ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ.. ದರ್ಶನ್​ ಅಭಿಮಾನಿಗಳಿಂದ 9 ಕ್ವಿಂಟಾಲ್ ಪ್ರಸಾದ ವಿತರಣೆ

author-image
Ganesh
Updated On
ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ.. ದರ್ಶನ್​ ಅಭಿಮಾನಿಗಳಿಂದ 9 ಕ್ವಿಂಟಾಲ್ ಪ್ರಸಾದ ವಿತರಣೆ
Advertisment
  • ಆಷಾಢ ಹಿನ್ನೆಲೆಯಲ್ಲಿ ಚಾಮುಂಡಿ ದೇವಿಗೆ ವಿಶೇಷ ಪೂಜೆ
  • ಸಿನಿಮಾ ತಾರೆಯರು, ರಾಜಕೀಯ ಗಣ್ಯರಿಂದ ದರ್ಶನ
  • ದರ್ಶನ್, ಚಿಕ್ಕಣ್ಣ, ಡಾಲಿ ಇನ್ನೂ ಯಾರೆಲ್ಲ ಬಂದಿದ್ದರು..?

ಮೈಸೂರು: ಆಷಾಢ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ ಹರಿದು ಬಂದಿದೆ. ಸಾವಿರಾರು ಭಕ್ತರು ದೇವಿಯ ಆಶೀರ್ವಾದ ಪಡೆಯಲು ಬರುತ್ತಿದ್ದಾರೆ. ಸಿನಿಮಾ ತಾರೆಯರು, ರಾಜಕೀಯ ನಾಯಕರು ಸೇರಿದಂತೆ ಗಣ್ಯರು ಕೂಡ ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.

ಯಾರೆಲ್ಲ ಆಶೀರ್ವಾದ ಪಡೆದರು..?

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕುಟಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಬಂದು ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದುಕೊಂಡರು. ಇನ್ನು ಕೃಷಿ ಸಚಿವ ಚಲವರಾಯಸ್ವಾಮಿ ಹಾಗೂ ಮಾಜಿ ಸಚಿವ ಹೆಚ್​​ಡಿ ರೇವಣ್ಣ, ಪುತ್ರ ಸೂರಜ್ ರೇವಣ್ಣ ಕೂಡ ಭೇಟಿ ನೀಡಿದ್ದರು. ದೇವಿಯ ಆಶೀರ್ವಾದ ಪಡೆದು ಮಾತನಾಡಿರುವ ಸಚಿವ ಚಲುವರಾಯಸ್ವಾಮಿ.. ನಾಡಿನ ರೈತರಿಗೆ ಒಳ್ಳೆಯ ಮಳೆ ಬೆಳೆ ಆಗಲಿ ಅಂತ ಬೇಡಿಕೊಂಡಿದ್ದೇನೆ ಎಂದರು. ಚಲವರಾಯಸ್ವಾಮಿ ಕುಟುಂಬ ಸಮೇತ ಆಗಮಿಸಿದ್ದರು. ಸಚಿವರಿಗೆ ಶಾಸಕ ಅನಿಲ್ ಚಿಕ್ಕಮಾದು, ಗಣಿಗ ರವಿ ಸಾಥ್ ನೀಡಿದರು.

ಇದನ್ನೂ ಓದಿ: ಪ್ರಯತ್ನ ವಿಫಲ ಆದರೂ ಪ್ರಾರ್ಥನೆ ವಿಫಲ ಆಗಲ್ಲ -ಸಿಎಂ ಸ್ಥಾನದ ಬಗ್ಗೆ ಡಿಕೆಶಿ ಪಂಚ್..!

publive-image

ದರ್ಶನ್ ದಂಪತಿಯಿಂದ ದೇವಿ ದರ್ಶನ್

ಬೆಳಗ್ಗೆಯೇ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರು. ದರ್ಶನ್ ದಂಪತಿ ಜೊತೆ ಸಹೋದರ ದಿನಕರ್ ತೂಗುದೀಪ ಕೂಡ ಇದ್ದರು. ಪ್ರತಿವರ್ಷ ದರ್ಶನ್​ ಆಷಾಢದಲ್ಲಿ ದೇಗುಲಕ್ಕೆ ಬರುತ್ತಾರೆ. ಆದರೆ, ಕಳೆದ ವರ್ಷ ಜೈಲಿನಲ್ಲಿದ್ದ ಕಾರಣ ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: ಫ್ರೀಡಂ ಪಾರ್ಕ್​​ನಲ್ಲಿ ಅನ್ನದಾತರ ಪ್ರತಿಭಟನೆ.. ಓರ್ವ ರೈತ ಮುಖಂಡ ಹೃದಯಾಘಾತದಿಂದ ನಿಧನ

publive-image

ಪ್ರಸಾದ ವಿತರಣೆ..

ನಟ‌ ದರ್ಶನ್ ಅಭಿಮಾನಿಗಳಿಂದ ಚಾಮುಂಡಿ ಬೆಟ್ಟದ ಸುತ್ತೂರುಮಠದ ಬಳಿ ಪ್ರಸಾದ ವಿತರಣೆ ಮಾಡ್ತಿದ್ದಾರೆ. ಪೂರಿ, ‌ಬಾತು, ಮೊಸರು ಬಜ್ಜಿ, ಕೇಸರಿ ಬಾತು, ಮೈಸೂರು ಪಾಕ್ ವಿತರಣೆ ಮಾಡಿದ್ದಾರೆ. ದರ್ಶನ್ ಅಭಿಮಾನಿ ಬನ್ನೂರಿನ ಮಹೇಂದ್ರ ಸಿಂಗ್ ಕಾಳಪ್ಪ ಅವರಿಂದ ಪ್ರಸಾದ ವಿತರಣೆ ಮಾಡ್ತಿದ್ದಾರೆ. 9 ಕ್ವಿಂಟಲ್ ಬಾತು, ಎರಡು ಸಾವಿರ ಮೈಸೂರು ಪಾಕ್ ವಿತರಣೆ ಮಾಡಿದ್ದಾರೆ. ಮೆಟ್ಟಿಲು ಹತ್ತಿ ಬರುವ ಭಕ್ತರಿಗೆ ಬಾದಾಮಿ ಹಾಲು, ಡ್ರೈಫ್ರೂಟ್ಸ್​ ನೀಡಲಾಗುತ್ತಿದೆ. ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ ರೂಪಾ ಅವರಿಂದ ಈ ಸೇವೆ ನಡೆಯುತ್ತಿದೆ. ಸಾವಿರಾರು ಮಂದಿಗೆ ಡ್ರೈಫ್ರೂಟ್ಸ್, ಬಾದಾಮಿ ‌ಹಾಲನ್ನು ನೀಡುತ್ತಿದ್ದಾರೆ.

publive-image

ಡಾಲಿಯಿಂದ ದೇವಿಯ ದರ್ಶನ..

ನಟ ಡಾಲಿ ಧನಂಜಯ್ ಕೂಡ ಇವತ್ತು ಚಾಮುಂಡಿ ಬೆಟ್ಟಕ್ಕೆ ಬಂದಿದ್ದರು. ನಾಡ ಅಧಿದೇವತೆಯ ದರ್ಶನ ಪಡೆದು ಪುನೀತರಾದರು. ಅದೇ ರೀತಿ ನಟ ಧನ್ವೀರ್, ಹಾಸ್ಯ ಕಲಾವಿದರಾದ ಚಿಕ್ಕಣ್ಣ ಮತ್ತು ಕುರಿ ಪ್ರತಾಪ್ ಕೂಡ ದೇವಿಯ ಕೃಪೆಗೆ ಪಾತ್ರರಾದರು.

ಇದನ್ನೂ ಓದಿ: ಮಹಾಮಳೆಗೆ 63 ಮಂದಿ ಬಲಿ, 400 ಕೋಟಿ ರೂ ಆಸ್ತಿಪಾಸ್ತಿ ನಷ್ಟ.. ಮತ್ತೆ ಭಾರೀ ಮಳೆಯ ಎಚ್ಚರಿಕೆ..

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment