ಕ್ಲಾಸ್​​ ರೂಮ್​​ನಲ್ಲೇ ವಿದ್ಯಾರ್ಥಿ ಜೊತೆ ಮದುವೆ.. ಲೇಡಿ ಪ್ರೊಫೆಸರ್​​ಗೆ ಬಿಗ್​ ಶಾಕ್! ಏನಾಯ್ತು?

author-image
Veena Gangani
Updated On
ಕ್ಲಾಸ್​​ ರೂಮ್​​ನಲ್ಲೇ ವಿದ್ಯಾರ್ಥಿ ಜೊತೆ ಮದುವೆ.. ಲೇಡಿ ಪ್ರೊಫೆಸರ್​​ಗೆ ಬಿಗ್​ ಶಾಕ್! ಏನಾಯ್ತು?
Advertisment
  • ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದ ವಿಡಿಯೋ
  • ತಮಾಷೆಗಾಗಿ ಮಾಡಿದ ವಿಡಿಯೋ, ಲೇಡಿ ಪ್ರೊಫೆಸರ್ ಸಂಕಷ್ಟ
  • ಹಾರ ಬದಲಿಸಿಕೊಂಡು ಹಣೆಗೆ ಸಿಂಧೂರ ಇಟ್ಟಿದ್ದ ಆ ವಿದ್ಯಾರ್ಥಿ

ಸೋಷಿಯಲ್​ ಮೀಡಿಯಾದ ಅನ್ನೋದೆ ಹೀಗೆ. ಯಾವಾಗ, ಯಾವ ವಿಡಿಯೋ ವೈರಲ್​ ಆಗುತ್ತೆ ಅಂತ ಹೇಳೋದಕ್ಕೆ ಕಷ್ಟ. ಆದ್ರೆ ತಮಾಷೆಗಾಗಿ ಮಾಡಿದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗಿ ಭಾರೀ ವಿವಾದಕ್ಕೆ ಕಾರಣವಾಗಿ ಕೆಲಸ ಬಿಡುವ ಸ್ಥಿತಿಗೆ ಬಂದಿದೆ.

ಇದನ್ನೂ ಓದಿ:ಸೀರೆಲಿ ಹುಡುಗಿರ ನೋಡಲೆಬಾರದು.. ಮೈಸೂರ್ ಸಿಲ್ಕ್ ಸೀರೆಗೆ ಈ ಮಾರ್ಡನ್ ಬ್ಲೌಸ್‌ ಡಿಸೈನ್ಸ್ ಟ್ರೈ ಮಾಡಿ ನೋಡಿ!

ಹೌದು, ಪಶ್ಚಿಮ ಬಂಗಾಳದ ಹರಿಂಗರ್ ಕ್ಯಾಂಪಸ್‌ನ ಮೌಲಾನಾ ಅಬುಲ್ ಕಲಾಂ ಆಜಾದ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಕ್ಲಾಸ್​​ನಲ್ಲಿ ವಿವಾಹ ಸಮಾರಂಭದ ವಿಡಿಯೋವೊಂದು ವೈರಲ್ ಆಗಿತ್ತು. ಆದ್ರೆ ಆ ವಿಡಿಯೋ ಆಗಿದ್ದು ಏಕೆಂದರೆ ಲೇಡಿ ಪ್ರೊಫೆಸರ್ ಮತ್ತು ವಿದ್ಯಾರ್ಥಿ ಮದುವೆ ಆಗಿದ್ದರಿಂದ. ಆದರೆ, ಅದರ ಅಸಲಿ ಕತೆ ಬೇರೆಯೇ ಆಗಿತ್ತು.

ವೈರಲ್​ ವಿಡಿಯೋದಲ್ಲಿ ಏನಿದೆ..?

ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬನನ್ನು ಪಾಠ ಹೇಳುವ ಲೇಡಿ ಪ್ರೊಫೆಸರ್ ಮದುವೆ ಆಗಿದ್ದಾರೆ. ಮದುವೆಗೆ ಸಂಬಂಧಿಸಿದಂತೆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿವೆ. ಮದುವೆಗೆ ಇಬ್ಬರು ಸಾಕ್ಷಿಗಳ ಸಹಿಯೊಂದಿಗೆ ವಿಶ್ವವಿದ್ಯಾಲಯದ ಪ್ಯಾಡ್‌ನಲ್ಲಿ ಗಂಡ ಮತ್ತು ಹೆಂಡತಿಯ ಲಿಖಿತ ಒಪ್ಪಂದವಿದೆ ಅನ್ನೋದು ಗಮನಾರ್ಹ.

ಮದುವೆ ಹಿನ್ನೆಲೆಯಲ್ಲಿ ಲೇಡಿ ಪ್ರೊಫೆಸರ್ ವಧುವಿನಂತೆ ಅಲಂಕಾರ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಿದಂತೆ ತೋರುತ್ತದೆ. ಮದುವೆಗೆ ಅವರೊಬ್ಬರೇ ಅಲ್ಲ.. ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ಪ್ರಾಧ್ಯಾಪಕರೂ ಪಾಲ್ಗೊಂಡಿದ್ದರು. ಮದುಮಗ ವಿದ್ಯಾರ್ಥಿಯು ಶಿಕ್ಷಕಿಯ ಹಣೆಗೆ ಸಿಂಧೂರ ಇಟ್ಟಿದ್ದಾನೆ. ಮಂಡಿಯೂರಿ ಕುಳಿತು ಗುಲಾಬಿ ಹೂವನ್ನು ನೀಡಿದ್ದ. ಇದೇ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ವಿಡಿಯೊ ಹರಿದಾಡುತ್ತಿದ್ದಂತೆ ವಿವಿ ಅಧಿಕಾರಿಗಳು ತನಿಖೆಗೆ ಆದೇಶಿಸಿಸಿದ್ದರು. ಅಲ್ಲದೇ ಪ್ರಾಧ್ಯಾಪಕಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ್ದರು. ಆದರೆ ಇದೀಗ ವೈರಲ್ ಆಗಿರೋ ವಿಡಿಯೋಯಿಂದ ಮನನೊಂದಿರುವ ಆ ಪ್ರಾಧ್ಯಾಪಕಿ, ಇದೀಗ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ.


">January 30, 2025

ನಿಜ, ಫೆಬ್ರುವರಿ 1ರಂದು ಕುಲಸಚಿವರಿಗೆ ಇಮೇಲ್ ಮೂಲಕ ರಾಜೀನಾಮೆ ಪತ್ರ ರವಾನಿಸಿರುವ ಪ್ರಾಧ್ಯಾಪಕಿ ಘಟನೆಯ ನಂತರ ನಡೆದ ವಿದ್ಯಮಾನಗಳು ಮನಸ್ಸಿಗೆ ನೋವುಂಟು ಮಾಡಿವೆ. ಹಾಗಾಗಿ ರಾಜೀನಾಮೆ ನೀಡುತ್ತಿದ್ದೇನೆ. ಐದು ವರ್ಷ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿರುವುದಕ್ಕೆ ತೃಪ್ತಿ ಇದೆ ಎಂದು ತಿಳಿಸಿದ್ದಾರೆ. ಇದೊಂದು ಮನಸ್ಸಿಗೆ ಸಂಬಂಧಿಸಿದ ವಿಷಯ ವಸ್ತು ಹೊಂದಿರುವ ನಾಟಕದ ದೃಶ್ಯವಾಗಿದೆ. ಪಠ್ಯದ ಭಾಗವಾಗಿ ಈ ಸನ್ನಿವೇಶವನ್ನು ಸೃಷ್ಟಿಲಾಗಿತ್ತೇ ಹೊರತು ಯಾವುದೂ ನಿಜವಲ್ಲ. ಆಂತರಿಕ ದಾಖಲೆಗಾಗಿ ವಿಡಿಯೊವನ್ನು ಚಿತ್ರೀಕರಿಸಲಾಗಿತ್ತು, ಆದರೆ ಅದು ಸೋರಿಕೆಯಾಗಿದೆ ಎಂದಿದ್ದಾರೆ. ಘಟನೆಯ ತನಿಖೆ ಮುಗಿಯುವವರೆಗೆ ಪ್ರಾಧ್ಯಾಪಕಿಗೆ ರಜೆಯ ಮೇಲೆ ತೆರಳುವಂತೆ ಹಾಗೂ ವಿದ್ಯಾರ್ಥಿಗೆ ತರಗತಿಗೆ ಹಾಜರಾಗದಂತೆ ವಿವಿ ಅಧಿಕಾರಿಗಳು ಸೂಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment