ಭವಿಷ್ಯದಲ್ಲಿ ಬದಲಾಗಲಿದೆ ಗಡಿಯಾರ, ದಿನಕ್ಕೆ 25 ಗಂಟೆ! ಅಚ್ಚರಿ ವಿಚಾರ ಬಹಿರಂಗ..!

author-image
Ganesh
Updated On
ಭವಿಷ್ಯದಲ್ಲಿ ಬದಲಾಗಲಿದೆ ಗಡಿಯಾರ, ದಿನಕ್ಕೆ 25 ಗಂಟೆ! ಅಚ್ಚರಿ ವಿಚಾರ ಬಹಿರಂಗ..!
Advertisment
  • ವಿಜ್ಞಾನಿಗಳ ಪ್ರಕಾರ ದಿನಕ್ಕೆ ಇನ್ನೊಂದು ಗಂಟೆ ಸೇರಿಸಬೇಕು
  • ಈ ಬದಲಾವಣೆಗೆ ಅಸಲಿ ಕಾರಣ ಏನು ಅಂತಾ ಗೊತ್ತಾ?
  • 200 ಮಿಲಿಯನ್ ವರ್ಷಗಳ ನಂತರ ಭೂಮಿಯಲ್ಲಿ ಏನಾಗಲಿದೆ?

ಒಂದು ದಿನದಲ್ಲಿ 24 ಗಂಟೆಗಳು! ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಭವಿಷ್ಯದಲ್ಲಿ ಈ ಸಂಖ್ಯೆ ಬದಲಾಗುತ್ತದೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ.

ವಿಜ್ಞಾನಿಗಳ ಪ್ರಕಾರ ದಿನಕ್ಕೆ ಇನ್ನೊಂದು ಗಂಟೆ ಸೇರಿಸಬೇಕಾಗುತ್ತದೆ. ಅಂದರೆ ದಿನಕ್ಕೆ 25 ಗಂಟೆ ಆಗಲಿದೆ. ಜರ್ಮನಿಯ ಮ್ಯೂನಿಚ್‌ನ ತಾಂತ್ರಿಕ ವಿಶ್ವವಿದ್ಯಾಲಯ (Munich technical university) ಮತ್ತು ಅಮೆರಿಕದ ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನ ಮಾಡಿದ್ದಾರೆ. ಅದರಲ್ಲಿ ದಿನಕ್ಕೆ 25 ಗಂಟೆ ಆಗುವ ಬಗ್ಗೆ ತಿಳಿಸಿದ್ದಾರೆ. ಭೂಮಿಯ ತಿರುಗುವಿಕೆಯು ಕ್ರಮೇಣ ನಿಧಾನಗತಿಯಲ್ಲಿ ಸಾಗಲಿದೆ. ಇದರಿಂದ ದಿನದ ಗಂಟೆಯಲ್ಲಿ ಒಂದು ತಾಸು ಹೆಚ್ಚಳ ಆಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಫೋನ್ ಖರೀದಿಸೋರಿಗೆ ಗುಡ್​ನ್ಯೂಸ್​.. ಈ ವಾರ 6 ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಬರ್ತಿವೆ..!

ಈ ಬದಲಾವಣೆಗೆ ಕಾರಣ.. ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರ ಪ್ರತಿ ವರ್ಷ ಸರಿಸುಮಾರು 3.8 ಸೆಂಟಿಮೀಟರ್‌ಗಳಷ್ಟು ದೂರ ಸರಿಯುತ್ತಿದ್ದಾನೆ. ಇದರಿಂದ ಭೂಮಿ ಮತ್ತು ಚಂದ್ರನ ನಡುವಿನ ಗುರುತ್ವಾಕರ್ಷಣ ಬಲಗಳಲ್ಲಿ ಬದಲಾವಣೆ ಆಗಲಿದೆ. ಚಂದ್ರನ ಪ್ರಭಾವದಿಂದಾಗಿ ಸಾಗರಗಳಲ್ಲಿನ ಉಬ್ಬರವಿಳಿತದಲ್ಲೂ ಬದಲಾಗುತ್ತಿದೆ. ಹವಾಮಾನ ವೈಪರೀತ್ಯದಿಂದ ಭೂಮಿಯ ತಿರುಗುವಿಕೆಯ ವೇಗ ಕಡಿಮೆಯಾಗುತ್ತಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ರಿಂಗ್ ಲೇಸರ್ ಎಂಬ ವಿಶೇಷ ತಂತ್ರಜ್ಞಾನದ ಸಹಾಯದಿಂದ ಸೂಕ್ಷ್ಮ ಬದಲಾವಣೆಗಳನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಆಘಾತಕಾರಿ ಸುದ್ದಿ.. ನಿನ್ನ ಅಕ್ರಮ ಸಂಬಂಧ ಬಹಿರಂಗ ಮಾಡ್ತೀನಿ ಎಂದು ಡೆವಲಪರ್​​​ಗೇ AI ಬ್ಲ್ಯಾಕ್​ಮೇಲ್..!

ಭೂಮಿ ತಿರುಗುವಿಕೆಯ ವೇಗ ನಿಧಾನ ಆಗುತ್ತಿರೋದು ಇದೇ ಮೊದಲಲ್ಲ. ಇದರಿಂದ ದಿನದ ಉದ್ದವೂ ಬದಲಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಸುಮಾರು 1.4 ಶತಕೋಟಿ ವರ್ಷಗಳ ಹಿಂದೆ, ಚಂದ್ರನು ಭೂಮಿಗೆ ಬಹಳ ಹತ್ತಿರದಲ್ಲಿದ್ದ. ಆಗ ಭೂಮಿಯ ತಿರುಗುವಿಕೆ ವೇಗ ಹೆಚ್ಚಾಗಿತ್ತು. ಆಗ ದಿನಕ್ಕೆ ಕೇವಲ 18 ಗಂಟೆಗಳಿದ್ದವು. ನಂತರದ ದಿನಗಳಲ್ಲಿ ಚಂದ್ರನು ಹಿಂದೆ ಸರಿದಂತೆ ಭೂಮಿಯ ತಿರುಗುವಿಕೆಯ ವೇಗ ನಿಧಾನಗೊಂಡಿತು. ಮತ್ತು ದಿನದ ಗಂಟೆಯೂ ಹೆಚ್ಚಾಗಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ. ದಿನಕ್ಕೆ 25 ಗಂಟೆಗಳಾಗುವ ಪ್ರಕ್ರಿಯೆಯು ತಕ್ಷಣವೇ ಸಂಭವಿಸಲ್ಲ. ಈ ಬದಲಾವಣೆಗೆ ಸುಮಾರು 200 ಮಿಲಿಯನ್ ವರ್ಷಗಳನ್ನು ತೆಗೆದುಕೊಳ್ಳಬಹುದು ಅಂತಾ ಅಂದಾಜಿಸಲಾಗಿದೆ.

ಇದನ್ನೂ ಓದಿ: RCB ಅಭಿಮಾನಿಗಳಿಗೆ ಐದು ಖುಷಿಯ ವಿಚಾರಗಳು.. ಪಂಜಾಬ್​ ವಿರುದ್ಧದ ಪಂದ್ಯಕ್ಕೆ ಸಖತ್ ಬೂಸ್ಟ್..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment