/newsfirstlive-kannada/media/post_attachments/wp-content/uploads/2025/02/IIT-BABA.jpg)
ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ಕಾದು ಕುಳಿತಿದ್ದಾರೆ. ಎರಡೇ ದಿನಗಳಲ್ಲಿ ಬಹುನಿರೀಕ್ಷಿತ ಭಾರತ ಪಾಕಿಸ್ತಾನ ಪಂದ್ಯ ಶುರುವಾಗಲಿದೆ. ಫೆಬ್ರವರಿ 23ರಂದು ಬದ್ಧ ವೈರಿಗಳು ದುಂಬೈ ಅಂಗಳದಲ್ಲಿ ಕಾದಾಡಲಿದ್ದಾರೆ. ಈಗಾಗಲೇ ಬಾಂಗ್ಲಾದೇಶವನ್ನು ಮಣ್ಣು ಮುಕ್ಕಿಸಿದ ಉತ್ಸಾಹದಲ್ಲಿರುವ ಟೀಂ ಇಂಡಿಯಾ ಪಾಕ್​ ತಂಡವನ್ನು ಮಣಿಸುವ ವಿಶ್ವಾಸದಲ್ಲಿದ್ದಾರೆ. ಆದ್ರೆ ಕುಂಭಮೇಳದ ಖ್ಯಾತಿಯ ಐಐಟಿ ಬಾಬಾ ಹೇಳಿದ ಭವಿಷ್ಯವನ್ನು ಕೇಳಿ ಕ್ರಿಕೆಟ್ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.
ಐಐಟಿ ಬಾಬಾ ಎಂದೇ ಖ್ಯಾತಿ ಪಡೆದಿರುವ ಅಭಯ ಸಿಂಗ್​ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಅಲ್ಲಿ ವಿಶ್ವ ಚಾಂಪಿಯನ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡದ ಪಂದ್ಯದ ಫಲಿತಾಂಶ ಏನಾಗಲಿದೆ ಎಂದು ಪ್ರಶ್ನೆ ಕೇಳಿದಾಗ ಈ ಬಾರಿ ಪಾಕಿಸ್ತಾನ ತಂಡ ಗೆಲ್ಲಲಿದೆ ಎಂದು ಹೇಳಿದ್ದಾರೆ.
बाबा जी को वास्तविक रूप से भारत में चर्चित बने रहने का मार्ग मिल चुका है .....
Baba Bloody phool 🌻🤯#iitbaba#trends#ChampionsTrophy2025#INDvsPAK#CricketFever#indvsbanpic.twitter.com/AhWoSNGjZv— दद्दा का मल्टीवर्स हब (@multiversehubs) February 20, 2025
ಐಐಟಿ ಬಾಬಾರ ಈ ಒಂದು ಸಂದರ್ಶನದ ವಿಡಿಯೋ ಸದ್ಯ ವೈರಲ್​ ಆಗಿದೆ. ಪಾಕ್ ಭಾರತದ ಪಂದ್ಯದ ಬಗ್ಗೆ ಮಾತನಾಡಿದ ಅಭಯ ಸಿಂಗ್, ನಾನು ಈ ಹಿಂದೆಯೇ ಹೇಳಿದ್ದೇನೆ, ಭಾರತ ಈ ಬಾರಿ ಗೆಲ್ಲುವುದಿಲ್ಲ ಎಂದು. ಈಗಲೂ ಅದನ್ನೇ ಹೇಳುತ್ತಿದ್ದೇನೆ ಈ ಬಾರಿ ಭಾರತ ಗೆಲ್ಲುವುದಿಲ್ಲ ಅಂತ. ದೇವರು ದೊಡ್ಡವನೋ ನೀವು ದೊಡ್ಡವರೋ ಎಂದು ಸಂದರ್ಶಕನನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:₹600000000 ಜೀವನಾಂಶ.. ವಿಚ್ಛೇದನದ ಬೆನ್ನಲ್ಲೇ ಯಜುವೇಂದ್ರ ಚಹಲ್‌ಗೆ ಬಿಗ್ ಶಾಕ್ ಕೊಟ್ಟ ಧನುಶ್ರೀ!
ಈ ಒಂದು ವಿಡಿಯೋ ನೋಡಿದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಐಐಟಿ ಬಾಬಾ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಭಾರತದಲ್ಲಿ ನಾನು ಚರ್ಚಿತ ವಿಷಯವಾಗಿ ಹೇಗೆ ಇರಬೇಕು ಎಂಬ ವಾಸ್ತವಿಕತೆ ಬಾಬಾಗೆ ಈಗ ಅರಿವಾದಂತಾಗಿದೆ ಎಂದು ಕೆಲವರು ಹೇಳಿದ್ರೆ, ಇನ್ನೂ ಕೆಲವರು ಅತೀಯಾಗಿ ಓದುವುದು ಕೂಡ ಒಂದು ಅಪಾಯಕಾರಿ ಕಾರ್ಯ ಎಂದು ಕಾಲೆಳೆಯುತ್ತಿದ್ದಾರೆ. ಇನ್ನು ಕೆಲವರು ಇವರು ಕರ್ಮದಲ್ಲಿ ನಂಬಿಕೆಯನ್ನಿಟ್ಟಿದ್ದಾರೆ. ನಾವು ರೋಹಿತ್ ಶರ್ಮ ಮೇಲೆ ನಂಬಿಕೆಯನ್ನಿಟ್ಟಿದ್ದೇವೆ ಎಂದು ಕಾಲೆಳೆದಿದ್ದಾರೆ.
ಈ ಐಐಟಿ ಬಾಬಾ ಯಾರು ಎಂಬುದು ಬಹುತೇಕ ಜನರಿಗೆ ತಿಳಿದಿದೆ. ಐಐಟಿ ಬಾಂಬೆಯಲ್ಲಿ ಪದವಿ ಪಡೆದ ಇವರು. ಮುಂದೆ ಕೆನಡಾದಲ್ಲಿ ಒಂದಿಷ್ಟು ವರ್ಷ ನೌಕರಿ ಮಾಡಿ ಲೌಕಿಕ ಬದುಕಿನ ನಂಟು ಸಾಕು ಎಂದು ನಾಗಾಸಾಧು ಆಗಿ ಬದಲಾದವರು. ಇವರ ಅಸಲಿ ಹೆಸರು ಅಭಯ್ ಸಿಂಗ್​. ಮಹಾಕುಂಭಮೇಳದಲ್ಲಿ ಪ್ರಪಂಚಕ್ಕೆ ಪರಿಚಯವಾದ ಇವರು ಐಐಟಿ ಬಾಬಾ ಎಂತಲೇ ಖ್ಯಾತಿಯನ್ನು ಪಡೆದವರು .
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us