newsfirstkannada.com

ಚುನಾವಣಾ ಫಲಿತಾಂಶ ಬೆನ್ನಲ್ಲೇ ಆಂಧ್ರದಲ್ಲಿ ಅಲ್ಲೋಲ ಕಲ್ಲೋಲ.. ಜಗನ್ ಆಪ್ತರ ಮನೆ ಮೇಲೆ ಅಟ್ಯಾಕ್.. ಭುಗಿಲೆದ್ದ ಹಿಂಸಾಚಾರ..!

Share :

Published June 8, 2024 at 6:55am

    ಆಂಧ್ರದಲ್ಲಿ ಹೊಸ ಸರ್ಕಾರ ರಚನೆಗೆ ಮುಹೂರ್ತ..!

    ಜೂನ್​ 12ರಂದು ಚಂದ್ರಬಾಬು ನಾಯ್ಡು ಪ್ರಮಾಣ

    ಕಲ್ಲು, ಮೊಟ್ಟೆ ದಾಳಿ, ಪೊಲೀಸರ ಮೇಲು ಅಟ್ಯಾಕ್​​!

ಅತ್ತ ಮೋದಿ ಪ್ರಮಾಣ ವಚನದ ಬಳಿಕ ಇತ್ತ ಆಂಧ್ರದಲ್ಲೂ ಹೊಸ ಸರ್ಕಾರವೂ ಅಸ್ತಿತ್ವಕ್ಕೆ ಬರ್ತಿದೆ. ಬುಧವಾರ ಚಂದ್ರಬಾಬು ನಾಯ್ಡು 4ನೇ ಬಾರಿ ಸಿಂಹಾಸನ ಏರ್ತಿದ್ದು, ಹೊಸ ದಾಖಲೆ ಬರೀತಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ಭುಗಿಲೆದ್ದಿದೆ.
ಆಂಧ್ರದಲ್ಲಿ ಸಂಪ್ರದಾಯದಂತೆ ಅಧಿಕಾರ ಪಲ್ಟಿಯಾಗಿದೆ. ತೆಲುಗು ದೇಶಂ ಪಾರ್ಟಿ ಅಧಿಕಾರದ ಗದ್ದುಗೆ ಏರಿದೆ.. ಜಗನ್​​ ಪಕ್ಷವನ್ನ ಪುಡಿಗಟ್ಟಿದ ಟಿಡಿಪಿ, ಮತ್ತೊಮ್ಮೆ ತೆಲುಗು ನಾಡಿನಲ್ಲಿ ಅಧಿಕಾರ ಪಡೆದಿದೆ. ನಾಲ್ಕನೇ ಬಾರಿ ಚಂದ್ರಬಾಬು ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯಲಿದ್ದಾರೆ.

ಆಂಧ್ರದಲ್ಲಿ ಹೊಸ ಸರ್ಕಾರ ರಚನೆಗೆ ಮುಹೂರ್ತ!
ಆಂಧ್ರಪ್ರದೇಶದಲ್ಲಿ ಹೊಸ ಸರ್ಕಾರ ರಚನೆಗೆ ಮುಹೂರ್ತ ಫಿಕ್ಸ್​ ಆಗಿದೆ. ಚಂದ್ರಬಾಬು ನಾಯ್ಡು ಜೂನ್ 12 ರಂದು ಸಂಜೆ 4.55ಕ್ಕೆ ಆಂಧ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಭಾನುವಾರ ಸಂಜೆ ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಿ ರಾಜ್ಯಕ್ಕೆ ಮರಳಿದ ಬಳಿಕ ರಾಜಕೀಯ ಗರಿಗೆದರಲಿದೆ. ಹೊಸ ಸಂಪುಟ ಸರ್ಕಸ್​​​ ಶುರುವಾಗಲಿದ್ದು, ಪವನ್​​ ಕಲ್ಯಾಣ್​​ಗೆ ಹೊಸ ಸರ್ಕಾರದಲ್ಲಿ ಯಾವ ಸ್ಥಾನ ಸಿಗಲಿದೆ ಕುತೂಹಲ ಮನೆ ಮಾಡಿದೆ.

ಇದನ್ನೂ ಓದಿ:ಅಯೋಧ್ಯೆಯಲ್ಲಿ ಬಿಜೆಪಿಗೆ ಮುಖಭಂಗ.. ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಸ್ಥಳೀಯ ನಿವಾಸಿಗಳು..!

ವಿಜಯವಾಡದಲ್ಲಿ ಜಗನ್​ ಆಪ್ತರ ಮನೆ ಮೇಲೆ ದಾಳಿ!
ಮತದ ಆಟ ಮುಗಿದ ಬಳಿಕ ಬೇಟೆ ಶುರುವಾಗಿದೆ. ಮತದಾನದ ದಿನದಿಂದ ಆಂಧ್ರದಲ್ಲಿ ಹಿಂಸಾಚಾರ ನಿಲ್ಲುತ್ತಲೇ ಇಲ್ಲ.. ಫಲಿತಾಂಶದ ನಂತ್ರವಂತೂ ನಿತ್ಯ ಘರ್ಷಣೆ ಸಾಮಾನ್ಯವಾಗಿದೆ.. ವಿಜಯವಾಡದಲ್ಲಿ ರಾಜಕೀಯ ಹಿಂಸಾಚಾರ ಭುಗಿಲೆದ್ದಿದ್ದು, ವೈಎಸ್​​​ಆರ್​​​ ಪಾರ್ಟಿಯ ಕೊಡಲಿ ನಾಣಿ ಮತ್ತು ವಲ್ಲಭನೇನಿ ವಂಶಿ ಅವರ ಮನೆಗಳ ಮೇಲೆ ಮೊಟ್ಟೆ, ಕಲ್ಲುಗಳನ್ನ ತೂರಲಾಗಿದೆ. ಕಾರುಗಳು ಜಖಂ ಆಗಿವೆ.. ಕಿಡಿಗೇಡಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್​ ಸಹ ಮಾಡಿದ್ದಾರೆ.. ಇದೇ ವೇಳೆ, ಪೊಲೀಸರನ್ನೂ ಸಹ ಬೆದರಿಸುವ ಕೆಲಸ ಆಗಿದೆ.. ದೇವಿನೇನಿ ಅವಿನಾಶ ನಿವಾಸಕ್ಕೆ ಭಾರೀ ಪೊಲೀಸ್​​​ ಭದ್ರತೆ ನೀಡಲಾಗಿದೆ. ಮನೆ ಸುತ್ತ ತಂತಿ ಬೇಲೆ ಹಾಕಲಾಗಿದೆ. ಗರದಲ್ಲಿ ಅರೆಸೇನಾ ಪಡೆಯನ್ನೂ ನಿಯೋಜಿಸಲಾಗಿದೆ.

ಇದನ್ನೂ ಓದಿ:IND vs PAK: ಭಾರತದ ಈ ಆಟಗಾರ ಅಂದರೆ ಪಾಕಿಸ್ತಾನ ಬೆಚ್ಚಿಬೀಳೋದು ಯಾಕೆ..?

ಆಂಧ್ರದಲ್ಲಿ ಹಿಂಸಾಚಾರ ಸಂಬಂಧ ಟಿಡಿಪಿ ವರಿಷ್ಠ ನಾಯ್ಡು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.. ವೈಎಸ್​​ಆರ್​ಪಿ ಪ್ರಚೋದನೆ ಬಗ್ಗೆ ಎಚ್ಚರದಿಂದಿದ್ದು ಸಂಯಮದಿಂದ ವರ್ತಿಸಿ ಅಂತ ಸಲಹೆ ನೀಡಿದ್ದಾರೆ.. ಆದ್ರೆ, ವೈಎಸ್​​ ಜಗನ್​ ಮಾತ್ರ ಟಿಡಿಪಿ ವಿರುದ್ಧ ಗುಡುಗಿದ್ದಾರೆ. ಪ್ರಜಾಪ್ರಭುತ್ವಕ್ಕೆ ಕೊನೆಗಾಲ ಬಂದಿದೆ. ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ. ಒಟ್ಟಾರೆ ಆಂಧ್ರದಲ್ಲಿ ರಾಜಕೀಯ ಹಿಂಸಾಚಾರ ಶುರುವಾಗಿದ್ದು, ಉಭಯ ಪಕ್ಷಗಳ ನಾಯಕರು ಮಧ್ಯಪ್ರವೇಶಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚುನಾವಣಾ ಫಲಿತಾಂಶ ಬೆನ್ನಲ್ಲೇ ಆಂಧ್ರದಲ್ಲಿ ಅಲ್ಲೋಲ ಕಲ್ಲೋಲ.. ಜಗನ್ ಆಪ್ತರ ಮನೆ ಮೇಲೆ ಅಟ್ಯಾಕ್.. ಭುಗಿಲೆದ್ದ ಹಿಂಸಾಚಾರ..!

https://newsfirstlive.com/wp-content/uploads/2024/06/CHNADRABAABU-NAIDU.jpg

Load More