Video: ರಕ್ತದ ಮಳೆ ಕಂಡು ಬೆಚ್ಚಿ ಬಿದ್ದ ದೇಶ; ಇದು ಪ್ರಪಂಚದ ದೊಡ್ಡ ವಿಸ್ಮಯ ಎಂದ ಜನ

author-image
Gopal Kulkarni
Updated On
Video: ರಕ್ತದ ಮಳೆ ಕಂಡು ಬೆಚ್ಚಿ ಬಿದ್ದ ದೇಶ; ಇದು ಪ್ರಪಂಚದ ದೊಡ್ಡ ವಿಸ್ಮಯ ಎಂದ ಜನ
Advertisment
  • ಈ ದೇಶದ ಸಮುದ್ರ ತಟದಲ್ಲಿ ಸುರಿದ ರಕ್ತದ ಮಳೆ ಕಂಡು ಬೆಚ್ಚಿ ಬಿದ್ದ ಜನರು
  • ಕಣ್ಣು ಹಾಯಿಸಿದಲ್ಲೆಲ್ಲಾ ರಕ್ತ ಹರಿದು ಹೋದಂತೆ ಹೋಯಿತು ಮಳೆಯ ನೀರು!
  • ಈ ಒಂದು ರಕ್ತದ ಮಳೆಗೆ ಅಸಲಿ ಕಾರಣವೇನು? ವಿಜ್ಞಾನಿಗಳು ಹೇಳುವುದೇನು?

ಇರಾನ್​ನ ಸಮುದ್ರ ತೀರದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಒಂದು ರಹಸ್ಯಮಯವಾದ ಘಟನೆ ನೋಡಲು ಅಲ್ಲಿನ ಜನರಿಗೆ ದೊರಕಿದೆ. ಇದು ಪ್ರಪಂಚದ ವಿಸ್ಮಯವೇ ಸರಿ ಎಂದು ಮಾತನಾಡಿಕೊಳ್ಳುವಂತಹ ಘಟನೆಯಿದು. ಈ ಸ್ಥಳದಲ್ಲಿ ರಕ್ತದ ಮಳೆಯಾಗಿದೆ. ಅಕ್ಷರಶಃ ರಕ್ತದಷ್ಟು ಕೆಂಪುಗಟ್ಟಿದ ನೀರು ಇಡೀ ಪ್ರದೇಶದ ತುಂಬಾ ಹರಿದಾಡಿದೆ. ಇದೊಂದು ಪ್ರಕೃತಿಯಲ್ಲಿ ನಡೆದ ವಿಶೇಷ ಘಟನೆ ಎಂದೇ ಕರೆಯಲಾಗುತ್ತಿದೆ. ಈ ಒಂದು ರಕ್ತದ ಮಳೆ ಸ್ಥಳೀಯರನ್ನು ಹಾಗೂ ವಿಜ್ಞಾನಿಗಳನ್ನು ಆಶ್ಚರ್ಯಗೊಳಿಸಿದೆ. ಕಾರಣ ಇಂತಹ ವೈಚಿತ್ರ್ಯಗಳು ನೋಡಲು ಸಿಗುವುದೇ ಅಪರೂಪ ಎನ್ನುತ್ತಿದ್ದಾರೆ.

ಇದನ್ನೂ ಓದಿ:ಜಗತ್ತಿನ ಈ ಒಂದು ಗ್ರಾಮ ಇಂದಿಗೂ ಕೂಡ ಮಳೆಯನ್ನೇ ಕಂಡಿಲ್ಲ? ಯಾವುದು ಹಳ್ಳಿ? ಕಾರಣವೇನು?

ರಕ್ತದ ಮಳೆ ಅಥವಾ ನೆತ್ತರಿನವರ್ಷಧಾರೆ ಒಂದು ಪ್ರಾಕೃತಿಕ ಘಟನೆ ಎಂದು ಹೇಳಲಾಗುತ್ತದೆ. ಮೋಡದಿಂದ ಸುರಿಯುವ ಮಳೆಯ ಬಿಂದುಗಳು ಕೆಂಪು ಗುಲಾಬಿಯ ರೀತಿಯಲ್ಲಿ ಕಂಡು ಬರುತ್ತವೆ. ಇದು ಗಾಳಿಯಲ್ಲಿರುವ ಕೆಂಪು ಸೂಕ್ಷ್ಮಕಣಗಳು ಹಾಗೂ ಧೂಳಿನಕಣಗಳು ಮಳೆಯ ಹನಿಯಲ್ಲಿ ಬೆರೆತಕೊಂಡಾಗ ಇಂತಹ ವಿಶೇಷ ಮಳೆಗಳು ಆಗುತ್ತವೆ ಎಂದು ಹೇಳಲಾಗುತ್ತಿದೆ. ಇದನ್ನೇ ಆಗಸದಿಂದಲೇ ನೇರವಾಗಿ ರಕ್ತದ ಮಳೆಯಾಗಿದೆ ಎಂದು ಜನರು ಗಾಬರಿ ಹಾಗೂ ಆಶ್ಚರ್ಯಕ್ಕೆ ಒಳಗಾಗುತ್ತಾರೆ.

ಇರಾನ್​ನಲ್ಲಿ ಬಿದ್ದ ಈ ಮಳೆಯಿಂದಾಗಿ ಸ್ಥಳೀಯರಲ್ಲಿ ಚಿತ್ರ ವಿಚಿತ್ರ ಮಾತುಗಳು ಕೇಳಿ ಬರುತ್ತಿವೆ. ಕೆಲವರು ಇದು ವಿಶ್ವಕ್ಕೆ ಅಪಶಕುನ, ಮುಂದೆ ಏನೋ ಭಯಂಕರ ಘಟನೆಯೊಂದು ಘಟಿಸುವ ಮುನ್ಸೂಚನೆ ಎಂದು ಹೇಳಿದರೆ. ಇನ್ನು ಕೆಲವರು ಇದು ಪ್ರಕೃತಿಯ ಒಡಲಲ್ಲಿ ಅಡಗಿರುವ ಸಹಸ್ರ ರಹಸ್ಯಗಳಲ್ಲಿ ಇದೂ ಒಂದು ಎಂದು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment