. ಮನೆ ಸುತ್ತ ತಂತಿ ಬೇಲೆ ಹಾಕಲಾಗಿದೆ. ಗರದಲ್ಲಿ ಅರೆಸೇನಾ ಪಡೆಯನ್ನೂ ನಿಯೋಜಿಸಲಾಗಿದೆ.
ಇದನ್ನೂ ಓದಿ:IND vs PAK: ಭಾರತದ ಈ ಆಟಗಾರ ಅಂದರೆ ಪಾಕಿಸ್ತಾನ ಬೆಚ್ಚಿಬೀಳೋದು ಯಾಕೆ..?
ಆಂಧ್ರದಲ್ಲಿ ಹಿಂಸಾಚಾರ ಸಂಬಂಧ ಟಿಡಿಪಿ ವರಿಷ್ಠ ನಾಯ್ಡು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.. ವೈಎಸ್ಆರ್ಪಿ ಪ್ರಚೋದನೆ ಬಗ್ಗೆ ಎಚ್ಚರದಿಂದಿದ್ದು ಸಂಯಮದಿಂದ ವರ್ತಿಸಿ ಅಂತ ಸಲಹೆ ನೀಡಿದ್ದಾರೆ.. ಆದ್ರೆ, ವೈಎಸ್ ಜಗನ್ ಮಾತ್ರ ಟಿಡಿಪಿ ವಿರುದ್ಧ ಗುಡುಗಿದ್ದಾರೆ. ಪ್ರಜಾಪ್ರಭುತ್ವಕ್ಕೆ ಕೊನೆಗಾಲ ಬಂದಿದೆ. ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ. ಒಟ್ಟಾರೆ ಆಂಧ್ರದಲ್ಲಿ ರಾಜಕೀಯ ಹಿಂಸಾಚಾರ ಶುರುವಾಗಿದ್ದು, ಉಭಯ ಪಕ್ಷಗಳ ನಾಯಕರು ಮಧ್ಯಪ್ರವೇಶಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ