ವಿಮಾನ ದುರಂತದ ದಿನ ಈ ನ್ಯೂಸ್​ ಪೇಪರ್​ನಲ್ಲಿ ಸೇಮ್​ ಟು ಸೇಮ್​ ಜಾಹೀರಾತು!

author-image
Bheemappa
Updated On
ವಿಮಾನ ದುರಂತದ ದಿನ ಈ ನ್ಯೂಸ್​ ಪೇಪರ್​ನಲ್ಲಿ ಸೇಮ್​ ಟು ಸೇಮ್​ ಜಾಹೀರಾತು!
Advertisment
  • ಬೆಳಗ್ಗೆ ದಿನ ಪತ್ರಿಕೆಯಲ್ಲಿ ಜಾಹೀರಾತು, ಮಧ್ಯಾಹ್ನ ವಿಮಾನ ದುರಂತ
  • ದುರಂತ ನಡೆಯುವ ಮೊದಲು ಅಂದರೆ ಬೆಳಗ್ಗೆ ಜಾಹೀರಾತು ಪ್ರಕಟ
  • ರಾಜ್ಯದ ದಿನ ಪತ್ರಿಕೆಯಲ್ಲಿ ಬೆಳಗ್ಗೆ ಅಡ್ವಾಟೇಜ್​ಮೆಂಟ್​ ಪ್ರಕಟ ಆಗಿತ್ತು

ಗಾಂಧಿನಗರ: ಅಹಮದಾಬಾದ್​ನಿಂದ ಲಂಡನ್​ನ ಗ್ಯಾಟ್ವಿಕ್​ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್​ ಇಂಡಿಯಾದ ಬೋಯಿಂಗ್-787 ಡ್ರೀಮ್‌ ಲೈನರ್ ವಿಮಾನ ದುರಂತಕ್ಕೆ ಒಳಗಾಗಿದೆ. ಈ ಘಟನೆಯಲ್ಲಿ 242 ಪ್ರಯಾಣಿಕರು ಉಸಿರು ಚೆಲ್ಲಿದ್ದಾರೆ. ಒಬ್ಬರೇ ಒಬ್ಬರು ಮಾತ್ರ ಪ್ರಾಣ ಉಳಿಸಿಕೊಂಡು ಹೊರ ಬಂದಿದ್ದಾರೆ. ವಿಚಿತ್ರ ಎಂದರೆ ಈ ಘಟನೆ ದಿನ ಅಂದಿನ ನ್ಯೂಸ್​ ಪೇಪರ್​ ಒಂದರಲ್ಲಿ ಸೇಮ್ ಜಾಹೀರಾತು ಬಂದಿದೆ.

ಅಹಮದಾಬಾದ್ ಬಳಿ ಏರ್​ ಇಂಡಿಯಾ ಜೂನ್ 12 ರಂದು ಮಧ್ಯಾಹ್ನ 1.39ಕ್ಕೆ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಆದರೆ ಇದು ವಿಚಿತ್ರನೋ ಅಥವಾ ಕಾಕತಾಳೀಯೋ ಎಂಬಂತೆ ಅಂದಿನ ದಿನ ಪತ್ರಿಕೆ ಒಂದರಲ್ಲಿ ಅದೇ ರೀತಿಯ ಜಾಹೀರಾತು ಪ್ರಕಟ ಆಗಿದೆ. ಸದ್ಯ ಇದಕ್ಕೆ ಯಾರು ಟೀಕೆ, ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಘಟನೆ ನಡೆಯುವ ಬೆಳಗ್ಗೆ ಈ ಜಾಹೀರಾತು ಪ್ರಕಟಗೊಂಡಿರುವುದು ಅಚ್ಚರಿ ಮೂಡಿಸಿದೆ ಅಷ್ಟೇ.

ಇದನ್ನೂ ಓದಿ: ಹುಟ್ಟೂರಲ್ಲಿ ಚಿತಾಭಸ್ಮ ಬಿಡು ಎಂದಿದ್ದ ಪತ್ನಿ.. ಕೊನೆ ಆಸೆ ಈಡೇರಿಸಲು ಲಂಡನ್​​ನಿಂದ ಬಂದ ಗಂಡ ದುರಂತ ಅಂತ್ಯ

publive-image

ಜೂನ್ 12ರ ಬೆಳಗ್ಗೆ ಗುಜರಾತ್​ ರಾಜ್ಯಾದ್ಯಂತ ಪ್ರಕಟವಾಗುವ ದಿನಪತ್ರಿಕೆಯೊಂದರ ಮುಖಪುಟ (ಫ್ರಂಟ್​ಪೇಜ್​)ದಲ್ಲಿ ಕಿಡ್​ಜಾನಿಯಾ (KidZania)ದ ಜಾಹೀರಾತು ಪ್ರಕಟವಾಗಿದೆ. ಇದರಲ್ಲಿ ಬಂದಿರುವ ವಿಮಾನಕ್ಕೂ ಏರ್​ ಇಂಡಿಯಾ ಎಂದು ಬರೆಯಲಾಗಿದ್ದು ಕಟ್ಟಡದಿಂದ ಹೊರ ಬಂದಂತೆ ಇದೆ. ಇದು ಬೆಳಗ್ಗೆ ಗುಜರಾತ್​ ರಾಜ್ಯಾದ್ಯಂತ ಪ್ರಕಟವಾಗಿ ಕೆಲವು ಗಂಟೆಗಳಲ್ಲಿ ವಿಮಾನ ಪತನಗೊಂಡಿದೆ.

ಫಾದರ್ಸ್​ ಡೇ ಅಂಗವಾಗಿ ಜೂನ್ 13, 14, 15 ರಂದು ಮಕ್ಕಳು ಹಾಗೂ ಪೋಷಕರಿಗಾಗಿ ಕಾರ್ಯಕ್ರಮಗಳನ್ನು ಕಿಡ್​ಜಾನಿಯಾ ಹಮ್ಮಿಕೊಂಡಿದೆ. 4 ರಿಂದ 16 ವರ್ಷದ ಮಕ್ಕಳಿಗೆ ಒಳಾಂಗಣದಲ್ಲಿ ಕೆಲವು ಕಾರ್ಯಕ್ರಮ ಇದ್ದವು. ಇದರಲ್ಲಿ ಪೈಲಟ್‌ಗಳು, ವೈದ್ಯರು, ಚೆಫ್​ ಮತ್ತು ಎಂಜಿನಿಯರ್‌ಗಳು ಆದಂತೇ ನೈಜ ಅನುಭವ ಮಕ್ಕಳಿಗೆ ಒದಗಿಸಲಾಗುತ್ತಿತ್ತು. ಸದ್ಯ ಇದೊಂದು ಜಾಹೀರಾತು ಅಷ್ಟೇ, ಇದಕ್ಕೂ ವಿಮಾನ ದುರಂತಕ್ಕೂ ಯಾವುದೇ ಹೋಲಿಕೆ ಇಲ್ಲ ಎನ್ನಲಾಗಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment